ಕೆರೆಯಲ್ಲಿ ಜೆಸಿಬಿ ಟಿಪ್ಪರ್ ಗಳದ್ದೇ ಆರ್ಭಟ: ಮಣ್ಣು ಮಾಫಿಯಾಗೆ ಓರ್ವ ಬಲಿ

ಜಿಲ್ಲೆ

ಕೋಲಾರ :ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಜಗದೇನಹಳ್ಳಿ ಕೆರೆಯಲ್ಲಿ ಅಕ್ರಮ ಮಣ್ಣು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು, ಕೆರೆಯಲ್ಲಿ ಜೆಸಿಬಿ ಟಿಪ್ಪರ್‍ ಗಳದೇ ಆರ್ಭಟ. ಇನ್ನೂ ಪ್ರತಿದಿನ ಟನ್‍ಗಟ್ಟಲೆ ಕೆರೆಯಿಂದ ಮಣ್ಣು ಸಾಗಣೆ ಆಗುತ್ತಿದ್ದು ಇಟ್ಟಿಗೆ ಕಾರ್ಖಾನೆ ಮಾಲೀಕರು ಮತ್ತು ಲೇಔಟ್ ಮಾಲೀಕರು ದಿನೆ ದಿನೇ ಕೆರೆಯ ಮಣ್ಣು ಲೂಟಿ ಹೊಡೆಯುತ್ತಿದ್ದಾರೆ. ಇನ್ನೂ ಕೆರೆಯಲ್ಲಿ ಮಣ್ಣು ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಎತ್ತುತ್ತಿರುವದರಿಂದಾಗಿ ದೊಡ್ಡದೊಡ್ಡ ಹಳ್ಳಗಳು ನಿರ್ಮಾಣವಾಗಿದ್ದು, ಈಜಲು ಹೋದ ಮಕ್ಕಳು ನೀರಿನ ಹಾಳ ತಿಳಿಯದೆ ಬಿದ್ದು ಸಾಯುತ್ತಿರುವ ಘಟನೆಗಳು ನಡೆಯುತ್ತಿವೆ.

ಇನ್ನೂ ಮಣ್ಣು ಎತ್ತುವ ದಂಧೆ  ರಾಜಾರೋಷವಾಗಿ ನಡೆಯುತ್ತಿದ್ದು, ಹೀಗಾಗಿ ಅರಣ್ಯ ಇಲಾಖೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೆಡಲಾಗಿರುವ ಗಿಡಗಳನ್ನೂ ಕಿತ್ತುಹಾಕಿ ಮಣ್ಣು ತುಂಬಲಾಗುತ್ತಿದೆ. ಇದರಿಂದ ಕೆರೆ ಅಂಚಿನಲ್ಲಿ ದೊಡ್ಡದೊಡ್ಡ ಹಳ್ಳ ಬಿದ್ದಿದ್ದು ಗ್ರಾ ಮದ ಹುಡುಗನೊಬ್ಬ ಬಿದ್ದು ಸತ್ತಿದ್ದರೂ ಅಧಿಕಾರಿಗಳು ಡೋಂಟ್ ಕೇರ್ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೂ ಗ್ರಾಮದ ಕೆರೆಯಲ್ಲಿ ಇಷ್ಟೆ ಲ್ಲಾ ಅಕ್ರಮಗಳ ಬಗ್ಗೆ ಗ್ರಾಮಸ್ಥರು ತಾಲೂಕಿನ ಅಧಿಕಾರಿಗಳಿಗೆ ದೂರು ನೀಡಿದ್ರು, ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.