ಮನೆಯ ಹಿತ್ತಲದಲ್ಲಿ ಅರಳಿದ `ರಾತ್ರಿ ರಾಣಿ’: ಕತ್ತಲಲಿ ಪರಿಮಳ ಸೂಸಿ, ಮುಂಜಾನೆ ಮುದುಡಿದ ಬ್ರಹ್ಮ ಕಮಲ

ಜಿಲ್ಲೆ

ಬಾಗಲಕೋಟೆ :ಹೂವು ಅಂದ್ರೆ ಯಾರಿಗೆ ಇಷ್ಟವಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೂವು ಅಂದ್ರೆ ಪಂಚಪ್ರಾಣ, ಕೆಲವು ಹೂವುಗಳು ದಿನಬೆಳಗಾದರೆ ಅರಳಿ ಕೈಗೆ ಸಿಕ್ಕಿಬಿಡ್ರಾವೆ. ಆದ್ರ ಇಲ್ಲೊಂದು ತರಹದ ವಿಶೆಷ ಹೂವು ಇದೆ. ಇದು ಅರಳೋದು ವರ್ಷಕ್ಕೊಮ್ಮೆ ಮಾತ್ರ. ಅದುವೇ `ರಾತ್ರಿ ರಾಣಿ’ ಅಂತಾನೆ ಕರೆಸಿಕೊಳ್ಳುವ ಬ್ರಹ್ಮಕಮಲ.

ಬಾಗಲಕೋಟೆ ಜಿಲ್ಲೆಯರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಶಂಕ್ರೆಪ್ಪ ನರಗುಂದ ಎಂಬುವರ ಮನೆಯ ಕಂಪೌಂಡ್‌ನಲ್ಲಿ 20 ಕ್ಕೂ ಅಧಿಕ ಬ್ರಹ್ಮಕಮಲ ಗಳು ಅರಳಿವೆ. ಈ ಹೂವು ಅರಳುತ್ತವೆ ಎಂಬುದನ್ನು ನೋಡೋದಕ್ಕೆ ಇಡೀ ಮನೆ ಮಂದಿ ತುದಿಗಾಲಲ್ಲಿ ಕುಳಿತಿದ್ದರು. ಕೊನೆಗೂ ಇಡೀ ಮನೆ ಮಂದಿ ತುದಿಗಾಲಲ್ಲಿ ಕುಳಿತಿದ್ದರು.

ರಾತ್ರಿ ನಕ್ಷತ್ರದಂತೆ ಹೊಳೆಯುತ್ತ ಊರ ತುಂಬ ಸುಗಂಧ ಪರಿಮಳ ಸೂಸಿ ಹೊಸ ವಾತಾವರಣ ನಿರ್ಮಿಸಿತು. ಇನ್ನು ಐದು ಜನ ಮುತ್ತೆದೆಯರು ಬಂದು ಬ್ರಹ್ಮಕಮಲಗಳಿಗೆ ಮಾಡಿದರು. ನಂತರ ಮುತ್ತೆದೆಯರಿಗೆ ಅರಿಷಿಣ ಕುಂಕುಮ ಇಟ್ಟು ಉಡಿ ತುಂಬಲಾಗಿದೆ.

 

Leave a Reply

Your email address will not be published.