ರಥೋತ್ಸವದಲ್ಲಿ ಭಾವೈಕ್ಯತೆಯ ಸಂದೇಶ ಸಾರಿದ ಹಿಂದೂ – ಮುಸ್ಲಿಂ

ಜಿಲ್ಲೆ

ತುಮಕೂರು : ಈ ಊರಿನ ಮುಸ್ಲಿಮರು ಆಂಜನೇಯಸ್ವಾಮಿಯ ರಥ ಎಳೆಯುತ್ತಾರೆ, ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಧಾರ್ಮಿಕ ಭೇದ ಬಾವಗಳಿಲ್ಲದೇ ಸಾಮರಸ್ಯದಿಂದ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ವೈವಿಧ್ಯತೆಯಲ್ಲಿ ಭಾವೈಕ್ಯತೆಯನ್ನು ಈ ಗ್ರಾಮ ಸಾರುತ್ತಿದೆ.ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಭಾವೈಕ್ಯತೆ ಕಾಣಬಹುದಾಗಿದೆ. ರಥೋತ್ಸವ ಜರುವ ದಾರಿಯಲ್ಲಿ ಮಸೀದಿ ದೊರೆಯುತ್ತದೆ.

ಅಲ್ಲಿ ಮುಸ್ಲಿಂ ಬಾಂಧವರು ಆಂಜನೇಯ ಸ್ವಾಮಿಗೆ ವಿಶೇಷ ಅರ್ಚನೆ ಮಾಡಿಸುತ್ತಾರೆ. ಅಲ್ಲದೇ ಆಂಜನೇಯ ಸ್ವಾಮಿ ರಥವನ್ನು ಸಹ ಎಳೆಯತ್ತಾರೆ.ಹಾಗಲವಾಡಿ ಪಾಣೆಗಾರರು ಆಳ್ವಿಕೆ ನಡೆಸಿದ ಐತಿಹಾಸಿಕ ನೆಲೆಯಾಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಹಳೆಯೂರು ಆಂಜನೇಯ ಹಾಗೂ ತಾತಯ್ಯನವರ ಭಾವದ ಸಂಕೇತವಾಗಿ ಈ ಉತ್ಸವ ನೆರವೇರುತ್ತದೆ. ಇಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯ ಆರಾಧನೆ ತಲತಲಾಂತರಗಳಿಂದ ನಡೆದುಕೊಂಡು ಬಂದಿದೆ.

 

Leave a Reply

Your email address will not be published.