Home District ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ; KGFಗೆ 500LPM ಆಕ್ಸಿಜನ್​ ಉತ್ಪಾದನಾ ಯಂತ್ರ

ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ; KGFಗೆ 500LPM ಆಕ್ಸಿಜನ್​ ಉತ್ಪಾದನಾ ಯಂತ್ರ

ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ; KGFಗೆ 500LPM ಆಕ್ಸಿಜನ್​ ಉತ್ಪಾದನಾ ಯಂತ್ರ

515
0

ವರದಿ: ಅಶೋಕ್ ಎಂ.

ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಸಿಲುಕಿ ನಲುಗಿ ಹೋಗಿದ್ದ ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣವೊಂದು ಮೂಡಿದೆ, ಕೊರೊನಾ ಮಹಾಮಾರಿಯ ಸೋಂಕಿಗೆ ತುತ್ತಾಗಿ ನಿಂತು ಹೋಗುತ್ತಿರುವ ಉಸಿರಿಗೆ ಉಸಿರು ನೀಡಲು ಇಸ್ರೇಲ್​ ನಿಂದ ಒಂದು ಆಕ್ಸಿಜನ್​ ಪ್ಲಾಂಟ್​ ಬಂದಿದೆ.

ವಾ.ಓ:1 ಜಕ್ಕೂರು ವಿಮಾನ ನಿಲ್ದಾಣದಲ್ಲಿ ಕಂಟೈನರ್​ಗೆ ಕೂರಿಸಲಾಗುತ್ತಿರುವ ಬೃಹತ್​ ಆಕ್ಸಿಜನ್​ ಉತ್ಪಾನಾ ಘಟಕ, ಎನ್​ಡಿಆರ್​ ಎಫ್​ ಸಿಬ್ಬಂದಿಯ ಬಂದೋಬಸ್ತ್​ನಲ್ಲಿ ಕೆಜಿಎಫ್​ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಬಂದಿಳಿದಿರುವ ಆಕ್ಸಿಜನ್​ ಉತ್ಪಾದನ ಘಟಕದ ಕಂಟೇನರ್​, ಅದನ್ನು ವೀಕ್ಷಣೆ ಮಾಡುತ್ತಿರುವ ಸಂಸದ ಮುನಿಸ್ವಾಮಿ ಇದೆಲ್ಲಾ ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಸದ್ಯ ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರು ಆಕ್ಸಿಜನ್​ ಕೊರತೆಯಿಂದ ಸಾವಿರಾರು ಸಂಖ್ಯೆಯ ಜನರು ಮೃತಪಡುತ್ತಿದ್ದಾರೆ ಈ ಹಿನ್ನೆಲೆ ಇಸ್ರೇಲ್​ ದೇಶದಿಂದ ಭಾರತಕ್ಕೆ ಮೂರು 500LPM ಆಕ್ಸಿಜನ್​ ಉತ್ಪಾದನಾ ಯಂತ್ರಗಳನ್ನು ಕಳಿಸಲಾಗಿದೆ. ಆ ಪೈಕಿ ಉತ್ತರ ಪ್ರದೇಶದ ವಾರಣಾಸಿಗೆ ಒಂದು, ಹಾಗೂ ಮೈಸೂರಿನ ಹೆಚ್​.ಡಿ.ಕೋಟೆಗೆ ಒಂದು ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್​ಗೆ ಒಂದರಂತೆ ಕಳಿಸಲಾಗಿದೆ,

ಈ ಪೈಕಿ ಕೋಲಾರ ಜಿಲ್ಲೆ ಕೆಜಿಎಫ್​ಗೆ ದೇಶದ ಮೊದಲ ಉತ್ಪಾದನಾ ಯಂತ್ರ ಬಂದು ತಲುಪಿದೆ. ಕಳೆದ ರಾತ್ರಿ ಜಕ್ಕೂರು ವಿಮಾನ ನಿಲ್ದಾಣಕ್ಕೆ ಸೇನಾ ಹೆಲಕಾಪ್ಟರ್​ ಮೂಲಕ ಬಂದ ಆಕ್ಸಿಜನ್​ ಉತ್ಪಾದನಾ ಯಂತ್ರ ಒಳಗೊಂಡಿದ್ದ ಕಂಟೇನರ್​ ನಂತರ ಟ್ರಕ್​ ಮೂಲಕ ಇಂದು ಬೆಳಗಿನ ಜಾವ 5 ಗಂಟೆಗೆ ಎನ್​ಡಿಆರ್​ಎಫ್​ ಸಿಬ್ಬಂದಿಯ ಬಂದೋಬಸ್ತ್​ನಲ್ಲಿ ಬಂದಿಳಿದಿದೆ. ಇನ್ನು ಸದ್ಯ ದೇಶದಲ್ಲಿ ಆಕ್ಸಿಜನ್​ಗಿರುವ ಡಿಮ್ಯಾಂಡ್​ ಎಲ್ಲರಿಗೂ ಗೊತ್ತಿದೆ ಹೀಗಿರುವಾಗ ಕೋಲಾರಕ್ಕೆ ಬಿಡುಗಡೆಯಾಗಿದ್ದ ಆಕ್ಸಿಜನ್​ ಉತ್ಪಾದನಾ ಯಂತ್ರವನ್ನು ರಾತ್ರೋ ರಾತ್ರಿ ಕೆಲವು ರಾಜಕೀಯ ಪ್ರಭಾವ ಬಳಸಿ ಬೇರೆ ಜಿಲ್ಲೆಗೆ ಸ್ಥಾಳಾಂತರ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯಿತಾದರೂ ಕೋಲಾರ ಸಂಸದ ಮುನಿಸ್ವಾಮಿ, ಅಧಿಕಾರಿಗಳು ಹಾಗೂ ಕೆಲವು ಜನಪ್ರತನಿಧಿಗಳ ಮೊರೆ ಹೋಗಿ ಮನವಿ ಮಾಡಿದರ ಪರಿಣಾಮ ಕೇಂದ್ರ ಸರ್ಕಾರದಿಂದ ಈ ಮೊದಲು ಏನು ದೇಶ ಮೂರು ಸ್ಥಳಗಳಿಗೆ ಬಿಡುಗಡೆಯಾಗಿತ್ತು ಅದರಲ್ಲಿ ಯಾವುದೇ ಬದಲಾವಣೆ ಮಾಡದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ರವರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೆಜಿಎಫ್​ಗೆ ಬಂದು ತಲುಪಿದೆ.

ಇಸ್ರೇಲ್​ನಿಂದ ದೇಶಕ್ಕೆ ನೀಡಲಾಗಿರುವ ಈ ಮೂರು ಆಕ್ಸಿಜನ್​ ಉತ್ಪಾದನಾ ಘಟಕ ಸಾಕಷ್ಟು ಉಪಯುಕ್ತವಾಗಿದ್ದು ಇದು ಪ್ರತಿ ನಿಮಿಷಕ್ಕೆ 500 ಲೀಟರ್​ ಆಕ್ಸಿಜನ್​ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಇದೊಂದು ಸಣ್ಣ ಆಕ್ಸಿಜನ್​ ಉತ್ಪಾದನಾ ಯಂತ್ರವೊಂದು ನಿರಾಯಾಸವಾಗಿ ಕನಿಷ್ಠ 100 ಬೆಡ್​ಗಳಿಗೆ ಆಕ್ಸಿಜನ್​ ನೀಡಬಲ್ಲದು. ಹಾಗಾಗಿ ಕೆಜಿಎಫ್​ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇದನ್ನು ಸ್ಥಾಪನೆ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು, ಇದು ಕೆಜಿಎಫ್​ ಆಸ್ಪತ್ರೆ ಜೊತೆಗೆ ಅಕ್ಕ ಪಕ್ಕದ ತಾಲ್ಲೂಕಿಗೂ ಆಕ್ಸಿಜನ್​ ಸರಬರಾಜು ಮಾಡುವ ಮೂಲಕ ಸಾಕಷ್ಟು ಆಕ್ಸಿಜನ್​ ಕೊರತೆಯನ್ನು ನಿವಾರಣೆ ಮಾಡಬಹುದಾಗಿದೆ ಅನ್ನೋದು ಅಧಿಕಾರಿಗಳ ಮಾತು.ಸದ್ಯ ಜಿಲ್ಲೆಯಲ್ಲಿರುವ ಆಕ್ಸಿಜನ್​ ಸಮಸ್ಯೆಯನ್ನು ಗಮನಿಸಿದಾಗ ಈ ಆಕ್ಸಿಜನ್​ ಉತ್ಪಾದನಾ ಘಟಕ ಸ್ಥಾಪನೆಯಾಗಿದ್ದೇ ಆದಲ್ಲಿ ಸಾಕಷ್ಟು ಆಕ್ಸಿಜನ್​ ಇಲ್ಲದೆ ಸಾಯುವ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿ ಇದೊಂದು ಉಸಿರುವ ನೀಡುವ ಘಟಕವಾಗಲಿದೆ. ಅದರಲ್ಲೂ ಕೆಜಿಎಫ್​ ಭಾಗದಲ್ಲಿ ಹೆಚ್ಚಾಗಿ ಬಡ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಜಿಎಫ್​ನಲ್ಲಿ ಈಘಟಕ ಸ್ಥಾಪನೆ ಮಾಡಲಾಗಿದ್ದು ಈ
ಭಾಗದ ಜನರಿಗೆ ಇದು ಉಸಿರುವ ನೀಡಲಿದೆ.

ಒಟ್ಟಾರೆ ಕೊರೊನಾ ಸೋಂಕಿನಿಂದ ಸೊರಗಿ ಹೋಗಿರುವ ಕೋಲಾರ ಜಿಲ್ಲೆಗೆ ಇಸ್ರೇಲ್​ ನ ಈ ಆಕ್ಸಿಜನ್​ ಉತ್ಪಾದನಾ ಘಟಕ ಸಂಜೀವಿನಿಯಂತೆ, ಆಪತ್ಕಾಲದ ಆಪದ್ಬಾಂದವನಂತೆ ಬಂದಿದ್ದು, ಇದು ಸದ್ಯ ಸೋಂಕಿತರ ಜೀವಗಳನ್ನು ಉಳಿಸುವಲ್ಲಿ ನೆರವಿಗೆ ಬಂದರೆ
ಅದೇ ದೊಡ್ಡ ವಿಷಯ..

VIAಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ; KGFಗೆ 500LPM ಆಕ್ಸಿಜನ್​ ಉತ್ಪಾದನಾ ಯಂತ್ರ
SOURCEಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ; KGFಗೆ 500LPM ಆಕ್ಸಿಜನ್​ ಉತ್ಪಾದನಾ ಯಂತ್ರ
Previous articleಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು: ಸುರೇಶ್ ಕುಮಾರ್
Next articleಕೊರೊನಾಕ್ಕೆ ಹೆದರಿ ನೇಣಿಗೆ ಶರಣಾದ ವೃದ್ಧೆ

LEAVE A REPLY

Please enter your comment!
Please enter your name here