Home Cinema K G F ಇoದ ಹೊತ್ತಿಕೊಂಡಿತಂತೆ ಡಬ್ಬಿಂಗ್ ಕಿಡಿ,ನಿಜವೇನು..! ರಜಿನಿ ಸಿನಿಮಾ ಕನ್ನಡದಲ್ಲಿ ಆಗುತ್ತಂತೆ ಬಿಡುಗಡೆ,...

K G F ಇoದ ಹೊತ್ತಿಕೊಂಡಿತಂತೆ ಡಬ್ಬಿಂಗ್ ಕಿಡಿ,ನಿಜವೇನು..! ರಜಿನಿ ಸಿನಿಮಾ ಕನ್ನಡದಲ್ಲಿ ಆಗುತ್ತಂತೆ ಬಿಡುಗಡೆ, ಹೌದೇನು..!

3275
0
SHARE

ಕೆ.ಜಿ.ಎಫ್.. ಕನ್ನಡದ ಕಹಳೆಯನ್ನ ವಿಶ್ವದ ಮೂಲೆ ಮೂಲೆಗೂ ಕೇಳುವಂತೆ ಊದಿದ ಸಿನಿಮಾ
ಗಲ್ಲಾಪೆಟ್ಟಿಗೆಯನ್ನೇ ಕೊಳ್ಳೆ ಹೊಡೆದು ನೂರು ಕೋಟಿ ಲೂಟಿ ಮಾಡುವತ್ತ ದಾಪುಗಾಲು ಹಾಕ್ತಿರುವ ಕೆ.ಜಿ.ಎಫ್, ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿರಂಗದವ್ರ ಕಣ್ಣನ್ನೂ ಕೆಂಪಾಗಿಸಿದೆ.
ಹೌದು, ಕೆ.ಜಿ.ಎಫ್ ಕನ್ನಡದ ಜೊತೆ ಜೊತೆಯಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಅವತರಣಿಕೆಯಲ್ಲಿ ಏಕಕಾಲಕ್ಕೆ ಆಯಾ ಭಾಷೆಗಳಲ್ಲಿ ಬಿಡುಗಡೆಯಾಯ್ತಲ್ಲ, ಆಗ, ಸಿನಿಪ್ರೇಮಿಗಳೂ ಚಿತ್ರವನ್ನ ಮುಗಿಬಿದ್ದು ನೋಡಿದ್ರು.

ಎಷ್ಟರ ಮಟ್ಟಿಗೆ ಅಂದ್ರೆ ತೆಲುಗು, ತಮಿಳು, ಮಲಯಾಳಂನಿಂದನೇ ಹತ್ತು ಕೋಟಿಗೂ ಅಧಿಕ ಹಣ ಕೆ,ಜಿ.ಎಫ್ ಖಜಾನೆಯನ್ನ ಬಂದು ಸೇರಿಕೊಂಡಿತ್ತು. ಅದು, ಜಸ್ಟ್ ಮೂರೇ ದಿನದಲ್ಲಿ. ಇದು, ಸಹಜವಾಗಿ ಅಲ್ಲಿನವರ ಕಣ್ಣುರಿಗೆ ಕಾರಣವಾಗಿದೆ. ಇದುವೇ ಮತ್ತೆ ಡಬ್ಬಿಂಗ್ ಕೂಗಿಗೆ ಜೀವ ತುಂಬುಬಂತೆ ಮಾಡಿದೆ.ಯಸ್ ನಿಮಗೆ ಗೊತ್ತಿರಲಿ ಕನ್ನಡ ನೆಲದಲ್ಲಿ ಡಬ್ಬಿಂಗ್ ಚಿತ್ರಗಳಿಗೆ ವಿರೋಧವಿದೆ. ಡಬ್ಬಿಂಗ್ ಬೇಕು ಬೇಡ ಅನ್ನುವ ತಿಕ್ಕಾಟನೂ ಅನೇಕ ವರ್ಷಗಳಿಂದ ನಡಿತಾನೇ ಇದೆ.

ಇಂಥಾ ವಿರೋಧದ ನಡುವೆಯೂ ಮೈ ಹಸ್ಬೆಂಡ್ ವೈಫ್, ಫಾಸ್ಟ್ & ಪ್ಯೂರಿಯಸ್ ೮, ವೀವೆಗಂ ಸೇರಿ ಕೆಲ ಚಿತ್ರಗಳೂ ಹಿಂದೆ ಡಬ್ ಆಗಿ ತೆರೆಗೆ ಬಂದ ಉದಾಹರಣೆನೂ ಇವೆ. ಬಟ್, ಡಬ್ ಆಗಿ ಹಿಂದೆ ತೆರೆಗೆ ಬಂದ ಸಿನಿಮಾಗಳೂ ಕನ್ನಡ ಚಿತ್ರರಂಗಕ್ಕೆ ಅಷ್ಟೊಂದು ಮಾರಕವಾಗಿರಲಿಲ್ಲ. ಆದ್ರೀಗ ಸ್ಥಿತಿ ಬದಲಾಗುವ ಭೀತಿ ಎದುರಾಗಿದೆ. ಡಬ್ಬಿಂಗ್ ಕಾವು ಹೆಚ್ಚಾಗಲಿದೆ. ಕಾರಣ, ಇದೀಗ ಡಬ್ಬಿಂಗ್ ಕಾಳಗಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಎಂಟ್ರಿ ಕೊಡುವ ಲಕ್ಷಣಗಳೂ ದಟ್ಟವಾಗಿವೆ.ಹೌದು, ಸದ್ಯ ತಮಿಳುನಾಡಿನ ಗಲ್ಲಿಗಳಿಂದ ತೂರಿ ಬಂದಿರುವ ಸುದ್ದಿಯ ಪ್ರಕಾರ್, ರಜಿನಿ ಅಭಿನಯದ ಪಿಟ್ಟಾವನ್ನ ಕನ್ನಡಿಕರಣಗೊಳಿಸುವ ಕೆಲ್ಸ ಜೋರಾಗಿ ನಡೆಯುತ್ತಿದೆ.

ಯಸ್.. ಇದು, ಅರಗಿಸಿಕೊಳ್ಳಬೇಕಾದ ಸತ್ಯ. ನಿಮಗೆ ಗೊತ್ತಿರಲಿ ಕೆ.ಜಿ.ಎಫ್ ತೆರೆಗೆ ಬಂದಾಗ ತಮಿಳು ಚಿತ್ರರಂಗದಲ್ಲಿ ಒಳಜಗಳವೇ ನಡೆದು ಹೋಗಿತ್ತು. ಕೆ.ಜಿ.ಎಫ್ ಚಿತ್ರವನ್ನ ವಿತರಣೆ ಮಾಡಿದ್ದ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ವಿಶಾಲ್ ವಿರುದ್ಧ ವಿಜಯ್ ಸೇದುಪತಿ ತಿರುಗಿಯೂ ಬಿದ್ದಿದ್ದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ತಮಿಳು ಚಿತ್ರರಂಗದ ವಿರುದ್ಧ ವಿಶಾಲ್ ವ್ಯವಸ್ಥಿತ ಪಿತೂರಿ ಮಾಡ್ತಿದ್ದಾರೆ ಅನ್ನುವ ಆರೋಪನೂ ಕೇಳಿ ಬಂದಿತ್ತು.

ಇನ್ನೂ ಇದ್ರ ನಡುವೆನೇ ಕೆ.ಜಿ.ಎಫ್ ಎದುರು ಬಂದಿದ್ದ ರಜಿನಿ ಅಳಿಯ ಧನುಷ್ ಅಭಿನಯದ ಮಾರಿ ೨ ಮಕಾಡೆ ಮಲಗಿತು. ಇಷ್ಟೇ ಸಾಕಿತ್ತು.. ಡಬ್ಬಿಂಗ್ ಕೂಗು ಪ್ರತಿಧ್ವನಿಸಲು. ಹಾಗಾಗೇ, ಕನ್ನಡ ಸಿನಿಮಾ ಡಬ್ ಮಾಡಿ, ಕನ್ನಡದ ಜೊತೆ ಜೊತೆಯಲ್ಲಿ ತಮಿಳಲ್ಲೂ ಡಬ್ ಮಾಡಿ.. ಎರಡನ್ನೂ ಏಕಕಾಲಕ್ಕೆ ಅವರು ತಮಿಳುನಾಡಿನಲ್ಲಿ ಬಿಡುಗಡೆ ಮಾಡುವುದಾದ್ರೆ, ನಾವ್ಯಾಕೆ ಮಾಡಬಾರದು ಅನ್ನುವ ಪ್ರಶ್ನೆಯೊಂದಿಗೆ ಇದೀಗ ತಮಿಳು ಚಿತ್ರರಂಗ ಡಬ್ಬಿಂಗ್‌ಗೆ ಮುಂದಾಗಿದೆ. ಪಿಟ್ಟಾ ಮೂಲಕ ಶುಭಾರಂಭ ಮಾಡಲು ಸಿದ್ಧವಾಗಿದೆ.

ಅಲ್ಲಿಗೆ ಸಂಕ್ರಾಂತಿಗೆ ರಜಿನಿ ತಮಿಳು ಹಾಗೂ ಕನ್ನಡ ಮಾತನಾಡುತ್ತಾನೇ ಕರ್ನಾಟಕದಲ್ಲಿ ಅಬ್ಬರಿಸೋದು ಬಹುತೇಕ ಖಾತ್ರಿಯಾದಂತಾಗಿದೆ.ಬರೀ ತಮಿಳು ಚಿತ್ರರಂಗವಷ್ಟೇ ಕೆ.ಜಿ.ಎಫ್ ಕಂಡು ಉರಿಉರಿ ಅನ್ನುತ್ತಿಲ್ಲ. ತೆಲುಗು ಸಿನಿಮಾರಂಗ ಕೂಡಾ ತಮಿಳು ಚಿತ್ರರಂಗಕ್ಕೆ ಇದೇ ವಿಚಾರದಲ್ಲಿ ಸಾಥ್ ನೀಡಲು ಮುಂದಾಗಿದೆ. ನಾವು ನಮ್ಮ ಸಿನಿಮಾವನ್ನ ಕನ್ನಡಕ್ಕೆ ಡಬ್ ಮಾಡಿ ಏಕಕಾಲಕ್ಕೆ ಬಿಡುಗಡೆ ಮಾಡ್ತೀವಿ ಅನ್ನುತ್ತಿದೆ. ಹೌದು, ಇದೇ ಸಂಕ್ರಾಂತಿಗೆ ಚಿರಂಜೀವಿ ಮಗ ರಾಮ್ ಚರಣ್ ತೇಜಾ ಅಭಿನಯದ ವಿನಯ ವಿಧೇಯ ರಾಮಾ ಬಿಡುಗಡೆಯಾಗುತ್ತಿದೆ.

ಸಿನಿಮಾ ಮೇಲೆ ತುಂಬು ನಿರೀಕ್ಷೆಗಳೂ ಇವೆ. ಹಾಗಾಗೇ, ನಿರ್ದೇಶಕ ಬೋಯಾಪಟಿ ಸೀನು ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡಲು ಮುಂದಾಗಿದ್ದಾರೆ. ಏಕಕಾಲಕ್ಕೆ ತೆಲುಗು ಜೊತೆಯಲ್ಲಿ ಕನ್ನಡದ ಡಬ್ ವರ್ಷನ್ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ.ಒಟ್ನಲ್ಲಿ ಕೆ.ಜಿ.ಎಫ್‌ನ ಗೆಲುವಿನ ಕಹಾನಿ ಇದೀಗ ಮತ್ತೊಮ್ಮೆ ಡಬ್ಬಿಂಗ್‌ಗೆ ಜೀವ ತುಂಬಿದೆ. ಹಾಗಿದ್ದರೆ.. ಇನ್ಮುಂದೆ ತಮಿಳು ತೆಲುಗು ಚಿತ್ರಗಳೂ ಡಬ್ಬಿಂಗ್ ಸ್ವರೂಪದಲ್ಲಿ ಕನ್ನಡ ನೆಲದಲ್ಲಿ ಬಿಡುಗಡೆಯಾಗ್ತಾವಾ.. ಅದು, ಏಕಕಾಲಕ್ಕೆ. ಇದ್ರಿಂದ ಕನ್ನಡ ಚಿತ್ರರಂಗದ ಮೇಲಾಗುವ ಪರಿಣಾಮಗಳೇನು ಅನ್ನುವ ಪ್ರಶ್ನೆಗುತ್ತರ.. ಕಾಲವೇ ನೀಡಲಿದೆ.

LEAVE A REPLY

Please enter your comment!
Please enter your name here