
ಬೆಂಗಳೂರಿನಲ್ಲಿ ಖಾಕಿ ಫುಲ್ ಅಲರ್ಟ್: DCP, ACP ಗಳಿಗೆ ಕಮಿಷನರ್ ಪಂಥ್ ಸಂದೇಶ
ಬೆಂಗಳೂರು: ಹಿಜಾಬ್ ವಿವಾದ ರಾಜ್ಯದಲ್ಲಿ ಭುಗಿಲೆದ್ದಿದ್ದು, ಬೆಂಗಳೂರಿನಲ್ಲಿ ಖಾಕಿ ಫುಲ್ ಅಲರ್ಟ್ ಆಗಿದೆ. ರಾಜ್ಯದಲ್ಲಿ ಹಿಜಾಬ್ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಧಾನಿಯಲ್ಲಿ ಶಾಂತಿ ಭಂಗವಾಗದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಇನ್ನೂ ಎಲ್ಲಾ ವಲಯದ DCP, ACP ಗಳಿಗೆ ಕಮಿಷನರ್ ಪಂಥ್ ಸಂದೇಶ ನೀಡಿದ್ದಾರೆ. ಅಲ್ಲದೇ ಹಿಜಬ್ ವಿವಾದ ಹೈಕೋರ್ಟ್ ನಲ್ಲಿದ್ದು, ತ್ರಿಸದಸ್ಯ ಪೀಠದ ಅಂತಿಮ ತೀರ್ಪು ಬರುವ ವರೆಗೆ, ಹಿಜಬ್ ಧರಿಸುವ ಹಾಗಿಲ್ಲ ಎಂದು ಆದೇಶಿಸಿದೆ. ಇನ್ನೂ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.