ಕಾರ್ಗಿಲ್ ವಿಜಯೋತ್ಸವ: ನಿವೃತ್ತ ಯೋಧರಿಗೆ ಸಚಿವ ಕೆ.ಗೋಪಾಲಯ್ಯರಿಂದ ಆತ್ಮೀಯ ಸನ್ಮಾನ

ಜಿಲ್ಲೆ

ಬೆಂಗಳೂರು: ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ದದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಕ್ಕೆ ಜಯ ‌ತಂದುಕೊಡುವಲ್ಲಿ ಯಶಸ್ವಿ ಪಾತ್ರವಹಿಸಿದ್ದ ಮಹಾಲಕ್ಷ್ಮಿ ಲೇ ಔಟ್ ವಿಧಾನದ ಕ್ಷೇತ್ರದ ಮಾಜಿ ಸೈನಿಕರನ್ನು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಅಬಕಾರಿ ಸಚಿವ‌‌‌ ಕೆ.ಗೋಪಾಲಯ್ಯ ಅವರು ಇಂದು ಆತ್ಮೀಯವಾಗಿ ಸನ್ಮಾನಿಸಿದರು.

ನಾಗಪುರದಲ್ಲಿರುವ ಶಾಸಕರ ಕಚೇರಿಯಲ್ಲಿಂದು ಸಂಜೆ ನಡೆದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಲೆಪ್ಟಿನೆಂಟ್ ಕರ್ನಲ್ ಪಳನಿರಾಜ್, ಜೆ.ಸಿ.ಒ.ರವಿಕುಮಾರ್, ಹವಾಲ್ದಾರ್ ವೆಂಕಟೇಶ್, ನಾಯಕ್ ಮೂರ್ತಿ, ಎಸ್.ಜಿ.ಎಲ್.ಸ್ವಾಮಿ‌ ಅವರುಗಳನ್ನು ಸಚಿವರು ಸನ್ಮಾನಿಸಿದರು.

Leave a Reply

Your email address will not be published.