ಇದು ಕಷ್ಟದ ಪರಿಸ್ಥಿತಿ, ಯುದ್ಧ ಬೇಡ ಎಂಬುದು ಎಲ್ಲರ ಬಯಕೆ; ಯದುವೀರ ಕೃಷ್ಣದತ್ತ

ಜಿಲ್ಲೆ

ಮೈಸೂರು: ಉಕ್ರೇನ್​ನಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದರೆ ಒಳ್ಳೆಯದು ಎಂದು ಮೈಸೂರಲ್ಲಿ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ಎಲ್ಲ ಭಾರತೀಯರ ರಕ್ಷಣೆಯಾಗುತ್ತಿದೆ. ಕೆಲವರು ಉಕ್ರೇನ್​ನಿಂದ ಬರುವುದಕ್ಕೆ ತುಂಬಾ ಕಷ್ಟಪಟ್ಟಿದ್ದಾರೆ. ಇದು ಕಷ್ಟದ ಪರಿಸ್ಥಿತಿ, ಯುದ್ಧ ಬೇಡ ಎಂಬುದು ಎಲ್ಲರ ಬಯಕೆಯಾಗಿದೆ ಎಂದರು. ಇನ್ನೂ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್​​ನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆಗೆ ನಷ್ಟವಾಗಿದೆ. ಸಾರಿಗೆ ವ್ಯವಸ್ಥೆಗೆ 10 ಬಿಲಿಯನ್ ಡಾಲರ್​​ನಷ್ಟು ನಷ್ಟವಾಗಿದೆ ಎಂದು ಉಕ್ರೇನ್ ಸರ್ಕಾರದಿಂದ ನಷ್ಟದ ಅಂದಾಜು ಬಗ್ಗೆ ಮಾಹಿತಿ ನೀಡಲಾಗಿದೆ.

Leave a Reply

Your email address will not be published.