ಕೇರಳದ ಮೇಯರ್ ಗೆ ಕೂಡಿಬಂತು ಕಂಕಣ ಭಾಗ್ಯ; ಕಿರಿಯ ಶಾಸಕ ಸಚಿನ್ ದೇವ್ ಜೊತೆ ನಿಶ್ಚಿತಾರ್ಥ

ರಾಷ್ಟ್ರೀಯ

ತಿರುವನಂತಪುರಂ: ಕೇರಳದ ತಿರುವನಂತಪುರಂನ ಮೇಯರ್ ಆರ್ಯ ರಾಜೇಂದ್ರನ್ ಬಲುಸ್ಸೆರಿಯ ಶಾಸಕ ಸಚಿನ್ ದೇವ್ ಅವ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಆರ್ಯ ರಾಜೇಂದ್ರನ್ ಭಾರತದ ಅತ್ಯಂತ ಕಿರಿಯ ಮೇಯರ್ ಆಗಿದ್ದು, ಸಚಿನ್ ದೇವ್ ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಎಂಎಲ್‌ಎ ಆಗಿದ್ದಾರೆ. ಈ ಜೋಡಿ ಕೇರಳದ ತಿರುವನಂತಪುರಂನಲ್ಲಿರುವ ಎಕೆಜಿ ಸೆಂಟರ್‌ನಲ್ಲಿ ತಮ್ಮ ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂ ಡಿದ್ದಾರೆ. ಆರ್ಯ ರಾಜೇಂದ್ರನ್ ತಮ್ಮ 21ನೇ ವಸ್ಸಿನಲ್ಲಿ ಮೇಯರ್ ಆಗಿದ್ದರು. ಕಳೆದ ತಿಂಗಳಿನಲ್ಲಿ ಈ ಜೋಡಿ ಮದುವೆಯಾಗುವುದಾಗಿ ಘೋಷಿಸಿದ್ದರು. ಈ ಜೋಡಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ವಾದಿ)ದ ವಿದ್ಯಾರ್ಥಿ ವಿಭಾಗದ ಬಾಲಸಂಘದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪರಿಚಯ ವಾಗಿದ್ದರು. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜೋಡಿ ಮದುವೆಯಾಗುವ ನಿರೀಕ್ಷೆಯಿದೆ.

Leave a Reply

Your email address will not be published.