PSI ಮರು ಪರೀಕ್ಷೆ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕ ವಿಚಾರದಲ್ಲಿ ಮರುಪರೀಕ್ಷೆ ನಡೆಸದಂತೆ ಬಿ ಟಿ ಲಲಿತಾನಾಯಕ್ ಮನವಿ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಆರ್ ಟಿ ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಆ ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದಾಗಲೇ ನಾನು ಹೇಳಿದ್ದೇನೆ. ತನಿಖೆ ಮುಗಿಯಲಿ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಲಲಿತಾ ನಾಯಕ್ ಅವರಿಗೂ ಈ ಸಂಬಂಧ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನೂ ಬೆಂಗಳೂರಿನ ಆರ್ ಟಿ ನಗರದಲ್ಲಿ ಸಿಎಂ ಭೇಟಿಯಾಗಿ ಬಿ ಟಿ ಲಲಿತಾನಾಯಕ್ ಅವರು PSI ಮರು ಪರೀಕ್ಷೆ ನಡೆಸದಂತೆ ಮನವಿ ಮಾಡಿದ್ದರು.

 

Leave a Reply

Your email address will not be published.