ಗ್ರಾಮ ಪಂಚಾಯತಿಯಲ್ಲೇ ಪಿಡಿಓ ಕಾಮ ಪುರಾಣ: ಲವ್ವಿಡವ್ವಿ ವಿಡಿಯೋ ವೈರಲ್

ಜಿಲ್ಲೆ

ತುಮಕೂರು: ರಾಜ್ಯದಲ್ಲಿ ರಾಸಲೀಲೆ ಪ್ರಕರಣಗಳು ದಿನ ಕಳೆದಂತೆ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಸರ್ಕಾರಿ ಕಚೇರಿಯನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದರೆ ಅದು ನಾಚಿಕೆಗೇಡಿನ ಸಂಗತಿ. ಇಲ್ಲೊಬ್ಬ ಸದಸ್ಯ ಮಾಡಿರೋ ಕೆಲಸ ನೋಡಿದ್ರೆ ನೀವೆ ಥೂ ಅಂತ ಉಗಿತೀರಾ… ಇಲ್ಲಿನ ಚಿಕ್ಕ ನಾಯಕನ ಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸದಸ್ಯನೊಬ್ಬ ಪಿಡಿಒಗೆ ಮುತ್ತು ಕೊಟ್ಟಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ

ಸಚಿವ ಮಾಧುಸ್ವಾಮಿ ಅವರ ತವರು ಕ್ಷೇತ್ರದಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಪಿಡಿಒ ಕೋಕಿಲಾ ಅವರಿಗೆ ಕಚೇರಿಯಲ್ಲೇ ಪಿಡಿಒ ಕೈ ಹಿಡಿದು ಚುಂಬಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದು ದೃಶ್ಯದಲ್ಲಿ ಪಿಡಿಒ ಅವರ ಕೈ ಹಿಡಿದುಕೊಂಡು ಬಲವಂತವಾಗಿ ಎಳೆದಾಡಿ ಮುತ್ತುಕೊಟ್ಟಿದ್ದಾನೆ. ಕೆಲ ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿದೆ.

Leave a Reply

Your email address will not be published.