Home District IPLಗಿಂತಲೂ ಭಾರೀ ಜೋರಾಗಿದೆ ಚುನಾವಣಾ ಬೆಟ್ಟಿಂಗ್..!! CM, ಶ್ರೀರಾಮುಲು, HDK, ಡಿಕೆಶಿ ಮೇಲೆ ಲಕ್ಷ-ಲಕ್ಷ...

IPLಗಿಂತಲೂ ಭಾರೀ ಜೋರಾಗಿದೆ ಚುನಾವಣಾ ಬೆಟ್ಟಿಂಗ್..!! CM, ಶ್ರೀರಾಮುಲು, HDK, ಡಿಕೆಶಿ ಮೇಲೆ ಲಕ್ಷ-ಲಕ್ಷ ಹಣ,ಎತ್ತು,ಹೊಲ ಬೆಟ್ಟಿಂಗ್…

2090
0
SHARE

ಬಾಗಲಕೋಟೆ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಬದಾಮಿಯಲ್ಲಿ ಈಗ ಭರ್ಜರಿ ಬೆಟ್ಟಿಂಗ್ ನಡೀತಾಯಿದೆ. ಸಿಎಂ ಸಿದ್ರಾಮಯ್ಯ, ಸಂಸದ ಶ್ರೀ ರಾಮುಲು ಅಭಿಮಾನಿಗಳು, ಕಾರ್ಯಕರ್ತರು, ಎರಡೂ ಕಡೆಯಿಂದ ಗೆಲುವಿನ ಪ್ರತಿಷ್ಠೆಯನ್ನ ಹುಡುಕಾಡ್ತಿದ್ದಾರೆ. ಇದಕ್ಕೆ ಸಾಕ್ಷಿ ಬೆಟ್ಟಿಂಗ್ ನಡೆಸಿರೋ ಈ ಒಂದು ವಿಡಿಯೋ….

ಬದಾಮಿಯಲ್ಲಿ ಸಿಎಂ ಸಿದ್ರಾಮಯ್ಯ, ಶ್ರೀರಾಮುಲು ಹೆಸರಲ್ಲಿ ಬೆಟ್ಟಿಂಗ್ ಜೋರಾಗಿದೆ. 10. 20. 50 ಸಾವಿರ, 1 ಲಕ್ಷದವರೆಗೆ ಅಲ್ಲಲ್ಲಿ ಗುಪ್ತವಾಗಿ ಬೆಟ್ಟಿಂಗ್ ನಡೀತಾಯಿದೆ‌. ಇನ್ನೇನು ಫಲಿತಾಂಶಕ್ಕೆ ನಾಳೆ ಒಂದೇ ದಿನ ಬಾಕಿ ಉಳಿದಿದ್ದು ಕ್ಷೇತ್ರದಲ್ಲಿ ಬೆಟ್ಟಿಂಗ್ ಭಾರಿ ಸದ್ದು ಮಾಡ್ತಿದೆ…

ಮತದಾನ ಮುಗಿಯುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಶುರುವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ೫ ಕ್ಷೇತ್ರಗಳಿದ್ದು ಕೊಪ್ಪಳ, ಕನಕಗಿರಿ, ಕುಷ್ಟಗಿ,ಗಂಗಾವತಿ ಮತ್ತು ಯಲಬುರ‍್ಗಾದಲ್ಲಿ ೫೨ ಅಭ್ಯರ್ಥಿಗಳು ತಮ್ಮ ಅದೃಷ್ಟಪರೀಕ್ಷೆಗೆ ಇಳಿದಿದ್ದರು. ಕೊಪ್ಪಳ ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿ ಆರಂಭವಾಗಿತ್ತು.

ಇದರಲ್ಲಿ ಕನಕಗಿರಿಯ ಶಿವರಾಜ್ ತಂಗಡಗಿ ಹಾಗೂ ಬಸವರಾಜ್ ದಡೆಸೂಗೂರು, ಯಲಬುರ್ಗಾದ ಬಸವರಾಜ ರಾಯರಡ್ಡಿ ಮತ್ತು ಹಾಲಪ್ಪ ಆಚಾರ‍್ ಹಾಗೂ ಗಂಗಾವತಿಯ ಇಕ್ಬಾಲ್ ಅನ್ಸಾರಿ ಮತ್ತು ಬಿಜೆಪಿಯ ಪರಣ್ಣ ಮುನವಳ್ಳಿ ನಡುವೆ ತೀವ್ರ ಜಿದ್ದಾಜಿದ್ದಿಯ ಹೋರಾಟವೇ ನಡೆದಿದೆ. ಈ ಕ್ಷೇತ್ರಗಳಲ್ಲಿ ಈಗ ಸೋಲುಗೆಲುವಿನ ಲೆಕ್ಕಾಚಾರಗಳು ಆರಂಭವಾಗಿದ್ದು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಕನಕಗಿರಿಯಲ್ಲಿ ಕಾಂಗ್ರೆಸ್ ನ ಶಿವರಾಜ್ ತಂಗಡಗಿ ಮತ್ತು ಬಿಜೆಪಿಯ ಬಸವರಾಜ್ ದಡೆಸೂಗೂರು ಅಭಿಮಾನಿಗಳು ಲಕ್ಷಾಂತರ ರೂಪಾಯಿಗಳ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಇದು ಕೋಟಿಯ ಸಮೀಪವೂ ಇದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here