ಉದ್ಯೋಗದ ವಿಚಾರದಲ್ಲಿ ಖಿನ್ನತೆ: ಅಪಾರ್ಟ್ ಮೆಂಟ್ ವೊಂದರಲ್ಲೇ ಆತ್ಮಹತ್ಯೆಗೆ ಶರಣಾದ ಮಹಿಳೆ

ಅಪರಾಧ ಬೆಂಗಳೂರು

ಬೆಂಗಳೂರು: ದಾಸನಪುರ ಎಪಿಎಂಸಿ ಬಳಿಯ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡು ಘಟನೆ ಬೆಳಕಿಗೆ ಬಂದಿದೆ. ಫ್ಯಾನ್‌ಗೆ ನೇಣುಬಿಗಿದುಕೊಂಡು 32ವರ್ಷದ ಶ್ವೇತಾ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು 6 ವರ್ಷದ ಹಿಂದೆ ಸೈಯದ್‌ ಎಂಬುವವರ ಜೊತೆ ವಿವಾಹವಾಗಿತ್ತು. ಖಾಸಗಿ ಇನ್ಸೂರೆನ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶ್ವೇತ ಉದ್ಯೋಗದ ವಿಚಾರದಲ್ಲಿ ಕಿನ್ನತೆಗೆ ಒಳಗಾಗಿ ಆತ್ಮಹತ್ಯೆ ಎಂದು ಮೃತ ಶ್ವೇತಾ ಸಂಬಂಧಿ ಮೇಘಾ ತಿಳಿಸಿದ್ದಾರೆ. ನೆಲಮಂಗಲ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ವರದಿ ಮಾಡಲು ತೆರಳಿದ ಖಾಸಗಿ ಸುದ್ದ ಸಂಸ್ಥೆಯ ವರದಿಗಾರನ ಮೇಲೆ ಕಲ್ಲಿನಿಂದ ಹೊಡೆಯಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೈಯಲ್ಲಿದ್ದ ಕ್ಯಾಮಾರ ಕಸಿಯಲು ಯತ್ನಿಸಿದ್ದಾರೆ ಸುದ್ದಿ ಮಾಡದಂತೆ ಧಮ್ಕಿ ಹಾಕಿ ಮೃತಳ ಸೋದರ ಮಾವ ನಾರಾಯಣ ಎಂದು ತಿಳಿದುಬಂದಿದೆ. ಹೀಗಾಗಿ ಇನ್ಮುಂದೆ ನಿಯಮದಂತೆ ಮರಣೋತ್ತರ ಪರೀಕ್ಷೆ ವೇಳೆ ಯಾವುದೇ ಪೊಲೀಸರು ಇರಲಿಲ್ಲ. ಮಾದನಾಯ ಕನಹಳ್ಳಿ ಪೊಲೀಸ್‌ ಠಾಣೆಯಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published.