ಕಾಡಾನೆ ದಾಳಿಯಿಂದ ಮೃತಪಟ್ಟ ರೈತ: ಅಂತ್ಯಸಂಸ್ಕಾರಕ್ಕೂ ಹಾಜರಾದ ಆನೆ

ಜಿಲ್ಲೆ

ಹಾಸನ: ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನರಹಂತಕ ಕಾಡಾನೆ ಹಾಜರಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಳಗಳಲೆ ಗ್ರಾಮದಲ್ಲಿ ನಡೆದಿದೆ.

ಶನಿವಾರ ಕಾಡಾನೆ ದಾಳಿಯಿಂದ ಕೆಳಗಳಲೆ ಗ್ರಾಮದ ಕೃಷ್ಣೇಗೌಡ (63) ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಜನ, ಸಕಲೇಶಪುರದಲ್ಲಿ ರಸ್ತೆ ತಡೆಯನ್ನೂ ನಡೆಸಿ ಪ್ರತಿಭಟಿಸಿದ್ದರು.

ಶನಿವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕೃಷ್ಣೇಗೌಡರ ಅಂತ್ಯಸಂಸ್ಕಾರ ನಡೆಸುತ್ತಿದ್ದ ವೇಳೆ  ದಾಳಿ ಮಾಡಿದ್ದ ಕಾಡಾನೆ ಅಂತ್ಯಸಂಸ್ಕಾರ ನಡೆಯುತ್ತಿರುವ ಸಮೀಪ ಕಾಣಿಸಿಕೊಂಡಿದೆ. ಇದರಿಂದ ಜನರು ಆತಂಕಗೊಂಡಿದ್ದು, ಜನರು ಕಿರುಚಾಡುತ್ತಿದ್ದಂತೆ ಆನೆ ಕಾಫಿತೋಟದೊಳಕ್ಕೆ ಹೋಗಿದೆ.

ನರಹಂತಕ ಆನೆ ಕಾಫಿ ತೋಟದೊಳಗೆ ಬೀಡುಬಿಟ್ಟಿರುವುದು ಸುತ್ತಮುತ್ತಲ ಜನರಿಗೆ ಮತ್ತಷ್ಟು ಆತಂಕ ಉಂಟುಮಾಡಿದೆ. ಹಂತಕ ಆನೆಯನ್ನು ಸೆರೆ ಹಿಡಿದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಮೂರು ದಿನ ಕಾರ್ಯಾಚರಣೆ ನಡೆಸಿ, ಪುಂಡಾಟಿಕೆ ನಡೆಸಿ, ಜನರ ಪ್ರಾಣತೆಗೆದಿದ್ದ ಎರಡು ಕಾಡಾನೆಗಳನ್ನು ಸೆರೆಹಿಡಿದಿದ್ದಾರೆ. ಇದೀಗ ಮತ್ತೊಂದು ಕಾಡಾನೆ ಕೂಡಾ ಜನರನ್ನು ಬಲಿಪಡೆದಿದ್ದು, ಇದೀಗ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ.

Leave a Reply

Your email address will not be published.