ದೇಶದಲ್ಲಿ ‘ವರ್ಕ್ ಫ್ರಂ ಹೋಂ’ಗೆ ಹೆಚ್ಚಿದ ಬೇಡಿಕೆ: ಕುತೂಹಲಕಾರಿ ಮಾಹಿತಿ ಹೊರಹಾಕಿದ ವರದಿ

ತಂತ್ರಜ್ಞಾನ

ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಶಾಶ್ವತವಾಗಿ ʼವರ್ಕ್​ ಫ್ರಂ​ ಹೋಮ್‌ʼ​ಕೆಲಸವನ್ನೇ ನೀಡುವ ಕಂಪನಿಗಳನ್ನು ಆಯ್ಕೆ ಮಾಡಲು ಬಯಸುತ್ತಿದ್ದಾರೆ ಎಂಬುದು ವರದಿಯೊಂದರಲ್ಲಿ ಬಯಲಾಗಿದೆ. ಕೋವಿಡ್​ ಸಾಂಕ್ರಾಮಿಕದ ಬಳಿಕ ವರ್ಕ್​ ಫ್ರಂ​ ಹೋಮ್​ ಎಂಬ ವರ್ಕಿಂಗ್​ ಮಾಡೆಲ್​ ಇದೀಗ ಹಾಸು ಹೊಕ್ಕಾಗಿದೆ. Naukri.com ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ ಜುಲೈನಿಂದ ಇಲ್ಲಿಯವರೆಗೆ 93 ಸಾವಿರ ಖಾಯಂ ಹಾಗೂ ತಾತ್ಕಾಲಿಕ ರಿಮೋಟ್​​ ಜಾಬ್​ಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ 22 ಪ್ರತಿಶತ ಕೆಲಸಗಳು ರಿಮೋಟ್​ ಜಾಬ್​ಗಳೇ ಆಗಿವೆ ಎಂದು ಹೇಳಿದೆ.

ಕಳೆದ ಆರು ತಿಂಗಳಲ್ಲಿ Naukri.com ಭಾರತೀಯ ಉದ್ಯೋಗಾಕಾಂಕ್ಷಿಗಳು ಶಾಶ್ವತ ಹಾಗೂ ತಾತ್ಕಾಲಿಕ ರಿಮೋಟ್​ ಜಾಬ್ಗಾಗಿ 32 ಲಕ್ಷ ಉದ್ಯೋಗ ಹುಡುಕಾಟವನ್ನು ಮಾಡಿದ್ದಾರೆ. ಇದರಲ್ಲಿ 57 ಪ್ರತಿಶತ ಮಂದಿ ಶಾಶ್ವತ ರಿಮೋಟ್​ ಜಾಬ್​​ಗಳಿಗಾಗಿಯೇ ಹುಡುಕಾಟ ನಡೆಸಿದ್ದಾರೆ. ಅದರಲ್ಲೂ ಕಳೆದ ವರ್ಷ ಡಿಸೆಂಬರ್​ ತಿಂಗಳೊಂದರಲ್ಲೇ 3.5 ಲಕ್ಷ ಮಂದಿ ರಿಮೋಟ್​ ಜಾಬ್​ಗಾಗಿ ಹುಡುಕಾಟ ಮಾಡಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಬಳಿಕ ಈ ವರ್ಕ್​ ಫ್ರಂ​ ಹೋಮ್​ ಕಾರ್ಯ ವಿಧಾನವು ಹೆಚ್ಚು ಬಳಕೆಗೆ ಬಂದಿದೆ. ಅಲ್ಲಲ್ಲಿ ರಿಮೋಟ್​ ಜಾಬ್​ ಅಂದರೆ ಶಾಶ್ವತ ವರ್ಕ್​ ಫ್ರಂ​ ಹೋಂನಂತಹ ಕಾರ್ಯವಿಧಾನವೂ ತಲೆ ಎತ್ತಿದೆ. ಸಾಮಾನ್ಯವಾಗಿ ದೊಡ್ಡ ಮತ್ತು ಸಣ್ಣ ಕಂಪನಿಗಳು ಎಲ್ಲಾ ಮೂರು ರೀತಿಯ ವರ್ಕಿಂಗ್​ ಮಾಡೆಲ್​ಗಳನ್ನು ಹೊಂದಿದೆ. ಶಾಶ್ವತ ಉದ್ಯೋಗ, ತಾತ್ಕಾಲಿಕ ವರ್ಕ್​ ಫ್ರಂ​ ಹೋಮ್​ ಹಾಗೂ ರಿಮೋಟ್​ ಜಾಬ್​ಗಳನ್ನು ಹೊಂದಿವೆ.

ಅಮೆಜಾನ್, ಟೆಕ್ ಮಹೀಂದ್ರಾ, ಹೆಚ್‌ಸಿಎಲ್, ಪಿಡಬ್ಲ್ಯೂಸಿ, ಟ್ರಿಜೆಂಟ್, ಫ್ಲಿಪ್‌ಕಾರ್ಟ್, ಸೀಮೆನ್ಸ್, ಡೆಲಾಯ್ಟ್, ಒರಾಕಲ್, ಜೆನ್ಸಾರ್, ಟಿಸಿಎಸ್, ಕ್ಯಾಪ್ಜೆಮಿನಿ ಇತ್ಯಾದಿ ತಾತ್ಕಾಲಿಕ ಮತ್ತು ಶಾಶ್ವತ ರಿಮೋಟ್ ಉದ್ಯೋಗಗಳನ್ನು ಪೋಸ್ಟ್ ಮಾಡುವ ಕೆಲವು ಕಂಪನಿಗಳು ಎಂದು ವರದಿ ಹೇಳಿದೆ.

Leave a Reply

Your email address will not be published.