Home District ಕರ್ನಾಟಕದ “ಕೇಮ್ಕಾ” ಕೆ.ಮಥಾಯ್ ವೃತ್ತಿ ಬದುಕು ಇದೀಗ “ದಿ ಪ್ರೈಸ್ ಆಫ್ ಟ್ರುಥ್” ಪುಸ್ತಕವಾಗಿ...

ಕರ್ನಾಟಕದ “ಕೇಮ್ಕಾ” ಕೆ.ಮಥಾಯ್ ವೃತ್ತಿ ಬದುಕು ಇದೀಗ “ದಿ ಪ್ರೈಸ್ ಆಫ್ ಟ್ರುಥ್” ಪುಸ್ತಕವಾಗಿ ಶೀಘ್ರವೇ ಅನಾವರಣ

587
0

ವರದಿ: ಥಾಮಸ್ ಪುಷ್ಪರಾಜ್

ಬೆಂಗಳೂರು: “ಮಾಫಿಯಾಗಳು ಮನೆಗೆ ಬೆಂಕಿ ಹಾಕಿದ್ರೂ “ಈ ಅಧಿಕಾರಿ ತಲೆ ಕೆಡಿಸಿಕೊಳ್ಳಲಿಲ್ಲ.. 15 ವರ್ಷದಲ್ಲಿ 25ಕ್ಕೂ ಹೆಚ್ಚು ವರ್ಗಾವಣೆಯಾ ದ್ರೂ ದೃತಿಗೆಡಲಿಲ್ಲ.. ಸತ್ಯದ ಕಠಿಣ ಹಾದಿಯಲ್ಲಿ ಪ್ರಾಮಾಣಿಕತೆಯನ್ನೇ ಬೆಳಕಾಗಿಸಿಕೊಂಡ ದಕ್ಷ ಅಧಿಕಾರಿ ಇವರು. ಕೆ.ಮಥಾಯ್… ದಕ್ಷತೆ-ಪ್ರಾಮಾಣಿಕತೆಗೆ ಮತ್ತೊಂದು ಹೆಸರು.

ಸೇವೆಯುದ್ದಕ್ಕೂ ನಿಷ್ಠೆಯಿಂದ ಕೆಲಸ ಮಾಡಿದ್ದಕ್ಕೆ ಈ ಕೆಎಎಸ್ ಅಧಿಕಾರಿಗೆ ಸಿಕ್ಕ ಬಹುಮಾನ ಹತ್ತಿರತ್ತಿರ ಒಂದೂವರೆ ದಶಕಗಳ ವೃತ್ತಿಜೀವನದಲ್ಲಿ 28 ಕ್ಕೂ ಹೆಚ್ಚು ಬಾರಿ ವರ್ಗಾವಣೆ.ಆದರೂ ತಾನು ನಂಬಿದ ಸಿದ್ಧಾಂತದೊಂದಿಗೆ ಎಂದೂ ರಾಜಿ ಮಾಡಿಕೊಳ್ಳದ ನಿಷ್ಠೂರ ವ್ಯಕ್ತಿತ್ವ ಅವರದು.ಸೇವೆಯುದ್ದಕ್ಕೂ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗೇ ಉಳಿದ ಮಥಾಯ್ ಅವರದು ಅಕ್ಷರಶಃ ಹೋರಾಟದ ಬದುಕು.ದಕ್ಷತೆಯಿಂದಲೇ ಬದುಕು ನಡೆಸಬೇಕೆಂದುಕೊಳ್ಳುವವರಿಗೆ ಮಥಾಯ್ ಅವರದು ಮಾದರಿ ವ್ಯಕ್ತಿತ್ವ.

ಸೇವಾವೃತ್ತಿಯುದ್ಧಕ್ಕೂ ಮಥಾಯ್ ವಿರುದ್ಧ ನಡೆದ ಚಿತಾವಣೆಗಳು ಒಂದಾ ಎರಡಾ. ಆದ್ರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿವೃತ್ತಿ ಕ್ಷಣದವರೆಗೂ ಸತ್ಯದ ಸಾಕ್ಷಿಪ್ರಜ್ಞೆಯಾದವ್ರು.ಸ್ಥಿತಪ್ರಜ್ಞರಾಗೇ ಉಳಿದವರು.ಕೆಎಎಸ್ ಹುದ್ದೆಯಿಂದ ನಿವೃತ್ತವಾದ ಬಳಿಕ ಇದೀಗ ವಕೀಲರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇವರ ವೃತ್ತಿ ಬದುಕಿನ ಹತ್ತಲವು ಆಯಾಮಗಳನ್ನು ಬರಹವಾಗಿ ಕಟ್ಟಿಡುವ ವಿಶಿಷ್ಟ ಪ್ರಯತ್ನ ಪುಸ್ತಕದ ರೂಪದಲ್ಲಿ ನಡೆದಿದೆ. “ದಿ ಪ್ರೈಸ್ ಆಫ್ ಟ್ರುಥ್” ಪುಸ್ತಕವಾಗಿ ಮೂಡಿಬರುತ್ತಿರುವ ಈ ಪ್ರಯತ್ನಕ್ಕೆ ಶಿಕ್ಷಣ ತಜ್ಞೆ ಸಮೀರಾ ಫರ್ನಾಂಡೀಸ್ ಜೀವ ತುಂಬಿದ್ದಾರೆ.ಅಂದ್ಹಾಗೆ ಸಮೀರಾ ಈ ಪುಸ್ತಕದಲ್ಲಿ ಮಥಾಯ್ ವೃತ್ತಿ ಬದುಕಿನ ಸಾಕಷ್ಟು ರೋಚಕ ಸನ್ನಿವೇಶಗಳನ್ನು ದಾಖಲಿಸಿರುವುದು ವಿಶೇಷ.

ಕುಲಗೆಟ್ಟು ಹೋಗಿರುವ ಭ್ರಷ್ಟ ವ್ಯವಸ್ಥೆಯೊಳಗೆ ದಕ್ಷತೆ ಉಳಿಸಿಕೊಂಡು ಹೋಗುವುದು ಯಾವುದೇ ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಕ್ಲಿಷ್ಟ ಅಷ್ಟೇ ಅಲ್ಲ,ಸವಾಲು ಕೂಡ.ಹಾಗಂಥ ಅಂಥವರು ಇಲ್ಲವೆಂದೇನಲ್ಲ..ಬಹುತೇಕ ಭ್ರಷ್ಟರ ನಡುವೆ ಹುಡುಕೋದು ಕಷ್ಟ ಅಷ್ಟ.ಅಂಥಾ ಕೆಲವೇ ಕೆಲವು ಅಧಿಕಾರಿಗಳಲ್ಲಿ ಕರ್ನಾಟಕದ ಕೇಮ್ಕಾ ಎಂದೇ ಹೆಸರಾದ ಕೆ.ಮಥಾಯ್ ಕೂಡ ಒಬ್ಬರು.ಯಾವುದೇ ಸನ್ನಿವೇಶದಲ್ಲೂ ರಾಜಿ ಮಾಡಿಕೊಳ್ಳದೆ ಸೇವೆಯುದ್ದಕ್ಕೂ ಒಂದೇ ಒಂದು ಕಳಂಕ ಹಚ್ಚಿಕೊಳ್ಳದೆ ಕೆಲಸ ಮಾಡಿದ ಕೆ.ಮಥಾಯ್ ಸಾಕಷ್ಟು ಸಂದರ್ಭಗಳಲ್ಲಿ ಸರ್ಕಾರಕ್ಕೇ ನುಂಗಲಾರದ ತುಪ್ಪವಾದವರು.ಇವೆಲ್ಲವನ್ನೂ ದಾಖಲಿಸುವಂಥ ಕೆಲಸವನ್ನು ಶಿಕ್ಷಣ ತಜ್ಞೆ ಸಮೀರಾ ಫರ್ನಾಂಡೀಸ್ ಮಾಡಿದ್ದಾರೆ.

ದಿ ಪ್ರೈಸ್ ಆಫ್ ಟ್ರುಥ್ ಪುಸ್ತಕದಲ್ಲಿ ಕೆ.ಮಥಾಯ್ ಕರ್ನಾಟಕ ಸರ್ಕಾರಿ ಸೇವೆಗೆ ಸೇರಿದ 15 ವರ್ಷಗಳಲ್ಲಿ ಮಾಡಿದ ಕೆಲಸದ ಸಂಪೂರ್ಣ ಮಾಹಿತಿಗಳಿವೆ.ಅಕ್ರಮಗಳ ವಿರುದ್ಧ ಸಮರ ಸಾರಿದ ರೋಚಕ ಕಥೆಗಳಿವೆ..ಭ್ರಷ್ಟರ ಪಾಲಿಗೆ ಹೇಗೆಲ್ಲಾ ಸಿಂಹಸ್ವಪ್ನ ವಾದರು ಎನ್ನುವುದರ ಕುರಿತು ಕುತೂಹಲಕಾರಿ ಸನ್ನಿವೇಶಗಳಿವೆ.ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಅಧಿಕಾರಿ ನಿಷ್ಟೆ ಹಾಗೂ ಪ್ರಾಮಾ ಣಿಕತೆಯಿಂದ ದುಡಿಯಲು ಹೊರಟಾಗ ಪಟ್ಟಭದ್ರ ಹಿತಾಸಕ್ತಿಗಳು ಹೇಗೆಲ್ಲಾ ತಡೆಯೊಡ್ಡುವ ಕೆಲಸ ಮಾಡುತ್ತವೆ.ಯಾವೆಲ್ಲಾ ಅಡೆತಡೆಗಳು ಎದುರಾಗುತ್ತವೆ.ಪ್ರಾಣಕ್ಕೂ ಸಂಚಕಾರ ಎದುರಾಗುತ್ತದೆ ಎನ್ನುವುದನ್ನು ಸಾಕ್ಷೀಕರಿಸುವ ಘಟನಾವಳಿಗಳಿವೆ.

ಕೆ.ಮಥಾಯ್ ಅವರ ವೃತ್ತಿ ಜೀವನದ ಒಂದಷ್ಟು ಮಜಲುಗಳನ್ನು ನೋಡಿರುವ,ಸಾಕಷ್ಟು ಸನ್ನಿವೇಶಗಳಲ್ಲಿ ಅವರ ಜತೆಗಿದ್ದು ಬೆಂಬಲಿಸಿರುವ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ, ಇದು ಸಂಗ್ರಹಯೋಗ್ಯ ಹಾಗೂ ಅತ್ಯಪಯುಕ್ತ ಪುಸ್ತಕ ಎಂದಿದ್ದಾರೆ.ಹೊಸ ತಲೆಮಾರಿನ ಯುವ ಅಧಿಕಾರಿಗಳಿಗಂತೂ ಪ್ರೇರಣೆದಾಯಕ ಪುಸ್ತಕ ಎನ್ನುವುದರಲ್ಲಿ ಅನುಮಾನವಿಲ್ಲ. ದಕ್ಷತೆ-ಪ್ರಾಮಾಣಿಕತೆ ಸರ್ಕಾರಿ ಅಧಿಕಾರಿಗಳ ಉಸಿರಾಗಬೇಕೆನ್ನುವುದನ್ನು ಮಥಾಯ್ ವ್ಯಕ್ತಿತ್ವ ಪ್ರತಿಪಾದಿಸ್ತಾ ಹೋಗ್ತದೆ ಎಂದಿದ್ದಾರೆ.
ಇನ್ನು, ಹದಗೆಟ್ಟು ಹೋಗಿರುವ ಸಧ್ಯದ ವ್ಯವಸ್ಥೆಯಲ್ಲಿ ಪ್ರಾಮಾಣಿಕರಾಗುಳಿಯುವುದು ತೀರಾ ಕಷ್ಟ.ಹಾಗಂತ ಎಲ್ಲರೂ ಭ್ರಷ್ಟತೆ-ಅಕ್ರಮಕ್ಕೆ ಸಾಥ್ ಕೊಡ್ತಾ ಹೋದ್ರೆ ನಾವು ಸಮಾಜಕ್ಕೆ ಕೊಡುವ ಸಂದೇಶ ಏನು? ಅಧಿಕಾರಿಯಾಗಿ ಸಮಾಜವನ್ನು ಬದಲಿಸುವಂಥ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ.ಈ ಅವಧಿಯಲ್ಲಿ ನನ್ನ ಇತಿಮಿತಿಗಳಲ್ಲಿ ಸಾಕಷ್ಟನ್ನು ಮಾಡಿದ್ದೇನೆ..ಸಮಾಜಮುಖಿಯಾಗಿ ಚಿಂತಿಸುವಂಥ, ಕಾರ್ಯಪ್ರವೃತ್ತವಾಗುವಂಥ ಮನಸ್ತಿತಿಯನ್ನು ಅಧಿಕಾರಿಗಳು ಬೆಳಸಿಕೊಂಡ್ರೆ ಬದಲಾವಣೆ ಸಾಧ್ಯವೇನಲ್ಲ ಎನ್ನುತ್ತಾರೆ ಮಥಾಯ್.
ಮಥಾಯ್ ವೃತ್ತಿ ಬದುಕಿನ ಅನೇಕ ರೋಚಕ ಹಾಗೂ ಸ್ಪೂರ್ತಿದಾಯಕ ಸಂಗತಿಗಳನ್ನು ಒಳಗೊಂಡಿರುವ “ದಿ ಪ್ರೈಸ್ ಆಫ್ ಟ್ರುಥ್” ಪುಸ್ತಕ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ದಯವಿಟ್ಟು ಈ ಪುಸ್ತಕ ಕೊಂಡು ಓದಿ..ಏಕೆಂದ್ರೆ, ಪ್ರೇರಣೆಯಾಗಬಲ್ಲಂಥ ಒಂದು ಅತ್ಯುತ್ತಮ ಸಂಗ್ರಹಯೋಗ್ಯ ಪುಸ್ತಕವಾಗಿ ಇದು,ನಿಮ್ಮ ಮನೆಗಳ ಲೈಬ್ರರಿಗೆ ಸೇರುವುದರಲ್ಲಿ ಅನುಮಾನವೇ ಇಲ್ಲ

Previous articleನಾಳೆ ಬಿಬಿಎಂಪಿ ಬಜೆಟ್ ಮಂಡನೆ; ಆಡಳಿತಾಧಿಕಾರಿ ಗೌರವ ಗುಪ್ತಾರಿಂದ ನೈಜ ಲೆಕ್ಕಾಚಾರಕ್ಕೆ ತಕ್ಕಂತಹಾ ವಾಸ್ತವಿಕ ಬಜೆಟ್ ನಿರೀಕ್ಷೆ
Next articleಆಚಾರ್ಯವಾಣಿ: ಉದ್ಯೋಗ,ಆರೋಗ್ಯ,ಹಣಕಾಸಿನ ತೊಂದರೆಗಳಿಗೆ ಶೀಘ್ರ ಪರಿಹಾರ

LEAVE A REPLY

Please enter your comment!
Please enter your name here