Home Home ಇಪ್ಪತ್ತೈದು ಕೋಟಿಯ ದುಡ್ಡಿನ ಚೀಲ…!! ಮಂತ್ರಿಗಿರಿ ಮನೆ ಬಾಗಿಲಿಗೆ ಬಂದಾಗ ಒದ್ದು ಕಳಿಸಿದ ಸತ್ಯಣ್ಣ **??

ಇಪ್ಪತ್ತೈದು ಕೋಟಿಯ ದುಡ್ಡಿನ ಚೀಲ…!! ಮಂತ್ರಿಗಿರಿ ಮನೆ ಬಾಗಿಲಿಗೆ ಬಂದಾಗ ಒದ್ದು ಕಳಿಸಿದ ಸತ್ಯಣ್ಣ **??

1329
0
SHARE

ಸತ್ಯನಾರಾಯಣ, ಶಿರಾ ಸತ್ಯನಾರಾಯಣ ಅಂದ್ರೆ ಇಡೀ ಕರ್ನಾಟಕಕ್ಕೆ ಗೊತ್ತಾಗುವುದು. ಸೌಮ್ಯಜೀವಿ, ಮೃದು ಭಾಷಿ, ಜನತಾ ಪರಿವಾರದ ಹಿರಿಯ ಕೊಂಡಿ,ಶಿರಾ ಕ್ಷೇತ್ರದ ಹಾಲಿ ಶಾಸಕ ಮಾಜಿ ಸಚಿವ ಸತ್ಯನಾರಾಯಣ. ಇಂದು ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಬೆಳಗ್ಗೆ ಹನ್ನೊಂದು ಗಂಟೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.

ದೇವೇಗೌಡರ ಅಪ್ಪಟ ಅಭಿಮಾನಿ ಹಾಗೂ ಅವರ ಹಿಂಬಾಲಕರಲ್ಲಿ ಎಂದಿಗೂ ಮೊದಲಿಗರಾಗಿದ್ದ ಸತ್ಯನಾರಾಯಣ ಜನತಾ ಪರಿವಾರದ ಹಿರಿಯ ಜೀವಿ. ತಮ್ಮ ಬದುಕಿನ ಕೊನೆಯ ದಿನದವರೆಗೂ ದೇವೇಗೌಡರ ಅನುಯಾಯಿಯಾಗಿ ಅವರು ಹೋದ ಕಡೆಯಲ್ಲೆಲ್ಲ ಅವರನ್ನು ಹಿಂಬಾಲಿಸಿ ಕೊನೆಗೆ ಜಾತ್ಯಾತೀತ ಜನತಾದಳದಲ್ಲೆ ಉಳಿದು ನಾಯಕತ್ವಕ್ಕೆ ಹಾಗೂ ಪಕ್ಷಕ್ಕೆ ನಿಷ್ಠೆಯನ್ನು ತೋರಿದವರು.

ತೀರಾ ಇತ್ತೀಚೆಗೆ ಯಡಿಯೂರಪ್ಪ ಸರ್ಕಾರ ಮಾಡುವಾಗ ಮಂತ್ರಿಗಿರಿ ಅವಕಾಶ ವಂಚಿತ ಸತ್ಯನಾರಾಯಣರ ಮನೆಗೆ ತಮಗೆ ಬೇಕಾದ ಆತ್ಮೀಯರ ಮೂಲಕ 25 ಕೋಟಿ ದುಡ್ಡು ಹಾಗೂ ಮಂತ್ರಿಗಿರಿ ಪಟ್ಟದ ಆಹ್ವಾನವನ್ನು ಸತ್ಯನಾರಾಯಣ ಅವರ ಮನೆಗೆ ಕಳುಹಿಸಿದಾಗ ಅದನ್ನು ನಯವಾಗಿ ತಿರಸ್ಕರಿಸಿದ ಅಪ್ಪಟ ಸ್ವಾಭಿಮಾನಿ ರಾಜಕಾರಣಿ.

1994ರ ಚುನಾವಣೆಯಲ್ಲಿ ಗೆದ್ದು ಪ್ರಥಮ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ ಸತ್ಯನಾರಾಯಣ್ ಜೆ.ಎಚ್.ಪಟೇಲರ ಮಂತ್ರಿ ಮಂಡಲದಲ್ಲಿ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದರು. ನಂತರ 2003ರ ಚುನಾವಣೆಯಲ್ಲಿ ಮತ್ತೆ ಗೆಲುವನ್ನು ಸಾಧಿಸಿದರಾದರೂ ಮಂತ್ರಿಯಾಗುವ ಸೌಭಾಗ್ಯ ಅವರಿಗೆ ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ದೊರೆಯಲಿಲ್ಲ ಇವರ ಜಾಗವನ್ನು ದೇವೇಗೌಡರ ಮತ್ತೊಬ್ಬ ಹಿಂಬಾಲಕ ಚೆನ್ನಿಗಪ್ಪ ಆಕ್ರಮಿಸಿಕೊಂಡರು.

ಮತ್ತೆ 2018 ರ ಚುನಾವಣೆಯಲ್ಲಿ ಗೆದ್ದರು, ಆಗಲೂ ಕೂಡ ಕುಮಾರಸ್ವಾಮಿ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗಲೂ ಇವರಿಗೆ ಮಂತ್ರಿಗಿರಿ ದೊರೆಯಲಿಲ್ಲ.ಈ ಬಾರಿ ತುಮಕೂರು ಕೋಟದಲ್ಲಿ ಮಂತ್ರಿಯಾಗಿದ್ದು ಗುಬ್ಬಿ ಶಾಸಕ ಶ್ರೀನಿವಾಸ್. ಎರಡು ಬಾರಿ ಮಂತ್ರಿಗಿರಿ ತಪ್ಪಿಸಿಕೊಂಡ ಸತ್ಯನಾರಾಯಣ್ ಯಾವುದೇ ರೀತಿಯ ಹತಾಶೆಯನ್ನು ನಾಯಕತ್ವ ಹಾಗೂ ಪಕ್ಷದ ವಿರುದ್ಧ ತೋರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಸತ್ಯನಾರಾಯಣ್ ಅವರನ್ನು ಕೆಎಸ್ಆರ್ಟಿಸಿ ಅಧ್ಯಕ್ಷರನ್ನಾಗಿ ಮಾಡಿದರೂ ಕೂಡ ಅದು ಪ್ರಯೋಜನಕ್ಕೆ ಬರಲಿಲ್ಲ.

ವಿಧಾನಸಭೆ ಮೊಗಸಾಲೆಯ ಆಡಳಿತ ಪಕ್ಷದ ಕೊನೆಯ ತುದಿಯಲ್ಲಿ ಸ್ಮೋಕಿಂಗ್ ಕಾರ್ನರ್ ನಲ್ಲಿ ಸದಾ ಸಿಗರೇಟ್ ಎಳೆಯುತ್ತಾ ಪತ್ರಕರ್ತರು, ಶಾಸಕ ಮಿತ್ರರೊಡನೆ ಹರಟುತ್ತಿದ್ದ ಸತ್ಯನಾರಾಯಣ್ ಸದಾ ಹಸನ್ಮುಖಿಯಾಗಿದ್ದರು. ಎಂದೂ ಕೂಡ ಅಧಿಕಾರದ ಹಿಂದೆ ಹೋಗದೆ ದೇವೇಗೌಡರ ನಾಯಕತ್ವಕ್ಕೆ ಜೈ ಎನ್ನುತ್ತಾ, ಪಾಲಿಗೆ ಬಂದಿದ್ದೇ ಪಂಚಾಮೃತ ಎಂಬಂತೆ ಬದುಕಿದ್ದರು. ಇತ್ತೀಚಿನ ದಿನಗಳಲ್ಲಿ ಆಪರೇಷನ್ ಕಮಲ ನಡೆಯುವಾಗ ಬಿಜೆಪಿ ಪಾಳ್ಯದಲ್ಲಿ ಸತ್ಯನಾರಾಯಣ ಅವರ ಹೆಸರು ಬಲವಾಗಿ ಕೇಳಿ ಬರುತ್ತಿತ್ತಾದರೂ ಸತ್ಯನಾರಾಯಣ್ ಎಂದೂ ಕೂಡ ದೇವೇಗೌಡರನ್ನು ದಾಟಿ ಹೋದವರಲ್ಲ, ಅದು ಕೊನೆಯವರೆಗೂ ಅದನ್ನು ಉಳಿಸಿಕೊಂಡು ಬದುಕಿದವರು ಸ್ವಾಭಿಮಾನಿ ಸತ್ಯನಾರಾಯಣ್.

ಜೆ.ಎಚ್.ಪಟೇಲ್ ಮಂತ್ರಿಮಂಡಲದಲ್ಲಿ ಕಾರ್ಮಿಕ ಮಂತ್ರಿಯಾಗಿದ್ದಾಗ ತಮ್ಮ ಸ್ವಕ್ಷೇತ್ರ ಶಿರಾದಲ್ಲಿ ಶೇಂಗಾ ಮಾರುಕಟ್ಟೆ ಗಲಾಟೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದಾಗ ಆ ಗಲಾಟೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಸತ್ಯನಾರಾಯಣ್. ರಾಜೀನಾಮೆ ನೀಡಿ ಸರ್ಕಾರಿ ಕಾರನ್ನು ಹಿಂತಿರುಗಿಸಿ ವಿಧಾನಸೌಧದಿಂದ ಶಾಸಕರ ಭವನದತ್ತ ನಡೆದುಕೊಂಡೇ ಹೊರಟು ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದವರು ಬಿ.ಸತ್ಯನಾರಾಯಣ್

LEAVE A REPLY

Please enter your comment!
Please enter your name here