ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಎಮ್ಮೆ ಉಳಿಸಲು ಹೋಗಿ ವ್ಯಕ್ತಿ ಸಾವು..!

ಜಿಲ್ಲೆ

ವಿಜಯಪುರ: ಕಳೆದ ಎರಡು ವಾರಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲೂ ಜೋರು ಮಳೆಯಾ ಗುತ್ತಿರೋ ಪರಿಣಾಮ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ಹಳ್ಳದಲ್ಲಿ ಎಮ್ಮೆ ಸಮೇತ ಕೊಚ್ಚಿಕೊಂಡು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಕೋಲ್ಹಾರ ಪಟ್ಟಣದ ಗರಸಂಗಿ ಹಳ್ಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ರೈತ ನಂದಪ್ಪ ಸಂಗಪ್ಪ ಸೊನ್ನಾದ (65) ಎಂದು ಗುರುತಿಸಲಾಗಿದೆ. ತನ್ನ ಜಮೀನು ಪಕ್ಕದ ಹಳ್ಳ ದಂಡೆಯಲ್ಲೇ ನಂದಪ್ಪ ಸಂಗಪ್ಪ ಸೊನ್ನಾದ ಎಮ್ಮೆಗಳನ್ನು ಮೇಯಿಸುತ್ತಿದ್ದರು. ಆಗ ಕಾಲು ಜಾರಿ ನೀರಲ್ಲಿ ಬಿದ್ದ ಮೂರು ಎಮ್ಮೆಗಳು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಎಮ್ಮೆಗಳನ್ನು ಕಾಪಾಡಲು ನೀರಿಗೆ ಇಳಿದ ರೈತ ಅಸುನೀಗಿದ್ದಾರೆ.

Leave a Reply

Your email address will not be published.