ಹೃದಯಾಘಾತದಿಂದ ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ನಿಧನ

ರಾಷ್ಟ್ರೀಯ

ಹೈದರಾಬಾದ್: ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ(50) ಅವರು ಹೃದಯಾ ಘಾತದಿಂದ ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಮೇಕಪತಿ ಗೌತಮ್ ರೆಡ್ಡಿ ಅವರು ಮನೆಯಲ್ಲಿ ಕುಸಿದು ಬಿದ್ದ ನಂ ತರ ಅವರನ್ನು ಬೆಳಗ್ಗೆ 7.45 ಸುಮಾರಿಗೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಕೊ ನೆಯುಸಿರೆಳೆದಿದ್ದಾರೆ

ದುಬೈನಲ್ಲಿ 10 ದಿನಗಳ ಕಾಲ ಕಳೆದ ಬಳಿಕ ಮೇಕಪತಿ ಗೌತಮ್ ರೆಡ್ಡಿ ಅವರು ಒಂದೆರಡು ದಿನಗಳ ಹಿಂದೆ ಹೈದರಾಬಾದ್‍ಗೆ ಮರ ಳಿದರು. ಆಂಧ್ರಪ್ರದೇಶದ ಕೈಗಾರಿಕಾ ಇಲಾಖೆಯು ದುಬೈ ಎಕ್ಸ್‌ಪೋದಲ್ಲಿ ರಾಜ್ಯದ ಹೂಡಿಕೆಗಳನ್ನು ಆಕರ್ಷಿಸಲು ಸ್ಟಾಲ್ ಅನ್ನು ಸ್ಥಾಪಿ ಸಿದ್ದರು. ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮೇಕಪತಿ ಗೌತಮ್ ರೆಡ್ಡಿ ಕುಟುಂಬ ಸದಸ್ಯ ರಿಗೆ ಸಂತಾಪ ಸೂಚಿಸಿದ್ದಾರೆ. ಮೇಕಪತಿ ರಾಜಮೋಹನ್ ರೆಡ್ಡಿ ಅವರ ಪುತ್ರರಾಗಿರುವ ಮೇಕಪತಿ ಗೌತಮ್ ರೆಡ್ಡಿ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published.