ಕಣ್ಣಿಗೆ ಕಾರದಪುಡಿ ಎರಚಿ ಮಾಂಗಲ್ಯ ಸರ ಕದಿಯಲು ಯತ್ನ: ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಐನಾತಿ ಕಳ್ಳರು

ಅಪರಾಧ ಜಿಲ್ಲೆ

ತುಮಕೂರು :ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಹಾಲುಗೊಂಡನಹಳ್ಳಿ ಗ್ರಾಮದ ಬಳಿ ಮಾಂಗಲ್ಯ ಸರವನ್ನ ಕಳವು ಮಾಡಲು ಯತ್ನಿಸಿದ ಇಬ್ಬರು ಕಳ್ಳರನ್ನ ಹಿಡಿದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಗ್ರಾಮದ ಸುಜಾತ ಎಂಬ ಮಹಿಳೆ ತೋಟಕ್ಕೆ ಹೋಗುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಕಣ್ಣಿಗೆ ಕಾರದಪುಡಿ ಎರಚಿ ಮಾಂಗಲ್ಯ ಸರ ಕದಿಯಲು ಯತ್ನಿಸಿದರು. ಈ ವೇಳೆ ಮಹಿಳೆ ಕೂಗಾಡಿದ್ದಾರೆ. ಆಗ ಓಡಿಬಂದ ಗ್ರಾಮಸ್ಥರಿಗೆ ಐನಾತಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬಳಿಕ ಕಳ್ಳರನ್ನು ದಂಡಿನಶಿವರ ಪೊಲೀಸರಿಗೆ ಒಪ್ಪಿಸಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.