Home District ಜಮಖಂಡಿ ತಾಲೂಕಿಗೆ ಪ್ರವಾಹ ಭೀತಿ; ಆತಂಕದಲ್ಲಿ ಜನಜೀವನ

ಜಮಖಂಡಿ ತಾಲೂಕಿಗೆ ಪ್ರವಾಹ ಭೀತಿ; ಆತಂಕದಲ್ಲಿ ಜನಜೀವನ

319
0
SHARE

ಬಾಗಲಕೋಟೆ: ಕೊರೊನಾ ಮಹಾಮಾರಿ ಬೆನ್ನೆಲ್ಲೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿಗೆ ಪ್ರವಾಹ ಭೀತಿ ಸಾಧ್ಯತೆ ಎದುರಾಗಿದೆ. ಮಹಾರಾಷ್ಟ್ರದ ಕೃಷ್ಣಾ ತಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಸದ್ಯ ಹಿಪ್ಪರಗಿ ಜಲಾಶಯದತ್ತ ಒಳ ಹರಿವು 55ಸಾವಿರ ಕ್ಯೂಸೆಕ್ ಆಗಿದೆ. 3.14ಟಿ.ಎಂ.ಸಿ ಸಾಮರ್ಥ್ಯದ ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಬ್ಯಾಬೇಜ್ ಮೂಲಕ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬಿಡಲಾಗುತ್ತಿದೆ‌.

2.50ಲಕ್ಷದಿಂದ 4ಲಕ್ಷ ಕ್ಯೂಸೆಕ್ ನೀರು ಹರಿದು ಬಂದ್ರೂ ನಿರ್ವಹಣೆ ಸಾಧ್ಯ. ಇದನ್ನ ಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಾ ಅಂದಾಜಿಸಲಾಗುತ್ತಿದೆ. ಸಧ್ಯ 519.60ಮೀ ಎತ್ತರದ ಆಲಮಟ್ಟಿ ಜಲಾಶಯದಲ್ಲಿ 36,345ಟಿಎಂಸಿ ನೀರು 511.23 ಮೀ ಎತ್ತರದಲ್ಲಿ ಸಂಗ್ರಹಗೊಂಡಿದೆ. ಮತ್ತೆ ಮಹಾರಾಷ್ಟ್ರದ ಕೃಷ್ಣಾ ತಟದಲ್ಲಿ ಮಳೆ ಜೋರಾದ್ರೆ ಮತ್ತೆ ಅಪಾಯ ಖಚಿತ.

LEAVE A REPLY

Please enter your comment!
Please enter your name here