Home Cinema KGF ನಿರ್ಮಾಪಕರಿಗೆ ಯಶ್ ಹಂಗಂದ್ರಾ..! KGF-2 ಮುಹೂರ್ತ ತಡವಾಗಿದ್ದೇಕೆ..? ಇಲ್ಲಿದೆ ಉತ್ತರ..!

KGF ನಿರ್ಮಾಪಕರಿಗೆ ಯಶ್ ಹಂಗಂದ್ರಾ..! KGF-2 ಮುಹೂರ್ತ ತಡವಾಗಿದ್ದೇಕೆ..? ಇಲ್ಲಿದೆ ಉತ್ತರ..!

360
0
SHARE

ಕೆ.ಜಿ.ಎಫ್.. ಕನ್ನಡದ ಕಹಳೆಯನ್ನ ವಿಶ್ವದ ಉದ್ದಗಲಕ್ಕೂ ಹಾರಿಸಿದ ಸಿನಿಮಾ.ಗಲ್ಲಾಪೆಟ್ಟಿಗೆಯಲ್ಲಿ ಕೆ.ಜಿ.ಎಫ್ ಹಾಕಿದ ರಣಕೇಕೆಗೆ, ಎಲ್ಲರೂ ಬೆಚ್ಚಿ ಬಿದ್ದಿದ್ದು.. ಕನ್ನಡ ಚಿತ್ರರಂಗದತ್ತ ಎಲ್ಲರು ನಿಬ್ಬೇರಗಾಗಿ ತಿರುಗಿ ನೋಡಿದ್ದು ಇದೀಗ ಹಿಸ್ಟರಿ.

ಆದ್ರೆ ಇದೇ ಹಿಸ್ಟರಿಯಲ್ಲೊಂದು ರಾಮಾಚಾರಿಯ ಮಿಸ್ಟರಿಯೊಂದು ಅಡಗಿರೋ ವಿಷಯ ಇದೀಗ ಗಾಂಧಿನಗರದ ಗಲ್ಲಿಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.ಯಸ್, ನಿಮಗೆ ಗೊತ್ತಿರಲಿ.. ಕೆ.ಜಿ.ಎಫ್ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಗೆಲುವಿನಿಂದ, ಯಶ್.. ನ್ಯಾಶನಲ್ ಸ್ಟಾರ್ ಆಗಿ ಹೊರಹೊಮ್ಮಿದ್ರು. ಪರಿಣಾಮ, ಮೈ ನೇಮ್ ಇಸ್ ಕಿರಾತಕ, ರಾಣಾದಂಥ ದೇಸಿ ಸೊಗಡಿನ ಸಿನಿಮಾಗಳೂ ಉಸಿರು ಚೆಲ್ಲಿದ್ವು. ಇರ‍್ಲಿ, ವಿಷಯ ಅದಲ್ಲ. ವಿಷಯ ಇರೋದು ಕೆ.ಜಿ.ಎಫ್ – ಚಾಫ್ಟರ್ ೨ ವಿಚಾರದಲ್ಲಿ ಹೌದು, ಅಸಲಿಗೆ.. ಕೆ.ಜಿ.ಎಫ್..

ಅಖಂಡ ಯಶಸ್ಸು ಗಳಿಸಿದ್ಮೇಲೆ, ಎಲ್ಲರೂ ಕೆ.ಜಿ.ಎಫ್ ೨ ಯಾವಾಗ ಅನ್ನುವ ಪ್ರಶ್ನೆ ಕೇಳಲು ಶುರುವಿಟ್ಟುಕೊಂಡಿದ್ದರು. ಆದ್ರೆ ಇಂಥಹದ್ದೊಂದು ಪ್ರಶ್ನೆ ಸಿನಿಪ್ರಿಯರು ಚಿತ್ರತಂಡಕ್ಕೆ ಕೇಳುವಷ್ಟರಲ್ಲಿ ಅಸಮಾಧಾನ ತಂಡದ ಒಳಗೆನೇ ಸ್ಫೋಟಗೊಂಡಿತ್ತು. ಅದು, ಗೆಲುವ್ಯಾರದ್ದು ಅನ್ನೋದು
ಯಸ್. ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದಂತೇ ಇದು ಯಾರ ಗೆಲುವು ಎಂಬಂಥ ಪ್ರಶ್ನೆ ಏಳುತ್ತದೆ. ಸಾಮಾನ್ಯವಾಗಿ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಾದಮೇಲೆ ಆ ಸಿನಿಮಾ ಟೀಮುಗಳು ಚೂರು ಚೂರಾಗಿಬಿಡುತ್ತದೆ. ಅದಕ್ಕೆ ಕಾರಣ ಗೆಲುವಿಗೆ ನಾನು ಕಾರಣ ಅನ್ನೋ ಈಗೋ ಕ್ಲ್ಯಾಶುಗಳು. ಅಂಥಾದ್ದೇ ಸ್ಥಿತಿ ಕೆಜಿಎಫ್ ಸಿನಿಮಾ ತಂಡವನ್ನೂ ಭಾದಿಸಿತ್ತು.

ಒಂದು ಅದ್ಭುತ ದೃಷ್ಯಕಾವ್ಯ ಕಟ್ಟಲು ಎರಡು ವರ್ಷಗಳ ಕಾಲ ಶ್ರಮಿಸಿದ ಮನಸುಗಳೆಲ್ಲ ಸದ್ದದಿಲ್ಲದೆ ದೂರ ಸರಿದಿದ್ದವು ಅನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಸದ್ದು ಮಾಡಿತ್ತು.ಇನ್ನೂ ಬಿಡುಗಡೆಯ ಬಳಿಕ ದೇಶವ್ಯಾಪಿ ನಡೆದ ಯಶ್ ಉತ್ಸವ, ಇನ್ಯಾರೂ ಲೆಕ್ಕಕ್ಕಿಲ್ಲ ಅನಿಸುವಷ್ಟರ ಮಟ್ಟಿಗೆ ನಡೆದಿತ್ತು. ಇದು, ತಂಡದೊಳಗೆ ಬಿರುಕಿಗೂ ಕಾರಣವಾಗಿತ್ತು. ಹೀಗಿರುವಾಗ್ಲೇ.. ಯಶ್, ಇನ್ನೊಂದು ಬಾಂಬ್‌ನ್ನ ನಿರ್ಮಾಪಕರ ಮುಂದೆ ಸಿಡಿಸಿದ್ದರು. ಅದುವೇ ಸಂಭಾವನೆ ಎಂಬ ಬಾಂಬ್.ಹೌದು, ನಿಮಗೆ ಗೊತ್ತಿರಲಿ.. ಕೆ.ಜಿ.ಎಫ್ ಸೆಟ್ಟೇರಿದಾಗ, ಯಶ್‌ಗೆ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ..

ಭರ್ತಿ ಹದಿಮೂರು ಕೋಟಿಯ ಸಂಭಾವನೆ ನಿಗಧಿ ಮಾಡಿತ್ತು. ಅದು, ಕೆ.ಜಿ.ಎಫ್ ಚಾಫ್ಟರ್ ೧ ಹಾಗೂ ಚಾಫ್ಟರ್ ೨ ಎರಡು ಭಾಗಗಳೂ ಸೇರಿ ಅನ್ನೋದು ನಿಮ್ಮ ಗಮನಕ್ಕಿರಲಿ. ಆದ್ರೆ ಅದ್ಯಾವಾಗ.. ಕೆ.ಜಿ.ಎಫ್ ವಿಶ್ವದ ಮೂಲೆ ಮೂಲೆಯಲ್ಲೂ ಧಗಧಗಿಸಲು ಶುರುವಾಯ್ತೋ, ಆಗ ಅಣ್ತಮ್ಮನ ವರಸೆ ಬದಲಾಗಿದ್ದು ಸುಳ್ಳಲ್ಲ ಅಂಥ ಖುದ್ದು ಯಶ್ ಹುಡುಗರೇ ಮಾತನಾಡಿಕೊಳ್ತಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ.. ಕೆ.ಜಿ.ಎಫ್ ಚಾಫ್ಟರ್ ೨ಗೂ ೧೩ ಕೋಟಿ ಸಂಭಾವನೆಯನ್ನೇ ನೀಡಿ ಅನ್ನುವ ಪಟ್ಟು ಯಶ್ ಹಿಡಿದು ಕುಂತಿದ್ದರು, ಇದೇ ಕಾರಣಕ್ಕೆ ಕೆ.ಜಿ.ಎಫ್ ಚಾಫ್ಟರ್ ೨ ಚಿತ್ರದ ಮುಹೂರ್ತ ತಡವಾಗಿದ್ದು ಅನ್ನುವ ಸುದ್ದಿ ಇದೀಗ ಹೊಸಕೇರೆಹಳ್ಳಿಯ ಯಶ್ ನಿವಾಸದಿಂದ ಹಿಡ್ದು, ತಾಜ್ ವೆಸ್ಟ್ ಎಂಡ್ ಅಂಗಳದವರೆಗೂ ಕೇಳಿ ಬರುತ್ತಿದೆ.

ನಿಮಗೆ ಗೊತ್ತಿರಲಿ, ಕೆ.ಜಿ.ಎಫ್ ಇಂಥಹದ್ದೊಂದು ಗೆಲುವನ್ನ ಸಂಪಾದಿಸುತ್ತೆ ಅನ್ನುವ ಚಿಕ್ಕ ಸುಳಿವು ಯಶ್‌ಗೆ ಮೊದಲು ಇರಲಿಲ್ಲ. ಹಾಗಾಗೇ, ಎರಡು ಭಾಗಗಳಿಗೆ ಸೇರಿ ಹದಿಮೂರು ಕೋಟಿ ಸಂಭಾವನೆಯನ್ನಷ್ಟೇ ಯಶ್ ಒಪ್ಪಿಕೊಂಡಿದ್ದರು. ಸಾಮಾನ್ಯವಾಗಿ ಯಶ್ ಗಾಂಧಿನಗರದಲ್ಲಿ ಪಡೆಯೋದು ಮೂರುವರೆನಿಂದ ನಾಲ್ಕುವರೆ ಕೋಟಿವರೆಗಿನ ಸಂಭಾವನೆ. ಹೀಗಿದ್ದಾಗ.. ಹದಿಮೂರು ಕೋಟಿ ದೊಡ್ಡ ಮೊತ್ತವೇ. ಹಾಗಾಗಿ, ಕೆ.ಜಿ.ಎಫ್‌ನ ಕನಸಿನ ಬಿತ್ತನೆಯಾದಾಗ ಯಶ್, ಖುಷಿ ಖುಷಿಯಾಗಿಯೇ ಎರಡು ಭಾಗಗಳಿಗೆ ಸೇರಿ ಹದಿಮೂರು ಕೋಟಿ ಕೊಡಿ ಸಾಕು ಅನ್ನುವ ಮಾತುಗಳನ್ನಾಡಿದ್ದರು.ಆದ್ರೆ ಅದ್ಯಾವಾಗ..

ಕೆ.ಜಿ.ಎಫ್ ಇನ್ನೂರು ಕೋಟಿಗೂ ಅಧಿಕ ಹಣವನ್ನ ಲೂಟಿ ಮಾಡ್ತೋ, ಆಗ.. ಲೆಕ್ಕಾಚಾರದಲ್ಲಿ ಮೊದಲೇ ನಿಪುಣರಾಗಿರುವ ಯಶ್, ಎರಡನೇ ಭಾಗಕ್ಕೂ ಹದಿಮೂರು ಕೋಟಿ ಕೊಡಿ ಅನ್ನುವ ಪಟ್ಟು ಹಿಡಿದು ಕುಂತು ಬಿಟ್ಟರು ಅನ್ನೋದು ಇದೀಗ ಎಲ್ಲಡೆ ಚರ್ಚೆಯಾಗ್ತಿದೆ. ಅಷ್ಟೇ ಅಲ್ಲ.. ಕೆ.ಜಿ.ಎಫ್ ಎರಡನೇ ಭಾಗಕ್ಕೆ ಹದಿಮೂರು ಕೋಟಿ ಸಂಭಾವನೆ ಕೊಡ್ದೇ ಇದ್ದಲ್ಲಿ, ಕಿರಾತಕ ಮುಂದುವರೆಸುವ ಮಾತುಗಳನ್ನೂ ಯಶ್ ಆಡಿದ್ದರು ಅನ್ನೋದು ಇದೀಗ ಗಾಂಧಿನಗರದ ಗಲ್ಲಿಗಳಲ್ಲಿ ಪಸರ್ ಆಗಿರುವ ವಿಷಯ.ಹೀಗೆ.. ಸಂಭಾವನೆ ವಿಚಾರದಲ್ಲಿ ಯಶ್ ಸಿಡಿಸಿದ ಬಾಂಬ್‌ಗೆ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಂಗಾಲಾಗಿದ್ದು ಸುಳ್ಳಲ್ಲ. ಇದೆಲ್ಲದ್ರಿಂದ ಕೆ.ಜಿ.ಎಫ್ ಚಾಪ್ಟರ್ ೨ಮೇಲೂ ಕರಿನೆರಳು ಬಿದ್ದಿದ್ದು ಸುಳ್ಳಲ್ಲ.

ಹಾಗಾಗಿ, ಇನ್ನೇನೂ ಕೆ.ಜಿ.ಎಫ್‌ನ ಮುಂದಿನ ಕಥನ, ಇನ್ಯಾವಾಗ ಅನ್ನುವ ಚರ್ಚೆ ಗಾಂಧಿನಗರದ ಗಲ್ಲಿಗಳಲ್ಲಿ ಅಂದು ನಡೆದಿತ್ತು. ಆದ್ರೆ, ಕಂಡ ಕನಸು ಅರ್ಧಕ್ಕೆ ಬಿಡೋದಾದ್ರೂ ಹೇಗೆ. ಯಾರಾದ್ರೂ ಒಬ್ಬರು ಬಾಗಲೇಬೇಕು. ಇದನ್ನ ಅರ್ಥ ಮಾಡಿಕೊಂಡ ಹೊಂಬಾಳೆ ಸಂಸ್ಥೆ ಕೊನೆಗೆ ಚಾಫ್ಟರ್೨ಗೂ ಹದಿಮೂರು ಕೋಟಿ ಸಂಭಾವನೆಯನ್ನ ಯಶ್‌ಗೆ ನೀಡಿದೆ ಅನ್ನೋದು ಬಲ್ಲ ಮೂಲಗಳೂ ಕೊಡುವ ಮಾಹಿತಿ.ಅದ್ಯಾವಾಗ, ಹದಿಮೂರು ಕೋಟಿಯ ಡೀಲ್ ಮತ್ತೊಮ್ಮೆ ಕುದರಿತೋ, ಆಗ.. ಮತ್ತೆ ಕೆ.ಜಿ.ಎಫ್ ಕೋಟೆಗೆ ಕಾಲಿಡಲು ಮುಂದಾದ ಯಶ್, ಇದೀಗ.. ಕೆ.ಜಿ.ಎಫ್ ೨ ಚಿತ್ರದ ಮುಹೂರ್ತ ಯಾವ ಅಡ್ಡಿ ಆತಂಕ ಇಲ್ಲದೇ ನಡೆಯುವಂತೆ ಮಾಡಿದ್ದಾರೆ.

ಬರೀ ಕೆ.ಜಿ.ಎಫ್‌ಗಾಗಿಯೇ ೨೬ ಕೋಟಿ ಸಂಭಾವನೆ ಪಡೆದು, ಎರಡನೇ ಭಾಗದ ಚಿತ್ರೀಕರಣಕ್ಕೆ ಸಿದ್ಧವಾಗ್ತಿದ್ದಾರೆ ಅನ್ನೋ ಮಾತುಗಳೂ ಗಾಂಧಿನಗರದ ಗ್ರೀನ್ ಹೌಸ್ ಅಂಗಳದಲ್ಲಿ ಬಲವಾಗಿ ಕೇಳಿ ಬರುತ್ತಿವೆ.ಅದೇನೆ ಇರ‍್ಲಿ, ಬೆಳೆಯುವವರೆಗೂ ಒಂಥರಾ, ಬೆಳೆದಾದ್ಮೇಲೆ ಒಂಥರಾ. ಸ್ಟೇಟ್ ಸ್ಟಾರ್ ಆಗಿದ್ದಾಗ ಒಂಥರಾ.. ನ್ಯಾಶನಲ್ ಸ್ಟಾರ್ ಆದ್ಮೇಲೆ ಇನ್ನೊಂದು ಥರಾ.. ಹೀಗೆ ನಾನಾ ಘಟ್ಟದಲ್ಲಿ.. ನಾನಾ ರೀತಿಯಲ್ಲಿ ಹೇಗೆಲ್ಲ ಬದಲಾಗಬಹುದು ಅನ್ನೋದಕ್ಕೆ ಯಶ್ ಅತ್ಯುತ್ತಮ ಉದಾಹರಣೆ ಅನ್ನುವ ಮಾತುಗಳನ್ನಾಡುತ್ತಾನೇ ಗಾಂಧಿನಗರದ ಮಂದಿ, ಭರಣಿ ಕಫೆ ಮುಂದೆ ನಿಂತು ಟೀ ಕುಡಿಯುತ್ತಿದ್ದಾರೆ…

LEAVE A REPLY

Please enter your comment!
Please enter your name here