ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಇನ್ನಿಲ್ಲ..!

ರಾಷ್ಟ್ರೀಯ

ಟೋಕಿಯೋ: ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಜಪಾನ್‍ನ ಮಾಜಿ ಪ್ರಧಾನಿ ಶಿಂಜೋ ಅಬೆ (62) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜಪಾನ್‌ ಸರ್ಕಾರ ಅಧಿಕೃತವಾಗಿ ಈ ವಿಚಾರವನ್ನು ತಿಳಿಸಿದೆ. ನಾರಾ ನಗರದಲ್ಲಿ ಭಾಷಣ ಮಾಡುತ್ತಿರುವಾಗಲೇ ಶಿಂಜೋ ಅಬೆಗೆ ಹಿಂದಿನಿಂದ ವ್ಯಕ್ತಿಯೊಬ್ಬ ಶೂಟ್‌ ಮಾಡಿದ್ದ. ಭಾಷಣ ಮಾಡುತ್ತಿರುವಾಗ ಶಿಂಜೋ ಅಬೆ ಎದೆಗೆ ಗುಂಡು ತಾಗಿದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು.

 

Leave a Reply

Your email address will not be published.