
ಇಂದು ಮುಂಜಾನೆಯಿಂದ ಹೆಚ್ಚಾದ ಬಾಂಬ್ ಹಾಗೂ ಗುಂಡಿನ ದಾಳಿ
ಉಕ್ರೇನ್ :ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪರದಾಟ ಮುಂದುವರೆದಿದೆ. ಇಂದು ಮುಂಜಾನೆಯಿಂದ ಬಾಂಬ್ ಹಾಗೂ ಗುಂಡಿನ ದಾಳಿ ಹೆಚ್ಚಾಗಿದೆ. ಬಂಕರ್ಗಳಿಂದ ಹೊರಬರಲು ಜನ ಭಯಪಡುತ್ತಿದ್ದಾರೆ. ಉಕ್ರೇನ್ನ ಖಾರ್ಕೀವ್ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಖಾರ್ಕೀವ್ನ ಮೆಟ್ರೋ ಅಂಡರ್ ಪಾಸ್ ಹಾಗೂ ಬಂಕರ್ಗಳಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಬಿಸ್ಕೇಟ್ ಹಾಗೂ ಬ್ರೆಡ್ ತಿಂದು ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ ಈ ಬಗ್ಗೆ ಕೋಲಾರ ಮೂಲದ ವಿದ್ಯಾರ್ಥಿ ಜೀವನ್ ಎಂಬುವವರು ಮಾಹಿತಿ ನೀಡಿದ್ದಾರೆ.