1 ಲಕ್ಷ ಹಣ ಪಡೆದು ಉಕ್ರೇನ್ನಿಂದ ವಿದ್ಯಾರ್ಥಿಗಳನ್ನು ಕರೆತಂದಿದ್ದಾರೆ ಎಂಬುದು ಸುಳ್ಳು: ಸಚಿವ ಬಿ.ಶ್ರೀರಾಮುಲು

ಜಿಲ್ಲೆ

ಬಳ್ಳಾರಿ: ಉಕ್ರೇನ್​ನಿಂದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. 1 ಲಕ್ಷ ಹಣ ಪಡೆದು ಕರೆತಂದಿದ್ದಾರೆ ಎಂಬುದು ಸುಳ್ಳು. ಭಾರತ ಸರ್ಕಾರ ಹರಸಾಹಸಮಾಡಿ ಮಕ್ಕಳನ್ನು ಕರೆತಂದಿದೆ. ವಿದ್ಯಾರ್ಥಿಗಳನ್ನು ಕರೆತರಲು ನಾಲ್ವರು ಸಚಿವರನ್ನು ನಿಯೋಜನೆ ಮಾಡಲಾಗಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಇನ್ನೂ ರಷ್ಯಾ – ಉಕ್ರೇನ್ ಮಧ್ಯೆ ಯುದ್ಧ ಹಿನ್ನಲೆ ಸ್ವದೇ ಶಕ್ಕೆ ಮರಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಚಿವ ಶ್ರೀ ರಾಮುಲು ಮಾತನಾಡಿಸಿದ್ದಾರೆ. ಬಳ್ಳಾರಿಯ ಸಬಾ ಕೌಸರ್, ತೈಯಬ್ ಕೌಸರ್, ಮೊಹಮ್ಮದ್ ಶಕೀಬುದ್ದೀನ್​ರ ನಿವಾಸಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಚಿವ ಶ್ರೀ ರಾಮುಲು ಸಮಾಲೋಚನೆ ನಡೆಸಿದ್ದಾರೆ.

Leave a Reply

Your email address will not be published.