Home Latest IPL-ಜಾತ್ರೆ…** ಮಗನಿಗಾಗಿ ಚೀನಾ ಜೊತೆ ರಾಜಿ ಮಾಡಿಕೊಂಡರೆ ಗೃಹ ಸಚಿವ ಅಮಿತ್ ಶಾ ..?

IPL-ಜಾತ್ರೆ…** ಮಗನಿಗಾಗಿ ಚೀನಾ ಜೊತೆ ರಾಜಿ ಮಾಡಿಕೊಂಡರೆ ಗೃಹ ಸಚಿವ ಅಮಿತ್ ಶಾ ..?

1038
0
SHARE

ಯುಎಇಯಲ್ಲಿ ಮುಂದಿನ ಸೆಪ್ಟೆಂಬರ್ 19 ರಂದು ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಭಾರತದ ಕ್ರಿಕೆಟ್ ಮಂಡಳಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಕರೋನಾ ಭಾರತದಲ್ಲಿ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಯುಎಇಯಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯಲಿದೆ.

ಈ ಮಧ್ಯೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಇದೆಯಾ ಇಲ್ಲವಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬರುವರೋ ಅಥವಾ ಬರುವುದಿಲ್ಲವೋ ಅದು ಬೇರೆ ಮಾತು. ಪ್ರೇಕ್ಷಕರ ಅವಶ್ಯಕತೆ ಐಪಿಎಲ್ ಪಂದ್ಯಾವಳಿಗೆ ಬೇಕೇ ಬೇಡವೇ ಎಂಬುದು ಮುಖ್ಯವಲ್ಲ. ಈಗಾಗಲೇ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ಪ್ರೇಕ್ಷಕರಿಲ್ಲದೆ ಯಶಸ್ವಿಯಾಗಿ ಮುಗಿದಿದೆ.

ಎಲ್ಲರಿಗೂ ಕಾಡುವುದು ಒಂದೇ ಪ್ರಶ್ನೆ..!? ಪ್ರೇಕ್ಷಕರಿಲ್ಲದೆ ಪಂದ್ಯಾವಳಿ ನಡೆದರೆ ಏನು ಲಾಭ ಹೇಗೆ ದುಡ್ಡು ಮಾಡ್ತಾರೆ ಎಂಬುದು. ಒಂದು ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬಂದ್ರೆ ಅದು ಲಕ್ಷಗಳಲ್ಲಿ ಮಾತ್ರ ದುಡ್ಡನ್ನು ಆ ಕ್ರೀಡಾಂಗಣಕ್ಕೆ ತಂದು ಕೊಡುತ್ತದೆ. ಆದರೆ ಆ ಪಂದ್ಯಾವಳಿ ದೂರದರ್ಶನ ಅಥವಾ ಟಿವಿಯಲ್ಲಿ ನೇರ ಪ್ರಸಾರವಾದರೆ ಪ್ರಾಯೋಜಕರಿಂದ ಕೋಟಿಗಟ್ಟಲೆ ದುಡ್ಡು ಸಂಪಾದನೆಯಾಗುತ್ತದೆ.

ಪ್ರಾಯೋಜಕರ ನೆರವಿನಿಂದಲೇ ಐಪಿಎಲ್ ಬಹಳ ದೊಡ್ಡ ದುಡ್ಡು ದುಡಿಯುವ ಯಂತ್ರವಾಗಿದೆ. ಐಪಿಎಲ್ ಎಂಬುದು ಕೇವಲ ಕ್ರಿಕೆಟ್ ಅಲ್ಲ ಅದು ಹಣ ದುಡಿಯುವ ಯಂತ್ರ .ಕಳೆದ ಎರಡು ಆವೃತ್ತಿಗೆ ಮುಖ್ಯ ಪ್ರಾಯೋಜಕರಾಗಿದ್ದ ಚೀನಾ ಮೂಲದ ” vivo” ಕಂಪನಿ,13ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳಿಗೂ ಕೂಡ ಹಿಂದೆ ಮಾಡಿಕೊಂಡ ಒಪ್ಪಂದದಂತೆ ವಿವೋ ಪ್ರಾಯೋಜಕತ್ವವನ್ನು ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ತೀರ್ಮಾನಿಸಿದೆ.

ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿ “ವಿವೊ” ಕಂಪೆನಿಯ ಪ್ರಾಯೋಜಕತ್ವವನ್ನು ಮುಂದುವರಿಸಿರುವುದು ವಿವಾದಕ್ಕೆ ಕಾರಣವಾಗಿದೆ .ಚೀನಾ ಹಾಗೂ ಭಾರತ ನಡುವೆ ಈಗ ನಡೆಯುತ್ತಿರುವ ಸಂಘರ್ಷ ಎಲ್ಲರಿಗೂ ಗೊತ್ತಿದೆ ಭಾರತ ಸರ್ಕಾರ ಚೀನಾ ಮೂಲದ 88 ಆ್ಯಪ್ ಗಳನ್ನು ಈಗಾಗಲೇ ರದ್ದು ಮಾಡಿರುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರ.

ಪರಿಸ್ಥಿತಿ ಹೀಗಿರುವಾಗ ಚೀನಾ ಮೂಲದ ಕಂಪನಿಯನ್ನು ಹಣದಾಸೆಗಾಗಿ ಐಪಿಎಲ್ ಮುಖ್ಯ ಪ್ರಾಯೋಜಕರಾಗಿ ತೆಗೆದುಕೊಂಡಿರುವುದು ಎಷ್ಟು ಸರಿ .ಇವತ್ತು ಭಾರತ ನಿಯಂತ್ರಣ ಮಂಡಳಿಯ ಡ್ರೈವಿಂಗ್ ಸೀಟ್ನಲ್ಲಿ ಕುಳಿತಿರುವುದು ಈ ದೇಶದ ಗೃಹ ಮಂತ್ರಿ ಅಮಿತ್ ಶಾ ಅವರ ಪುತ್ರ ಜೈ ಶಾ. ದಿಲ್ಲಿಯಲ್ಲಿ ಕುಳಿತು ಚೈನಾದ ಮೇಲೆ ಬೆಂಕಿ ಉಂಡೆಗಳ ಕೆಂಡವನ್ನೇ ಆರಿಸುವ ಅಮಿತ್ ಶಾ, ತಮ್ಮ ಮಗನಿಗಾಗಿ ಅದೇ ಚೀನಾ ಮೂಲದ ಕಂಪನಿಗೆ ಪ್ರಾಯೋಜಕತ್ವ ನೀಡಲು ರಾಜಿಯಾದರೆ ಎಂದು ಎಲ್ಲ ಕ್ರಿಕೆಟ್ ಅಭಿಮಾನಿಗಳು ದೇಶ ಪ್ರೇಮಿಗಳು ಅಮಿತ್ ಶಾರನ್ನು ಕೇಳ್ತಿದ್ದಾರೆ.

ಈ ಹಿಂದೆಯೆಲ್ಲಾ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದಾಗಲೆಲ್ಲಾ, ಭಾರತ ಹಾಗೂ ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯಗಳು ವರ್ಷಗಟ್ಟಲೆ ರದ್ದಾದ ಸಂದರ್ಭಗಳು ಉಂಟು. ಪರಿಸ್ಥಿತಿ ಹೀಗಿರುವಾಗ ಈಗ ಭಾರತ ಹಾಗೂ ಚೀನಾ ನಡುವೆ ಅಂತಹದ್ದೇ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಚೀನಾ ಮೂಲದ ಕಂಪನಿಯನ್ನು ಪ್ರಾಯೋಜಕತ್ವಕ್ಕೆ ಮುಂದುವರಿಸಲು ಅದು ಹೇಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜೈಶಾ ಒಪ್ಕೊಂಡ್ರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ದೇಶಪ್ರೇಮ ದೇಶಭಕ್ತಿ ಬಗ್ಗೆ ಮಾತನಾಡುವ ಗೃಹ ಸಚಿವರು ತಮ್ಮ ಪುತ್ರನಿಗೆ ಬುದ್ಧಿ ಹೇಳುವ ಕೆಲಸಕ್ಕೆ ಯಾಕೆ ಕೈ ಹಾಕಲಿಲ್ಲ. ಹಣ ಬರುತ್ತೆ ಅಂತ ಈಗ ಚೈನಾ ದೇಶದ ಕಂಪೆನಿಯ ಪ್ರಾಯೋಜಕತ್ವವನ್ನು ಪಡೆದುಕೊಂಡಿರುವುದು ಸರಿಯಲ್ಲ ಎಂದು ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here