ಅಮೆರಿಕಾದ ಸಶಸ್ತ್ರ ಪಡೆ ಸೇರಿಕೊಂಡ ಭಾರತೀಯ ನಟಿ ಅಖಿಲಾ ನಾರಾಯಣನ್..!

ಚಲನಚಿತ್ರ

ಭಾರತೀಯ ಮೂಲದ ತಮಿಳು ಸಿನಿಮಾ ನಟಿ ಅಖಿಲಾ ನಾರಾಯಣನ್‌ ಅವರು ಅಮೆರಿಕಾದ ಸೇನೆಗೆ ಸೇರುವ ಮೂಲಕ ಸಾಧನೆ ಮಾಡಿದ್ದಾರೆ. ಅಮೆರಿಕಾದ ಸಶಸ್ತ್ರ ಪಡೆಯಲ್ಲಿ ವಕೀಲರಾಗಿ ಅಖಿಲಾ ನಾರಾಯಣನ್‌ ಅಮೆರಿಕಾ ಸೇನೆ ಸೇರಿದ್ದಾರೆ.  ಅಖಿಲಾ ನಾರಾಯಣನ್‌ ನಿರ್ದೇಶಕ ಅರುಲ್ ಅವರ ಹಾರರ್ ಥ್ರಿಲ್ಲರ್  ಸಿನಿಮಾ’ಕದಂಪರಿ’ ಮೂಲಕ ಕಳೆದ ವರ್ಷ ತಮಿಳು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ವರದಿಗಳ ಪ್ರಕಾರ, ಅಖಿಲಾ ಹಲವು ತಿಂಗಳುಗಳ ಕಾಲ ಅಮೆರಿಕಾ ಸೇನಾನೆಲೆಗಳಲ್ಲಿ ತರಬೇತಿ ಪಡೆದು ಸಶಸ್ತ್ರ ಪಡೆಯನ್ನು ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಈ ನಟಿ ಈಗ ಯುಎಸ್ ಸೈನ್ಯಕ್ಕೆ ವಕೀಲರಾಗಿ ಸೇರಿದ್ದಾರೆ. ಅಕಿಲಾ ನಾರಾಯಣನ್ ಅವರು ಯುಎಸ್ ಮಿಲಿಟರಿ ಸಿಬ್ಬಂದಿಗೆ ಕಾನೂನು ಸಲಹೆಗಾರರಾಗಿ  ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಸ್ಪಷ್ಟವಾಗಿ, ಅವರು ವಾಸಿಸುವ ದೇಶಕ್ಕೆ ಸೇವೆ ಸಲ್ಲಿಸುವ ಸಲುವಾಗಿ ಅವರು ಅಮೆರಿಕಾ ಸೈನ್ಯಕ್ಕೆ ಸೇರಿದ್ದಾರೆ. ಸೇನಾ ಅಧಿಕಾರಿಗಳ ಜೊತೆ ಶಿಸ್ತುಬದ್ಧ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಅಖಿಲಾ ಅಮೆರಿಕಾದಲ್ಲೇ ನೆಲೆಸಿದ್ದು, ಅಮೆರಿಕಾ ಸೈನ್ಯಕ್ಕೆ ಸೇವೆ ಸಲ್ಲಿಸುವುದು ತನ್ನ ಕರ್ತವ್ಯವೆಂದು ಪರಿಗಣಿಸಿದ್ದಾರೆ  ಅಖಿಲಾ ಅಲ್ಲಿ ‘ನೈಟಿಂಗೇಲ್ ಸ್ಕೂಲ್ ಆಫ್ ಮ್ಯೂಸಿಕ್’ ಎಂಬ ಆನ್‌ಲೈನ್ ಸಂಗೀತ ಶಾಲೆಯನ್ನು ಸಹ ನಡೆಸುತ್ತಿದ್ದಾರೆ. ಜೊತೆಗೆ ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಸಂಗೀತ ಕಲೆಯನ್ನು ಕಲಿಸುತ್ತಿದ್ದಾರೆ. ನಟನೆಯ ಜೊತೆಗೆ ಸೈನ್ಯಕ್ಕೆ ಸೇರಬೇಕೆಂಬ ಮಹಾದೆಸೆ ಇಟ್ಟುಕೊಂಡಿದ್ದ ಅಖಿಲಾ, ತನ್ನ ಆಸೆ ಈಡೇರಿಸಿಕೊಂಡಿದ್ದಕ್ಕೆ ಆಕೆಯ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಅಮೆರಿಕ ಸೇನೆಯಿಂದ ಪದವಿ ಪಡೆಯುವುದು ಅತ್ಯಂತ ಸವಾಲಿನ ಸಂಗತಿಯಾದರೂ ಕಠಿಣ ತರಬೇತಿ ಪಡೆದು ಅಖಿಲಾ ಇತಿಹಾಸ ನಿರ್ಮಿಸಿದ್ದಾರೆ .ಒಟ್ಟಿನಲ್ಲಿ ಅಮೆರಿಕದ ಸೇನೆಗೆ ವಕೀಲೆಯಾಗಿ ಸೇರ್ಪಡೆಯಾಗಿರುವ ತಮಿಳು ನಟಿಯ ಈ ಅಪರೂಪದ ಸಾಧನೆಗೆ ಎಲ್ಲ ಕಡೆಯಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

Leave a Reply

Your email address will not be published.