Home Latest ಪ್ರೇಕ್ಷಕರ ಗ್ಯಾಲರಿಗೆ ಬ್ಯಾಟ್ ಹಿಡಿದು ನುಗ್ಗಿದ ಪಾಕ್ ಬ್ಯಾಟ್ಸ್ ಮನ್: ಭಾರತದ ಅಭಿಮಾನಿ ಒಂದುಕ್ಷಣ ಕಂಗಾಲು..!!

ಪ್ರೇಕ್ಷಕರ ಗ್ಯಾಲರಿಗೆ ಬ್ಯಾಟ್ ಹಿಡಿದು ನುಗ್ಗಿದ ಪಾಕ್ ಬ್ಯಾಟ್ಸ್ ಮನ್: ಭಾರತದ ಅಭಿಮಾನಿ ಒಂದುಕ್ಷಣ ಕಂಗಾಲು..!!

292
0
SHARE

ಯುವಿಷ್ಕಾ ರವಿಕುಮಾರ್

ನೋಡು ನೋಡುತ್ತಿದ್ದಂತೆ ದೈತ್ಯದೇಹಿ  ಆಟಗಾರ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ  ನುಗ್ಗೆ ಬಿಟ್ಟ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಅಲ್ಲೊಬ್ಬ  ಭಾರತದ ಕ್ರಿಕೆಟ್ ಅಭಿಮಾನಿಯ ಕತ್ತು ಪಟ್ಟಿ ಹಿಡಿದು ದರದರನೆ ಮೇಲಿಂದ ಕೆಳಕ್ಕೆ ಎಳೆಯಲು ಆರಂಭಿಸಿದ ಗುಂಪು ಜೋರಾಯಿತು ಅಷ್ಟರಲ್ಲಿ ಸಹ ಆಟಗಾರರು ಅವನನ್ನು ತಬ್ಬಿ ಮತ್ತೆ ಕ್ರೀಡಾಂಗಣದ ಒಳಕ್ಕೆ ಎಳೆತಂದರು . by the way ಆ ಆಟಗಾರನ ಹೆಸರು “ಇನ್ಜಮಾಮ್ ಉಲ್ ಹಕ್ ”

ಸ್ಥಳ : ಟೊರೊಂಟೋ , ದೇಶ : ಕೆನಡಾ  ಪಂದ್ಯ: ಭಾರತ v/s ಪಾಕಿಸ್ತಾನ. ಈ ಕ್ಯಾಪ್ಷನ್  ನೋಡಿದೊಡನೆ ನಿಮಗೆ ಗೊತ್ತಾಯ್ತು ಅದೊಂದು ಯುದ್ಧದ ವಾತಾವರಣ .yes ಭಾರತ ಹಾಗೂ  ಪಾಕಿಸ್ತಾನದ ನಡುವಿನ ಪಂದ್ಯಗಳು ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯಲಿ ಅದೊಂದು ಯುದ್ಧ ಅದು ಕೇವಲ ಪಂದ್ಯವಲ್ಲ .

ಭಾರತಕ್ಕೆ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿ. ಪಂದ್ಯ ಕೇವಲ ಭಾರತದಲ್ಲಿ ಮಾತ್ರ ನಡೀಬೇಕು ಅಂತೇನಿಲ್ಲ. ಇಲ್ಲ ಪಾಕಿಸ್ತಾನವೇ ಆಗಬೇಕಲ್ಲ . ಎರಡು ತಂಡಗಳ ನಡುವೆ ಪಂದ್ಯ ಮಾತ್ರ ನಡಿಬೇಕು. ಅದು ವಿಶ್ವದ ಯಾವುದೇ ಮೂಲೆ ಯಾವುದೇ ಕ್ರೀಡಾಂಗಣದಲ್ಲಿ ಅಲ್ಲಿ  ಯುದ್ಧೋನ್ಮಾದದ ವಾತಾವರಣ ಈ ಎರಡೂ ದೇಶಗಳ ಬೆಂಬಲಿಸುವ ಅಭಿಮಾನಿಗಳಿಗೂ ಅಷ್ಟೇ ಅದೊಂದು ಹಬ್ಬದ ವಾತಾವರಣ ಜೊತೆಗೆ ಯುದ್ಧದ ವಾಸನೆ . ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವೆಂದರೆ ಅಭಿಮಾನಿಗಳಿಗೆ ರಸದೂಟ ಜೊತೆಗೆ ಕ್ರೀಡಾಂಗಣದಲ್ಲಿ ತಮ್ಮ ತಮ್ಮ ತಂಡಗಳನ್ನು ಬೆಂಬಲಿಸಲು ಕಾತರ, ಕುತೂಹಲ ,ಹಾಗೂ ಹೋರಾಟ .

ಈಗ ನೇರ ವಿಷಯಕ್ಕೆ ಬರ್ತೇನೆ ಅವತ್ತು ಕೂಡ ಆದದ್ದು ಅದೇ “ಸಹಾರಾ ಕಪ್ “ಪಂದ್ಯಾವಳಿ ಕೆನಡಾದ ಟೊರೊಂಟೊದಲ್ಲಿ . 1997 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಐದು ಪಂದ್ಯಗಳ ಸರಣಿ .

ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಅನ್ನ ಆಯ್ದುಕೊಂಡಿತ್ತು ಕ್ರೀಸ್ ನಲ್ಲಿ ಆರಂಭಿಕ  ಆಟಗಾರ ಸೌರವ್ ಗಂಗೂಲಿ ಬ್ಯಾಟ್ ಮಾಡ್ತಿದ್ರು ಸ್ಲಿಪ್ ನಲ್ಲಿ ಇನ್ಜಾಮಾಮ್ ಉಲ್ ಹಕ್. ಇಂಜಮಾಮ್ ಗೆ ಪಾಕಿಸ್ತಾನದ ತಂಡ ಫೀಲ್ಡಿಂಗ್ ಮಾಡುವಾಗ ಸ್ಲಿಪ್ ಕಾಯಂ ಸ್ಥಾನ . ಅದನ್ನು ಅವರು ಕೇಳಿ ಪಡೆಯುತ್ತಿದ್ದರು ಇಲ್ಲವಾ ಅವರ ದೊಡ್ಡ  ದೇಹವನ್ನು ನೋಡಿ ಪಾಕಿಸ್ತಾನದ ನಾಯಕರು ಅವರನ್ನು ಅಲ್ಲಿ ನಿಲ್ಲಿಸುತ್ತಿದ್ದರು ಒಟ್ಟಿನಲ್ಲಿ  ಸ್ಲಿಪ್ ಎಂಬುದು ಇಂಜಮಾಮ್ ಪಾಕಿಸ್ತಾನದ ತಂಡದಲ್ಲಿ ಇರುವವರೆಗೂ ಅವರ ಹೇಳಿ ಮಾಡಿಸಿದ ಜಾಗ .

ಸೌರವ್ ಗಂಗೂಲಿ ಟೊರಾಂಟೊದ ಪಿಚ್ ನಲ್ಲಿ ಪಾಕಿಸ್ತಾನದ ಬೌಲರ್ಗಳನ್ನು ಮನಬಂದಂತೆ ದಂಡಿಸಿದ್ದರು . ಇದರಿಂದ ಉಲ್ಲಾಸ ತರಾಗಿದ್ದ ಭಾರತದ ಅಭಿಮಾನಿಗಳು ಪಾಕಿಸ್ತಾನದ ಬೌಲರ್ ಗಳನ್ನು ಕಿಚಾಯಿಸುತ್ತಾ ಮನರಂಜನೆ ಪಡೆಯುತ್ತಿದ್ದರು.  ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರತಿ ಪಂದ್ಯದಲ್ಲೂ ಪ್ರತಿ ಕ್ರೀಡಾಂಗಣದಲ್ಲೂ ಸರ್ವೇ ಸಾಮಾನ್ಯ ದೃಶ್ಯ .

ಅವತ್ತು ಆದದ್ದೂ ಅದೇ ಸ್ಲಿಪ್ನಲ್ಲಿ ತಿನ್ನುತ್ತಿದ್ದ ಇಂಜಮಾಮ್ ನನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಆ್ಯಂಡ್ ಮೈಕ್ ಹಿಡಿದಿದ್ದ ಭಾರತದ ಅಭಿಮಾನಿ ಒಬ್ಬ ಆಗಾಗ potato (ಆಲೂಗೆಡ್ಡೆ) ಮೋಟಾ (ಡುಮ್ಮ ) ಕಿರುಚುತ್ತಿದ್ದ. ಒಂದೆರಡು ಬಾರಿ ತಡೆದುಕೊಂಡಿದ್ದ ಇಂಜಮಾಮ್ ಮೂರನೇ ಬಾರಿ ಸೀದಾ ಕ್ರೀಡಾಂಗಣದಿಂದ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ಬಿಟ್ಟ . ಅಲ್ಲಿ ಬೀದಿ ಜಗಳದ ವಾತಾವರಣವೇ ಸೃಷ್ಟಿಯಾಯಿತು. ನೋಡ ನೋಡುತ್ತಿದ್ದಂತೆ ಏನಾದರೂ  ಅಂತ ಆಟಗಾರರು  ಪ್ರೇಕ್ಷಕರ ಗ್ಯಾಲರಿ ಎತ್ತ  ಓಡಿದರು. ಭಾರತದ ಅಭಿಮಾನಿ ಜೊತೆ ಇಂಜಮಾಮ್ ಕೈಕೈ ಮಿಲಾಯಿಸಿ ಬಿಟ್ಟರು ಪಾಕ್ ಆಟಗಾರರು ಕೂಡಲೇ ವಾತಾವರಣವನ್ನು ತಿಳಿಗೊಳಿಸಿ ಇಂಜಮಾಮ್ ನನ್ನ ತಬ್ಬಿ ಹಿಡಿದು ಕ್ರೀಡಾಂಗಣಕ್ಕೆ ಎಳೆತಂದರು .

ಅಷ್ಟರಲ್ಲಿ ಬಿಸಿ ರಕ್ತದ ಅಫ್ರಿದಿ ಕೈಯಲ್ಲಿ ಬ್ಯಾಟ್ ಹಿಡಿದು ಬೌಂಡರಿ ಗೆರೆ ಅತ್ತ ಓಡಿದರು ಅಫ್ರಿದಿಯ ಕೈಯಲ್ಲಿದ್ದ ಬ್ಯಾಟನ್ನು ಕಿತ್ತುಕೊಂಡು ಭಾರತದ ಅಭಿಮಾನಿಯ ಕಡೆ ಇಂಜಮಾಮ್ ಕೋಪದಿಂದಲೇ ಮುನ್ನುಗ್ಗಿದರು. ಆಗಾಗಲೇ ಗ್ಯಾಲರಿಯಲ್ಲಿ ಕವರ್ ಆಗಿದ್ದ ಪಾಕಿಸ್ತಾನದ ಆಟಗಾರರು ಇಂಜಮಾಮ್ ನನ್ನ ಹಿಡಿದು ಸಮಾಧಾನ ಮಾಡಿದರು .

ಆದರೂ ಕೊನೆಗೂ ಉತ್ತರ ಸಿಗದೆ ಉಳಿದಿದ್ದ ಒಂದೇ ಪ್ರಶ್ನೆ ಅಂದರೆ ಫೀಲ್ಡ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಫ್ರಿದಿ ಕೈಗೆ ಆ ಬ್ಯಾಟ್ ಹೇಗೆ ಬಂತು ಎಂಬುದು .

ಈ ಘಟನೆಯ ನಂತರ ಇಂಜಮಾಮ್ ರನ್ನು  ಐಸಿಸಿ ಎರಡು ಪಂದ್ಯಗಳಿಗೆ ನಿಷೇಧ ಏರಿತ್ತು .

ಇಂತಹ ಘಟನೆಗಳು ಆಕಸ್ಮಿಕವಾಗಿಯೋ ಅಥವಾ ಅನುಕೂಲಕ್ಕಾಗಿ ನಡೆಯುತ್ತಾ ಇರುತ್ತವೆ . ಇಂತಹ ಘಟನೆಗಳು ಆಟಗಾರರ ಎರಡು ತಂಡಗಳ  ನಡುವೆ ಮಲ್ಲಯುದ್ಧ, ಕಣ್ಣು ಯುದ್ಧ, ಕೈ ಯುದ್ಧಗಳು, ನಡೆಯದಿದ್ದರೆ   ಅದು ಭಾರತ ಪಾಕಿಸ್ತಾನದ ನಡುವಿನ ಪಂದ್ಯ ಎನಿಸಿಕೊಳ್ಳುವುದಿಲ್ಲ .

LEAVE A REPLY

Please enter your comment!
Please enter your name here