ಜು.15ರಿಂದ ಎಲ್ಲಾ ವಯಸ್ಕರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್: ಕೇಂದ್ರ ಸರ್ಕಾರ

ರಾಷ್ಟ್ರೀಯ

ನವದೆಹಲಿ: 18ರಿಂದ 59 ವಯೋಮಾನದವರಿಗೆ ಕೋವಿಡ್‌ ಬೂಸ್ಟರ್‌ ಡೋಸ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದೆ. 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಭಾಗವಾಗಿ ಬೂಸ್ಟರ್‌ ಡೋಸ್‌ನ್ನು ದೇಶದ ಜನತೆಗೆ ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಜು.15ರಿಂದ 75 ದಿನಗಳ ವರೆಗೆ ಉಚಿತವಾಗಿ ಬೂಸ್ಟರ್‌ ಡೋಸ್‌ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.

18-59 ವಯೋಮಾನದ 77 ಕೋಟಿ ಜನಸಂಖ್ಯೆ ದೇಶದಲ್ಲಿದ್ದು, ಈ ಪೈಕಿ ಕೇವಲ ಶೇ.1 ಕ್ಕಿಂತ ಕಡಿಮೆ ಮಂದಿ ಬೂಸ್ಟರ್‌ ಡೋಸ್‌ ಪಡೆದುಕೊಂಡಿದ್ದಾರೆ. 60 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಅಂದಾಜು 16 ಕೋಟಿ ಜನರ ಪೈಕಿ ಶೇ.26 ಮಂದಿ ಸೇರಿದಂತೆ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ. ಸರ್ಕಾರವು 75 ದಿನಗಳ ಕಾಲ ಲಸಿಕೆ ನೀಡಿಕೆಯ ವಿಶೇಷ ಆಂದೋಲನವನ್ನು ಪ್ರಾರಂಭಿಸಲು ಯೋಜಿಸಿದೆ. ಈ ಅವಧಿಯಲ್ಲಿ 18 ರಿಂದ 59 ವರ್ಷ ವಯಸ್ಸಿನವರಿಗೆ ಜುಲೈ 15 ರಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್‌ ಡೋಸ್‌ನ್ನು ಉಚಿತವಾಗಿ ನೀಡಲಾಗುವುದು.

 

Leave a Reply

Your email address will not be published.