ರಾಜೀನಾಮೆ ಕೊಡಲು ಈಶ್ವರಪ್ಪ ಸಿದ್ಧವಿಲ್ಲ ಅಂದ್ರೆ, ಸಿಎಂ ಅವರೇ ವಜಾ ಮಾಡಲಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು

ಬೆಂಗಳೂರು: ಈಶ್ವರಪ್ಪ ರಾಜೀನಾಮೆ ಪಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ ಯಾಕೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ರಾಜೀನಾಮೆ ತೆಗೆದುಕೊಳ್ಳಲು ಯಾಕೆ ಆಗುತ್ತಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಸಹಾಯಕರಾಗಿ ಅದ್ಹೇಕೆ ಕೂತಿದ್ದಾರೆ ಎಂದು ಗೊತ್ತಿಲ್ಲ . ರಾಜೀನಾಮೆ ಕೊಡಲು ಈಶ್ವರಪ್ಪ ಸಿದ್ಧವಿಲ್ಲ ಅಂದ್ರೆ, ಸಿಎಂ ಅವರೇ ವಜಾ ಮಾಡಲಿ. ಬಿಜೆಪಿ ಹೈಕಮಾಂಡ್ ಮತ್ತು ನಳಿನ್​ ಕುಮಾರ್​ ಕಟೀಲ್ ಏನು ಮಾಡುತ್ತಿದ್ದಾರೆ. ನನಗೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ನೋಡಿದರೆ ಅಯ್ಯೋ ಅನಿಸುತ್ತೆ.

ಬಿಟ್‌ಕಾಯಿನ್ ವಿಚಾರ ಬಂದರೂ ಬಾಯಿ ಬಿಡಲಿಲ್ಲ. ಕನಿಷ್ಠ ಪ್ರಿಯಾಂಕ್ ಖರ್ಗೆ ಹೇಳಿದ್ದು ಸುಳ್ಳು ಅಂತ ಆದರೂ ಬಾಯಿ ಬಿಡಬೇಕಲ್ಲವೇ? ಎಂದು ಟೀಕಿಸಿದರು. ಇವತ್ತು ಧ್ವಜ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಾಳೆ ಸಂವಿಧಾನ, ದೇಶದ ಹೆಸರು ಬದಲಾವಣೆ ಮಾಡಬಹುದು. ಬಿಜೆಪಿಯವರದ್ದು ಬೋಗಸ್ ದೇಶಭಕ್ತಿ. ಇವರು ದೇಶಭಕ್ತರಲ್ಲ, ದೇಶದ್ರೋಹಿಗಳು. ಬಿಜೆಪಿ ದೇಶದ ಪರವಾಗಿದೆ ಅನ್ನೋದಾದರೆ ಮೊದಲು ಈಶ್ವರಪ್ಪರನ್ನ ವಜಾ ಮಾಡಲಿ ಎಂದು ಪ್ರಿಯಾಂಕ್​ ಖರ್ಗೆ ಸವಾಲು ಹಾಕಿದರು.

Leave a Reply

Your email address will not be published.