Home Elections 2019 “JDS ಯಾಕೆ ಸಂಭ್ರಮಿಸುತ್ತಿದೆ? 37 ಸ್ಥಾನ ಗಳಿಸಿದ್ದಕ್ಕಾಗಿಯೇ? ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ” ಎಂದು ಕಿಡಿಕಾರಿದ ಅಮಿತ್...

“JDS ಯಾಕೆ ಸಂಭ್ರಮಿಸುತ್ತಿದೆ? 37 ಸ್ಥಾನ ಗಳಿಸಿದ್ದಕ್ಕಾಗಿಯೇ? ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ” ಎಂದು ಕಿಡಿಕಾರಿದ ಅಮಿತ್ ಶಾ…

3607
0
SHARE

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಪವಿತ್ರ ಮೈತ್ರಿ ಅಂತಾ ಅಮಿತ್ ಶಾ ಕಿಡಿಕಾರಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಹುಮತ ಸಾಬೀತಿಗೆ ಯಡಿಯೂರಪ್ಪ 7 ದಿನಗಳ ಕಾಲಾವಕಾಶ ಕೇಳಿದ್ದರು ಎಂಬ ಕಾಂಗ್ರೆಸ್‌ ಹೇಳಿಕೆ ಸುಳ್ಳು… ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್‌‌ನ ವಕೀಲರು ಸುಳ್ಳು ಹೇಳಿದ್ದಾರೆ ಎಂದ್ರು. ಕರ್ನಾಟಕದಲ್ಲಿ ಕಾಂಗ್ರೆಸ್‌‌- ಜೆಡಿಎಸ್‌‌ ಮೈತ್ರಿ ಜನಾದೇಶದ ವಿರುದ್ಧವಾಗಿದ್ದು, ಅದೊಂದು ಅಪವಿತ್ರ ಮೈತ್ರಿ. ರಾಜ್ಯದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ… ಪಕ್ಷದ ಶೇಕಡವಾರು ಮತಗಳಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ , ಕರ್ನಾಟಕದಲ್ಲಿ ಹೊರಬಿದ್ದ ಜನಾದೇಶ ಸ್ಪಷ್ಟವಾಗಿದ್ದು, ಅದು ಕಾಂಗ್ರೆಸ್‌ ವಿರೋಧಿ ಆಗಿದೆ. ಆದರೂ ಕಾಂಗ್ರೆಸ್‌ ಸಂಭ್ರಮಿಸುತ್ತಿರುವುದೇಕೆ? ಸಚಿವ ಸಂಪುಟದ ಅರ್ಧದಷ್ಟು ಜನ ಸೋಲು ಕಂಡಿದ್ದಾರೆ…ಸ್ವತಃ ಮುಖ್ಯಮಂತ್ರಿಯೇ ಒಂದು ಕ್ಷೇತ್ರದಲ್ಲಿ ಸೋತಿದ್ದಾರೆ. ಹಾಗೆಯೇ, ಜೆಡಿಎಸ್‌‌ ಯಾಕೆ ಸಂಭ್ರಮಿಸುತ್ತಿದೆ? 37 ಸ್ಥಾನ ಗಳಿಸಿದ್ದಕ್ಕಾಗಿಯೇ? ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಶಾ ವ್ಯಂಗ್ಯವಾಡಿದ್ರು…

LEAVE A REPLY

Please enter your comment!
Please enter your name here