
ಬೆಂಗಳೂರಿನಲ್ಲಿ IPS ಅಧಿಕಾರಿ ಅಮೃತ್ ಪೌಲ್ ಬಂಧನ: PSI ಅಕ್ರಮ ನೇಮಕ ರೂವಾರಿ ಇವರೆ.?
ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಪ್ರಕರಣದ ಸಂಬಂಧ ಇಂದು ಸಿಐಡಿ ಅಧಿಕಾರಿಗಳು ಅಮೃತ್ ಪೌಲ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. ಅಮೃತ್ ಪೌಲ್ ಅವರು ಪ್ರತಿಯೊಬ್ಬ ಅಭ್ಯರ್ಥಿಯಿಂದ ತಲಾ 30 ಲಕ್ಷ ರೂ. ನಂತೆ 25 ಜನರ ಬಳಿ 5 ಕೋಟಿ ರೂ. ಡೀಲ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಇದು ವಿಚಾರಣೆಯಲ್ಲಿ ಸಾಬೀತಾ ಗಿರುವುದರಿಂದ ಅಮೃತ್ ಪೌಲ್ ರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.