ನೌಕರಿ ಬೇಕಂದ್ರೆ ಯುವತಿಯರು ಮಂಚ ಹತ್ತಬೇಕು: ಶಾಸಕ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

ಜಿಲ್ಲೆ

ಕಲಬುರಗಿ: ಇದು ಕರುನಾಡಿನ ಹೆಮ್ಮೆಯ ಯುವತಿಯರಿಗೆ ಆಗಿರೋ ಅವಮಾನ.ಇದು ಕರುನಾಡಿನ ಉದ್ಯೋಗಸ್ಥ ಹೆಣ್ಣುಮಕ್ಕಳಿಗೆ ಆಗಿರೋ ಅವಮಾನ. ವಿಪರ್ಯಾಸ ಅಂದ್ರೆ ಅವಮಾನ ಆಗೋ ರೀತಿಯಲ್ಲಿ ಮಾತನಾಡಿದ್ದು ಕೈ ಪಕ್ಷದ ಓರ್ವ ಜವಾಬ್ದಾರಿ ಶಾಸಕ. ಅಷ್ಟಕ್ಕೂ ಆ ಜನಪ್ರತಿನಿಧಿ ಯುವಕ ಯುವತಿಯರಿಗೆ ಮಾಡಿದ ಅಪಮಾನವಾದ್ರೂ ಏನು ಇಲ್ಲಿದೆ ಒಂದು ರಿಪೋರ್ಟ್.

ಎಸ್..ಕೇಳೋಕೆ ಈ ಮಾತು ಅಸಹ್ಯವಾಗುತ್ತೆ..ಯಾರೋ ದಾರೀಲಿ ಹೋಗೋರು ಹೇಳಿದ್ರೆ ಕೇರ್ ಲೆಸ್ ಮಾಡಬಹುದು..ಆದ್ರೆ ಹೇಳಿಕೆ ಕೊಟ್ಟಿದ್ದು ಚಿತ್ತಾಪುರ ಕ್ಷೇತ್ರದ ಜನನಾಯಕ ಪ್ರಿಯಾಂಕ್ ಖರ್ಗೆ. ಹೌದು ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಸರ್ಕಾರದ ವಿರುದ್ಧ ತಿರುಗಿ ಬೀಳುತಿದ್ದ ಪ್ರಿಯಾಂಕ್ ಇವತ್ತು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ಮಾಡಿದ್ರು. ಯಥಾಪ್ರಕಾರ ಸರ್ಕಾರದ ವಿರುದ್ಧ ಮಾತಾಡ್ತಾ ಒಂದು ಕಾಂಟರ್ವರ್ಸಿ ಹೇಳಿಕೆ ಕೊಟ್ರು.

ಈ ಬಿಜೆಪಿ ಸರ್ಕಾರ ಲಂಚ ಮಂಚದ ಸರ್ಕಾರವಾಗಿದೆ ಅಂತ ಆ ಮಾತಿಗೆ ಡೆಫನೇಷನ್ ಸಹ ಕೊಟ್ರು. ಅದೇನೂಂತ ನೀವೇ ಕೇಳಿ. ಸರ್ಕಾರ ನೌಕರಿ ಕೊಡಿಸುವಲ್ಲಿ ವಿಫಲವಾಗಿದೆ. ಯುವತಿಯರಿಗೆ ನೌಕರಿ ಬೇಕಳ್ದ್ರೆ ಮಂಚ ಹತ್ತಬೇಕು ಯುವಕರು ಲಂಚ ಕೊಡಬೇಕು ಅಂದ್ರು. ಮಾತು ಮುಂದುವರಿಸುತ್ತಾ ಸಿಎಂ ಬೊಮ್ಮಾಯಿಗೆ ತಮ್ಮ ಮಂತ್ರಿ ಮಂಡಲದವರ ಮೇಲೆ ಕಂಟ್ರೋಲ್ ಇಲ್ಲ ಅಂದ್ರು. ಹೀಗೆ ಸರ್ಕಾವನ್ನ ಟೀಕಿಸೋ ಭರದಲ್ಲಿ ತಾವೇ ಯಡವಟ್ಟು ಮಾಡಿಕೊಂಡ್ರು ಪ್ರಿಯಾಂಕ್..ಈ ಮಾತು ಕೇಸರಿ ಪಡೆಯಲ್ಲಿ ಕೆಂಡದಂತ ಕೋಪ ತರಿಸಿದೆ.

Leave a Reply

Your email address will not be published.