ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆಯುತ್ತಿದೆ ಹೊಸಬರ ‘’ನೈನಾ’’ಸಿನಿಮಾ

ಚಲನಚಿತ್ರ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನಕೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ನೈನಾ ಮತ್ತೊಮ್ಮೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಮೂಲತಃ ಇಂಜಿನಿಯರ್ ಆಗಿರುವ ಶ್ರೀಧರ್ ಸಿಯಾ ನಿರ್ದೇಶಿಸಿ, ನಿರ್ಮಾಣ ಮಾಡಿರುವ ನೈನಾ ಸಿನಿಮಾದಲ್ಲಿ ಬಹುಭಾಷಾ ನಟಿ ಗೌರಿ ನಾಯರ್ ಮುಖ್ಯಭೂಮಿಕೆಯಲ್ಲಿ ಬಣ್ಣಹಚ್ಚಿದ್ದು, ನೇಹಾ ಐತಾಳ್, ಮಜಾ ಭಾರತ ಪಲ್ಟಿ ಗೋವಿಂದ್, ಕೆಜಿಎಫ್ ಖ್ಯಾತಿಯ ಸಾಯಿ ಲಕ್ಷ್ಮಣ್, ಸುಮಂತ್ ರೈ, ಚಿದಂಬರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸಾಮಾನ್ಯ ವರ್ಗದ ಮಹಿಳೆಯ ಮನಸ್ಥಿತಿ ಮತ್ತು ಪರಿಸ್ಥಿತಿ, ಜೀವನದ ಸತ್ಯಾಸತ್ಯತೆ ಕಥಾಹಂದರ ಹೊಂದಿರುವ ಸಿನಿಮಾ ನೈನಾ ಚಿತ್ರಕ್ಕೆ ಕಲ್ಕಿ ಅಭಿಷೇಕ್ ಮ್ಯೂಸಿಕ್ ನೀಡಿದ್ದು, ಪ್ರದೀಪ್ ಪಿ ಬಂಗಾರಪೇಟೆ ಕ್ಯಾಮೆರಾ ಕೈಚಳಕ ಸಿನಿಮಾದಲ್ಲಿದ್ದು, ಸುಮಂತ್ ರೈ ನಟನೆ ಜೊತೆಗೆ ಎಡಿಟಿಂಗ್ ಕೆಲಸ ನಿರ್ವಹಿಸಿದ್ದು, ಇದೇ 8ನೇ ತಾರೀಖಿನಂದು ಮಹಿಳಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮತ್ತೊಮ್ಮೆ ಪ್ರದರ್ಶನಗೊಳ್ಳಲು ನೈನಾ ಸಿನಿಮಾ ಆಯ್ಕೆಯಾಗಿದೆ.

Leave a Reply

Your email address will not be published.