ಭಾರತದಿಂದ ಮಲೇಷ್ಯಾಕ್ಕೆ 18 ದೇಶೀಯ ಲಘು ಯುದ್ಧ ವಿಮಾನ ಮಾರಾಟ: ರಕ್ಷಣಾ ಸಚಿವಾಲಯ

ರಾಷ್ಟ್ರೀಯ

ನವದೆಹಲಿ: ಭಾರತವು ಮಲೇಷ್ಯಾಕ್ಕೆ 18 ತರಬೇತಿ ʼತೇಜಸ್‌ʼ ಲಘು ಯುದ್ಧ ವಿಮಾನ (ಎಲ್‌ಸಿಎ) ಮಾರಾಟ ಮಾಡಲು ಮುಂದಾಗಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಅಮೆರಿಕ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಕೂಡ ಸಿಂಗಲ್‌ ಎಂಜಿನ್‌ ಹೊಂದಿರುವ ಯುದ್ಧ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ 83 ತೇಜಸ್‌ ವಿಮಾನ ನಿರ್ಮಾಣ ಸಂಬಂಧ 6 ಶತಕೋಟಿ ಡಾಲರ್‌ ಮೌಲ್ಯದ ಗುತ್ತಿಗೆಯನ್ನು ನೀಡಿತ್ತು. 2023ಕ್ಕೆ ಎಚ್‌ಎಎಲ್‌ ವಿಮಾನವನ್ನು ವಿತರಿಸಲಿದೆ. 1983ರಲ್ಲಿ ಅನುಮೋದನೆಗೊಂಡ ನಾಲ್ಕು ದಶಕಗಳ ನಂತರ ಈಗ ಎಚ್‌ಎಎಲ್‌ ಎಲ್‌ಸಿಎ ತೇಜಸ್‌ ವಿಮಾನವನ್ನು ಮಾರಾಟ ಮಾಡುತ್ತಿದೆ. ವಿದೇಶಿ ರಕ್ಷಣಾ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಜೆಟ್‌ ವಿಮಾನಗಳನ್ನು ರಫ್ತು ಮಾಡಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ.

ಈ ಹಿಂದೆ ವಿನ್ಯಾಸ ಮತ್ತು ತೂಕದ ಕಾರಣ ನೀಡಿ ಭಾರತೀಯ ನೌಕಾಪಡೆ ತೇಜಸ್‌ ವಿಮಾನವನ್ನು ತಿರಸ್ಕರಿಸಿತ್ತು. ಬಳಿಕ ತಾಂತ್ರಿಕತೆ, ಏವಿಯಾನಿಕ್ಸ್‌ಗಳಲ್ಲಿ ಬದಲಾವಣೆ ಮಾಡಿದ್ದು ಈಗ ವಿದೇಶಕ್ಕೆ ಮಾರಾಟ ಮಾಡಲು ಮುಂದಾಗುತ್ತಿರುವುದು ವಿಶೇಷ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 18 ಜೆಟ್‌ ಖರೀದಿ ಸಂಬಂಧ ರಾಯಲ್ ಮಲೇಷಿಯನ್ ಏರ್ ಪ್ರಸ್ತಾವ ನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ರಕ್ಷಣ ಇಲಾಖೆ ಪ್ರತಿಕ್ರಿಯಿಸಿದ್ದು, ತೇಜಸ್‌ನ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿಸಿದೆ.

Leave a Reply

Your email address will not be published.