ನಡುರಸ್ತೆಯಲ್ಲೇ ಹೊತ್ತಿ ಧಗಧಗಿಸಿ ಉರಿದ ಹೊಯ್ಸಳ ವಾಹನ!

ಬೆಂಗಳೂರು

ಬೆಂಗಳೂರು: ಬೆಂಗಳೂರು ನಗರದಲ್ಲಿ ನಡುರಸ್ತೆಯಲ್ಲೇ ಬಿಎಂಟಿಸಿ ಬಳಿಕ, ಇದೀಗ ಪೊಲೀಸರ ಹೊಯ್ಸಳ ವಾಹನ ಕೂಡ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಉರಿದಿರುವ ಘಟನೆ ನಡೆದಿದೆ

 

ಬೆಂಗಳೂರಿನ ಸಿಟಿ ಮಾರುಕಟ್ಟೆಯ ಬಳಿಯಲ್ಲಿನ ವೃತ್ತದಲ್ಲಿ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯ ಹೊಯ್ಸಳ-79 ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಅದರಲ್ಲಿದ್ದಂತ ಪೊಲೀಸರು ಕೆಳಗೆ ಇಳಿಯುತ್ತಿದ್ದಂತೇ ವಾಹನ ಹೊತ್ತಿ ಉರಿದಿದೆ.

 

 

 

ಈ ಘಟನೆಯನ್ನು ಕಂಡಂತ ಸ್ಥಳೀಯರು, ಕೂಡಲೇ ಹೊಯ್ಸಳ ವಾಹನಕ್ಕೆ ಹೊತ್ತಿಕೊಂಡಿದ್ದಂತ ಬೆಂಕಿಯನ್ನು ನಂದಿಸಿದ್ದಾರೆ. ಆದ್ರೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಹೊಯ್ಸಳ-79 ವಾಹನ ಸುಟ್ಟು ಕರಕಲಾಗಿದೆ.

Leave a Reply

Your email address will not be published.