Home Cinema IT ರೇಡ್ ಟೆನ್ಷನ್‌ನಲ್ಲಿ ನಟಸಾರ್ವಭೌಮ ಆಡಿಯೋ ರಿಲೀಸ್‌ನಲ್ಲಿ ಅಪ್ಪು..! ಬರ‍್ತಿದೆ ಮೋದಿ ಬಯೋಪಿಕ್..! ಡೈರೆಕ್ಟರ್ ಆದ...

IT ರೇಡ್ ಟೆನ್ಷನ್‌ನಲ್ಲಿ ನಟಸಾರ್ವಭೌಮ ಆಡಿಯೋ ರಿಲೀಸ್‌ನಲ್ಲಿ ಅಪ್ಪು..! ಬರ‍್ತಿದೆ ಮೋದಿ ಬಯೋಪಿಕ್..! ಡೈರೆಕ್ಟರ್ ಆದ ಡಾರ್ಲಿಂಗ್ ಕೃಷ್ಣ..! ಮೂರು ವಿಭಿನ್ನ ಶೇಡ್‌ನಲ್ಲಿ ಶಿವಣ್ಣ..!

539
0
SHARE

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರವ ಬಹುನಿರೀಕ್ಷಿತ ಬಹುಕೋಟಿ ವೆಚ್ಚದ ನಟಸಾರ್ವಭೌಮ ಚಿತ್ರದ ಆಡಿಯೋ ಇಂದು ಸಂಜೆ ಹುಬ್ಬಳ್ಳಿ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಇಂದು ಸಂಜೆ ೫.೩೦ಕ್ಕೆ ಹುಬ್ಬಳ್ಳಿಯ ನೆಹರು ಸ್ಟೇಡಿಯಂನಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ಆಗಲಿದ್ದು, ಈ ಫಂಕ್ಷನ್‌ಗೆ ಸಾಕಷ್ಟು ಅಪ್ಪು ಫ್ಯಾನ್ಸ್ ಬರಲಿದ್ದಾರೆ. ಜೊತೆಗೆ ಈ ಶೋನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಚಿತಾ ರಾಮ್, ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಇನ್ನು ಅನೇಕರು ಭಾಗಿಯಾಗಲಿದ್ದಾರಂತೆ.

ಈ ಹಿಂದೆ ಪ್ರಧಾನಿ ಮೋದಿ ಅವರ ಬಗ್ಗೆ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಮಾಡ್ತಾರೆ ಅಂತೆ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಕೇಳಿಬರುತ್ತಿತ್ತು. ಜೊತೆಗೆ ಮೋದಿ ಅಂತ ಟೈಟಲ್ ಕೂಡ ಫಿಕ್ಸ್ ಆಗಿ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಆದ್ರೆ ಯಾಕೋ ಏನು ಆ ಚಿತ್ರ ಸೆಟ್ಟೇರಲೇ ಇಲ್ಲ. ಜೊತೆಗೆ ನಿರ್ದೇಶಕಿ ರೂಪಾ ಅಯ್ಯರ್ ಕೂಡ ಮೋದಿ ಬಗ್ಗೆ ಸಿನಿಮಾ ಮಾಡ್ತಿನಿ ಅಂತ ಹೇಳಿ ಈಗಾಗಲೇ ಸೈಲೆಂಟ್ ಆಗಿದ್ದಾರೆ. ಇವರಿಬ್ಬರಿಗೆ ಸೆಡ್ಡು ಹೊಡೆಯುವಂತೆ ಈಗ ಬಿಟೌನ್‌ನಲ್ಲಿ ನರೇಂದ್ರ ಮೋದಿ ಬಗ್ಗೆ ಬರೋಪಿಕ್ ಮಾಡಲು ಎಲ್ಲಾ ತಯಾರಿ ನಡೆಸಿದ್ದಾರಂತೆ. ಸದ್ಯ ನರೇಂದ್ರ ಮೋದಿಯಾಗಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬಣ್ಣ ಹಚ್ಚಲಿದ್ದರಂತೆ.

ಈಗಾಗಲೇ ಡಾರ್ಲಿಂಗ್ ಕೃಷ್ಣ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ತಮ್ಮದೇ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳುತ್ತಿರುವ ಲವ್ ಮಾಕ್ಟೈಲ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್ ಸ್ಟೋರಿ ಆಗಿದೆ. ಸದ್ಯ ಈ ಪೋಸ್ಟರ್ ನೋಡಿದ ಕಿಚ್ಚ ಸುದೀಪ್ ನನ್ನ ತಮ್ಮ, ಡಾರ್ಲಿಂಗ್ ಕೃಷ್ಟ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸದಾ ಒಂದಲ್ಲ ಒಂದು ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದು, ಈಗ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಮಿಂಚೊಕ್ಕೆ ಹೊರಟಿದ್ದಾರೆ. ಹೌದು, ಶಿವರಾಜ್ ಕುಮಾರ್ ಈಗ ೭೫ ವರ್ಷದ ಮುದುಕನ ಪಾತ್ರವನ್ನ ಮಾಡಲಿದ್ದಾರಂತೆ. ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್‌ನಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಎ.ಪಿ ಅರ್ಜುನ್ ಅವರ ಕಥೆ ಇರಲಿದೆಯಂತೆ. ಈಗಾಗಲೇ ಶಿವಣ್ಣ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸದ್ಯ ಏಪ್ರಿಲ್‌ನಲ್ಲಿ ಚಿತ್ರದ ಶೂಟಿಂಗ್ ಶುರು ಆಗಲಿದೆ.

ಹೊಸ ಸಿನಿಮಾಗಳಿಗೆ ಹಳೆಯ ಹಾಡುಗಳು ಮತ್ತೆ ಮತ್ತೆ ಬಳಸುವುದು ಇತ್ತೀಚಗೆ ಹೊಸ ಟ್ರೆಂಡ್ ಅಂತಾನೇ ಹೇಳಬಹುದು. ಹೌದು, ಇದೀಗ ವರನಟ ಡಾ.ರಾಜ್ ಕುಮಾರ್ ಅಭಿನಯದ ಹೊಸಬೆಳಕು ಚಿತ್ರದ ಶೀರ್ಷಿಕೆ ಗೀತೆಯನ್ನು ಕವಚ ಚಿತ್ರದಲ್ಲಿ ಮತ್ತೆ ಬಳಸಲಾಗಿದೆಯಂತೆ. ಅಣ್ಣಾವ್ರ ಎವರ್ ಗ್ರೀನ್ ಸಾಂಗ್‌ನ್ನು ಮತ್ತೆ ಮರುಬಳಕೆ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ಹಾಗೂ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಹೊಸ ಬೆಳಕು ಹಾಡನ್ನ ರೀಮಿಕ್ಸ್ ಮಾಡಲಾಗಿದೆ.

LEAVE A REPLY

Please enter your comment!
Please enter your name here