Home Cinema K G F ಚಿತ್ರದ ಟಿಕೆಟ್ ಕೊಡದಿದ್ದಕ್ಕೆ ಬೆರಳನ್ನೇ ಕಟ್ ಮಾಡಿದ ಕಟುಕ..! ಬ್ಲಾಕ್ ಟಿಕೆಟ್...

K G F ಚಿತ್ರದ ಟಿಕೆಟ್ ಕೊಡದಿದ್ದಕ್ಕೆ ಬೆರಳನ್ನೇ ಕಟ್ ಮಾಡಿದ ಕಟುಕ..! ಬ್ಲಾಕ್ ಟಿಕೆಟ್ ಮಾರಾಟಗಾರನ ದಾಂಧಲೆ..!

351
0
SHARE

ಆತ ಥಿಯೇಟರ್ ನಲ್ಲಿ ಹೇಗೋ ಸಣ್ಣದೊಂದು ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಾ ಇದ್ದ..ಸಹವಾಷ ದೋಷ ಅನ್ನೋ ಹಾಗೆ ಬ್ಲಾಕ್ ಟಿಕೆಟ್ ಮಾರಾಟಗಾರನ ಜೊತೆ ಇದ್ದ ಸಣ್ಣ ಪರಿಚಯದಿಂದ, ತನ್ನ ಕೈಬೆರಳನ್ನೇ ಕಳೆದುಕೊಂಡಿದ್ದಾನೆ.ಕೆಜಿಎಫ್….. ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ..

ಇದೇ ಡಿಸೆಂಬರ್ 21 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸಾಕಷ್ಟು ಹವಾ ಎಬ್ಬಿಸಿರುವ ಈ ಸಿನಿಮಾಗೀಗ ಬ್ಲಾಕ್ ಟಿಕೆಟ್ ಮಾರಾಟಗಾರರ ಹಾವಳಿ ಶುರುವಾಗಿದೆ… ಇಲ್ಲೊಬ್ಬ ಬ್ಲಾಕ್ ಟಿಕೆಟ್ ಮಾರುವವ ಟಿಕೆಟ್ ಕೊಡದ ಕಾರಣ ಥೀಯೇಟರ್ ನ ಸ್ವೀಪರ್ ನ ಬೆರಳನ್ನೆ ಕಟ್ ಮಾಡಿದ್ದಾನೆ.

ಈಗೆ ಕೈಗೆ ಬ್ಯಾಂಡೇಜ್ ಹಾಕೊಂಡು ನಿಂತಿರೋ ವ್ಯಕ್ತಿ ಹೆಸ್ರು ಅರವಿಂದ್… ಮಾಗಡಿ ರಸ್ತೆಯ ವೀರೇಶ್ ಥಿಯೇಟರ್ ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡ್ತಾ ಇದ್ದಾನೆ. ಈತನಿಗೆ ಹಲವು ದಿನಗಳಿಂದ ಇದೇ ಥಿಯೇಟರ್ ಬಳಿ ಬ್ಲಾಕ್ ಟಿಕೆಟ್ ರಮೇಶ್ ಎಂಬಾತನ ಪರಿಚಯವಾಗಿತ್ತು. ಈತ ಕೆಜಿಎಫ್ ಸಿನಿಮಾಗೆ ಬ್ಲಾಕಲ್ಲಿ ಟಿಕೆಟ್ ಕೊಡಿಸುವಂತೆ ಅರವಿಂದನನ್ನ ಕೇಳಿದ್ದಾನೆ.

ಟಿಕಟ್ ಕೊಡಿಸಲು ನಿರಾಕರಿಸಿದ್ದು, ಕುಪಿತಗೊಂಡ ರಮೇಶ್ ಅರವಿಂದ್ ಮೇಲೆ ಏಕಾ ಏಕಿ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ.ಇನ್ನ ಹಲ್ಲೆಯಿಂದಾಗಿ ಅರವಿಂದ್ ನ ಎರೆಡೂ ಕೈಗಳಿಗೂ ಗಂಬೀರ ಗಾಯವಾಗಿದ್ದು, ಎಡಗೈನ ಬೆರಳೆ ಕಟ್ ಆಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೋಲೀಸ್ರು ಆರೋಪಿ ರಮೇಶನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದ್ರೆ ಎರೆಡೂ ಕೈಗಳಿಗೂ ಗಾಯವಾದ ಕಾರಣ ಅರವಿಂದ್ ಕೆಲಸ ಮಾಡಲಾಗದೆ ಪೋಷಕರ ಮೇಲೆ ಅವಲಂಭಿತನಾಗಿದ್ದಾನೆ…ಅದೇನೆ ಇರ್ಲಿ ಸಿಲಿಕಾನ್ ಸಿಟಿಯಲ್ಲಿ ಆಸ್ತಿ ಹೆಂಡ ಹಣಕ್ಕಾಗಿ ಹಲ್ಲೆ ಮಾಡಿರೋರನ್ನ ನೋಡಿರ್ತೀವಿ. ಆದ್ರೆ ಇಲ್ಲಿ ಬ್ಲಾಕ್ ಟಿಕೆಟ್ ಕೊಡಿಸಿಲ್ಲ ಅನ್ನೋ ಕಾರಣಕ್ಕೆ ಆತನ ಜೀವನ ನಡೆಸುವುದಕ್ಕೆ ಬೇಕಾದ ಕೈಬೆರಳನ್ನೆ ಕತ್ತರಿಸಿರುವುದು ದುರಂತವೇ ಸರಿ..

LEAVE A REPLY

Please enter your comment!
Please enter your name here