Home Cinema ಬಾಲಿವುಡ್‌ನಲ್ಲಿ ಎಂದಿಗೂ ಮರೆಯಲಾಗದ ನಕ್ಷತ್ರ ಇರ್ಫಾನ್ ಖಾನ್…ಇಷ್ಟುದಿನ ಮನಸ್ಸಿನಲ್ಲಿ ಅಡಗಿಸಿಟ್ಟುಕೊಂಡ ವೇದನೆ ಪುತ್ರ ಬಾಬಿಲ್ ಹೊರ...

ಬಾಲಿವುಡ್‌ನಲ್ಲಿ ಎಂದಿಗೂ ಮರೆಯಲಾಗದ ನಕ್ಷತ್ರ ಇರ್ಫಾನ್ ಖಾನ್…ಇಷ್ಟುದಿನ ಮನಸ್ಸಿನಲ್ಲಿ ಅಡಗಿಸಿಟ್ಟುಕೊಂಡ ವೇದನೆ ಪುತ್ರ ಬಾಬಿಲ್ ಹೊರ ಹಾಕಿದ್ದು ಯಾಕೆ ಗೊತ್ತಾ…?

330
0
SHARE

ಮುಂಬೈ. ಇರ್ಫಾನ್ ಖಾನ್ ಬಾಲಿವುಡ್‌ನಲ್ಲಿ ಎಂದಿಗೂ ಮರೆಯಲಾಗದ ನಕ್ಷತ್ರ. ಬಿ-ಟೌನ್‌ನಲ್ಲಿ ಮಾತ್ರವಲ್ಲದೇ ಹಾಲಿವುಡ್‌ನಲ್ಲೂ ತಮ್ಮ ತಾಕತ್ತು ಏನು ಅಂತ ಪ್ರೂವ್ ಮಾಡಿದ್ದ ಇರ್ಫಾನ್ ಅಗಲಿಕೆಗೆ ನಿಜಕ್ಕೂ ಭಾರತೀಯ ಚಿತ್ರರಂಗಕ್ಕೆ ತುಂಬಲಾಗದ ನಷ್ಟ. ಇರ್ಫಾನ್ ಖಾನ್ ಅಭಿನಯಿಸಿದ ಎಷ್ಟೋ ಸಿನಿಮಾಗಳು ಹೊಸಬರಿಗೆ ಈಗಲೂ ದಾರಿದೀಪ. ತಮ್ಮ ರಿಯಲಿಸ್ಟಿಕ್ ಅಪ್ರೋಚ್‌ನಿಂದಲೇ ಗಮನ ಸೆಳೆದ ಇರ್ಫಾನ್ ಹೆಸರು ಈಗ ಒಂದು ವಾದಕ್ಕೆ ದಾರಿ ಮಾಡಿಕೊಟ್ಟಿದೆ. ಬಾಲಿವುಡ್‌ನಲ್ಲಿ ಕಾಣಿಸದೇ ಬುಸುಗುಟ್ಟುತ್ತಿರುವ ಗ್ರೂಪಿಸಂ ಜಾಲವನ್ನ ಪ್ರಶ್ನೆ ಮಾಡಿದೆ.

ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಇಷ್ಟುದಿನ ತಮ್ಮ ಮನಸ್ಸಿನಲ್ಲಿ ಅಡಗಿಸಿಟ್ಟುಕೊಂಡಿದ್ದ ವೇದನೆಯೊಂದನ್ನ ಹರಿಬಿಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ತಮ್ಮ ತಂದೆಯನ್ನ ನೆನಪು ಮಾಡಿಕೊಳ್ಳುವುದರ ಜೊತೆಗೆ ಬಾಲಿವುಡ್‌ನ ಒಳಸತ್ಯವೊಂದನ್ನ ಮಾರ್ಮಿಕ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಬಾಬಿಲ್ ಖಾನ್ ಕೆಂಗಣ್ಣಿಗೆ ಗುರಿಯಾಗಿರೋದು ಯಾರು ಎನ್ನುವ ಕುತೂಹಲ ಜೋರಾಗೇ ಇದೆ. ಬಾಬಿಲ್ ಖಾನ್ ತಂದೆ ಇರ್ಫಾನ್ ಅನುಭವಿಸಿದ ಕಷ್ಟಕೋಟಲೆಗಳ ಪಟ್ಟಿ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಚಮಚಗಿರಿ ಹಾಗೂ ನೆಪೊಟಿಸಂ ಪರೋಕ್ಷವಾಗಿ ಕಾಣಿಸ್ತಿದೆ ಎಂಬ ವಾದಗಳಿಗೆ ಬಾಬಿಲ್ ಮಾತುಗಳು ಮತ್ತೊಂದು ಪುಷ್ಟಿ ಕೊಟ್ಟಿದೆ.

ಇತ್ತೀಚೆಗೆ ಬಾಲಿವುಡ್‌ನಲ್ಲಿ ಕೆಲವು ಗುಂಪುಗಾರಿಕೆ ಮಾಡೋ ಜನರಿಂದ ಹೊಸಪ್ರತಿಭೆಗಳ ಲೈಫ್ ಹಾಳಾಗ್ತಿದೆ ಎಂಬ ಕೂಗು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸುಶಾಂತ್ ಸಿಂಗ್ ಸಾವು ಇವೆಲ್ಲಕ್ಕೂ ನೀರು ಎರೆದಿತ್ತು. ಬಾಲಿವುಡ್‌ನಲ್ಲಿ ಹೊಸ ಟ್ಯಾಲೆಂಟ್‌ಗಳನ್ನ ತುಳಿಯುತ್ತಾರೆ ಮತ್ತು ಅವರ ಸಿನಿಮಾಗಳನ್ನೂ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತೆ ಎನ್ನುವ ಆರೋಪ ದೊಡ್ಡಮಟ್ಟದಲ್ಲೇ ಕೇಳಿಬಂದಿತ್ತು. ಈದೀಗ ಇರ್ಫಾನ್ ಪುತ್ರ ಬಾಬಿಲ್‌ನ ಈ ಸುಧೀರ್ಘ ಪೋಸ್ಟ್ ಬಿ-ಟೌನ್‌ನ ಕಲೆವು ಮಂದಿಗೆ ತನ್ನದೇ ರೀತಿಯಲ್ಲಿ ಚುರುಕು ಮುಟ್ಟಿಸಿದೆ.

ತಮ್ಮ ತಂದೆಯ ಬಗ್ಗೆ ಭಾವನತ್ಮಕ ಸಂದೇಶವೊಂದನ್ನ ಹಂಚಿಕೊಂಡಿರೋ ಬಾಬಿಲ್, ಕೆಲವು ಸಿಕ್ಸ್ ಪ್ಯಾಕ್ ಹೀರೊಗಳಿಂದ ನಮ್ಮ ತಂದೆ ಇಂಡಸ್ಟ್ರಿಯಲ್ಲಿ ಅಂದಕೊಂಡದ್ದನ್ನ ಸಾಧಿಸೋಕೆ ಆಗಲೇ ಇಲ್ಲ. ಕೇವಲ ಒಂದು ಲೈನ್‌ನಲ್ಲಿ ಡೈಲಾಗ್ ಹೇಳೊ ನಟರಿಗೆ ಇಲ್ಲಿ ಜಾಗವಿದೆ. ಮತ್ತೊ ಕೆಲವು ಚೀಪ್ ಫೋಟೊಗ್ರಾಫಡ್ ಐಟಂ ಸಾಂಗ್‌ಗಳನ್ನ ಪ್ರೇಕ್ಷಕ ಎಂಜಾಯ್ ಮಾಡ್ತಾನೆ. ಹಾಗಾಗೀ, ನನ್ನ ತಂದೆ ಅಂದುಕೊಂಡ ಸ್ಥಾನವನ್ನ ತಲುಪೋಕೆ ಆಗಲಿಲ್ಲ ಎನ್ನುವ ನೋವಿನ ಮೇಸೆಜ್ ನೀಡಿದ್ದಾರೆ.

ಈ ಪತ್ರದ ಮೂಲಕ ಬಾಬಿಲ್ ಖಾನ್ ಬಾಲಿವುಡ್‌ನಲ್ಲಿ ಗ್ರೂಪಿಸಂ ಮಾಡೋರ ಬಗ್ಗೆ ನೇರವಾಗಿ ಕಿಡಿಕಾರಿದ್ದಾರೆ. ಕೇವಲ ಆಡಂಬರ ಹಾಗೂ ದೃಶ್ಯ ವೈಭವಿಕರಣಕ್ಕೆ ಮಾತ್ರ ಇಲ್ಲಿ ಮಣೆ ಹಾಕಲಾಗುತ್ತೆ. ನಾಟಕೀಯತೆಯೇ ಕೆಲವರ ಜೀವಾಳ ಎನ್ನುತ್ತ ತಮ್ಮ ತಂದೆಗಾದ ಅನ್ಯಾಯವನ್ನ ಇಂಚುಇಂಚಾಗಿ ತೆರೆದಿಟ್ಟಿದ್ದಾರೆ. ಇರ್ಫಾನ್ ಖಾನ್ ಅಭಿನಯಿಸಿದ ಚಿತ್ರಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ್ರು, ಬಾಕ್ಸ್‌ಆಫೀಸ್ ಎನ್ನುವ ಮಾಯಾಜಾಲದಲ್ಲಿ ಸೋತು ಹೋಗೊಕೆ ಕಾರಣಗಳೇನು ಎನ್ನುವ ಅಸಲಿ ಕಹಾನಿ ಇಲ್ಲಿ ರಿವೀಲ್ ಆಗಿದೆ.

ಒಟ್ಟಿನಲ್ಲಿ ಬದುಕಿದ್ದಾಗ ತಮ್ಮ ನಟನೆಯಿಂದಲೇ ಅಂತರಾಷ್ಟ್ರೀಯ ಚಿತ್ರರಂಗವನ್ನ ಸೆಳೆದ ಇರ್ಫಾನ್ ಖಾನ್ ವಿಚಾರದಲ್ಲೂ ಕೆಲವು ಮೋಸಗಳಾಗಿವೆ ಎಂಬ ಸತ್ಯ ಎಲ್ಲರನ್ನ ದಂಗುಬಡಿಸಿದೆ. ಬಾಲಿವುಡ್ ಕೇವಲ ಮಾಸ್ ಹಾಗೂ ಚೀಪ್ ಎಂಟರ್‌ಟೈನ್‌ಮೆಂಟ್ ಇರೋ ಸಿನಿಮಾಗಳಿಗೆ ಮಾತ್ರ ಸೀಮಿತನಾ ಅಂತ ಸಾಮಾಜಿಕ ಜಾಲತಾಣಗಳಲ್ಲೂ ಗುಸುಗುಸು ಶುರುವಾಗಿಬಿಟ್ಟಿದೆ. ಇರ್ಫಾನ್ ಖಾನ್ ನಿರ್ವಹಿಸಿದ ಪಾತ್ರಗಳು ಯಾವಾಗಲೂ ಜೀವಂತವಾಗಿರುತ್ತೆ. ಆದರೆ ಬಾಬಿಲ್ ಖಾನ್ ಬರೆದಿರೋ ಪತ್ರವನ್ನ ಗಮನಿಸಿದ್ರೆ, ಹಿಂದಿ ಚಿತ್ರರಂಗದಲ್ಲಿ ಇರ್ಫಾನ್‌ಗೆ ಸಿಗಬೇಕಾದ ವೇದಿಕೆಯೇ ಸೃಷ್ಟಿಯಾಗಲಿಲ್ಲ ಎಂಬ ನಗ್ನಸತ್ಯ ಹೊರಬಿದ್ದಿದೆ. ಅಂತೂ ಬದುಕಿರುವಷ್ಟು ದಿನ ಸಿನಿಮಾಗಾಗಿಯೇ ಉಸಿರಾಡಿದ ಇರ್ಫಾನ್ ಖಾನ್ ಎಂಬ ದೈತ್ಯಪ್ರತಿಭೆ ಇಷ್ಟೆಲ್ಲ ನೋವು ಅನುಭವಿಸಿತ್ತಾ ಎಂಬ ಸಂಗತಿ ಒಳಗೊಳಗೆ ಅಳುತ್ತಿದೆ.

LEAVE A REPLY

Please enter your comment!
Please enter your name here