Home Elections 2019 JDS ಜೊತೆ ಕೈ ಜೋಡಿಸಲು ಇನ್ನೂ ಕಾಯುತ್ತಿದೆ BJP..? HDK ಜೊತೆ ಅಮಿತ್ ಷಾ ಸಂಪರ್ಕ..?...

JDS ಜೊತೆ ಕೈ ಜೋಡಿಸಲು ಇನ್ನೂ ಕಾಯುತ್ತಿದೆ BJP..? HDK ಜೊತೆ ಅಮಿತ್ ಷಾ ಸಂಪರ್ಕ..? ಮೈತ್ರಿಮುರಿದು ಬೀಳುವುದನ್ನೇ ಕಾಯುತ್ತಿರೋ BJP

2858
0
SHARE

ಲೋಕಸಭಾ ಚುನಾವಣೆ ಗೆಲುವಿಗಾಗಿ ಬಿಜೆಪಿ ಮಾಸ್ಟರ್ ಪ್ಲಾನ್.ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಾ ಎಂಬ ಕುತೂಹಲ ಶುರುವಾಗಿದೆ. ಕರ್ನಾಟಕದಲ್ಲಿ ಹೆಚ್ಚು ಸೀಟ್ ಪಡೆಯಲು ಬಿಜೆಪಿ ಚಾಣಾಕ್ಯನ ರಣತಂತ್ರ.ಯಾಕಂದ್ರೆ ಲೋಕಾಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಪ್ಲಾನ್ ಮಾಡುತ್ತಿದೆ… ಜೆಡಿಎಸ್ ಜೊತೆ ಕೈ ಜೋಡಿಸಲು ಇನ್ನೂ ಕಾಯುತ್ತಿದೆ ಬಿಜೆಪಿ..?ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಅಮಿತ್ ಷಾ ಸಂಪರ್ಕ..?ಹೀಗಾಗಿ ಬಿಜೆಪಿ ಚಾಣಕ್ಯ ಅಮಿತ್ ಷಾ ರಣತಂತ್ರಗಳನ್ನು ಈಗಿನಿಂದಲೇ ರೂಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆಗಳು ಹೆಚ್ಚಾಗಿದೆ…
ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದು ಬಿದ್ರೆ ಕೈಜೋಡಿಸೋ ಭರವಸೆ, ಹೀಗಾಗಿ ಇನ್ನೂ ಕೂಡ ಅಮಿತ್ ಷಾ ಕರ್ನಾಟಕ ಸಿಎಂ ಕುಮಾರಸ್ವಾಮಿ ಜೊತೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ. ಈಗಾಗಲೇ ಕುಮಾರಸ್ವಾಮಿಯವರ ಬಳಿ ಮಾತುಕತೆ ನಡೆಸಿರುವ ಅಮಿತ್ ಷಾ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಬಿದ್ದರೆ ನಿಮಗೆ ನಾವು ಬೆಂಬಲ ನೀಡುತ್ತೇವೆಂದು ಕುಮಾರಸ್ವಾಮಿಯವರಿಗೆ ಭರವಸೆ ನೀಡಿದ್ದಾರಂತೆ…ಕಾಂಗ್ರೆಸ್-JDS ಮೈತ್ರಿಮುರಿದು ಬೀಳುವುದನ್ನೇ ಕಾಯುತ್ತಿರೋ BJP. ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಜೆಡಿಎಸ್ ಜೊತೆ ಬಿಜೆಪಿ ಸಾಥ್ ನೀಡಿದ್ರೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಠಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿನಾಯಕರು ಇದ್ದಾರೆ.ಇದರಿಂದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಲಾಭ….

LEAVE A REPLY

Please enter your comment!
Please enter your name here