India vs Sri Lanka 1st Test… ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಕ್ರೀಡೆ

ಪಂಜಾಬ್‌: ಭಾರತ ಮತ್ತು ಶ್ರೀಲಂಕಾದ ನಡುವಿನ ಮೊದಲ ಟೆಸ್ಟ್ ಪಂದ್ಯ ಪಂಜಾಬ್​​ನ ಮೊಹಾಲಿಯ ಪಂಜಾಬ್​ ಕ್ರಿಕೆಟ್​ ಅಸೋಸಿ ಯೇಷನ್​ ಮೈದಾನದಲ್ಲಿ ಆರಂಭವಾಗಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟಿ-20 ಸರಣಿಯಲ್ಲಿ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಎದುರಿಸುತ್ತಿದ್ದು, ಈಗ ನಡೆಯುತ್ತಿರುವುದು ಮೊದಲ ಟೆಸ್ಟ್ ಪಂದ್ಯವಾಗಿದೆ. ಟಿ-20 ಸರಣಿಯಲ್ಲಿ ಗೆದ್ದಿರುವ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲೂ ಗೆಲ್ಲುವ ತವಕದಲ್ಲಿದೆ.

ಟಾಸ್‌ ಗೆದ್ದು ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ. ಟೀಂ ಇಂಡಿಯಾದ ನಾಯಕತ್ವವನ್ನು ನಾನು ವಹಿಸಿಕೊಂಡಿರುವುದು ದೊಡ್ಡ ಗೌರವವಾಗಿದೆ. ಇದು ವಿಶೇಷ ಸಂದರ್ಭ ಎಂದು ನಮಗೆ ತಿಳಿದಿದೆ. 100 ಟೆಸ್ಟ್‌ ಪಂದ್ಯಗಳನ್ನು ಆಡುವುದು ಅತ್ಯಂತ ಮಹತ್ವದ ಸಾಧನೆ. ಅಂತಹ ಸಾಧನೆಯನ್ನು ವಿರಾಟ್​​ ಕೊಹ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published.