ಮಳೆಗಾಲದಲ್ಲೂ ಮುಂದುವರೆದಿದೆ ಕಿರಣ್ ರಾಜ್ ಅವರಿಂದ ಮನಮುಟ್ಟುವ ಕಾರ್ಯ

ಬೆಂಗಳೂರು

 “ಬಡ್ಡೀಸ್” ಖ್ಯಾತಿಯ ಕಿರಣ್ ರಾಜ್,   ನಾಯಕನಾಗಿ ಅಷ್ಟೇ ಜನಪ್ರಿಯತೆ ಪಡೆದಿಲ್ಲ. ತಾವು ಮಾಡುವ ಸಾಮಾಜಿಕ ಕಾರ್ಯಗ ಳಿಂದಲ್ಲೂ ಅವರು ಜನಪ್ರಿಯರು. ಕೊರೋನ ಸಂದರ್ಭದಲ್ಲಿ ಇವರು ಮಾಡಿದ ಕಾರ್ಯಗಳನ್ನು ನೆನಪಿಸಿಕೊಳ್ಳುವ ಜನರಿದ್ದಾರೆ. ಕೊರೋನ ಮುಗಿದ ಮೇಲೂ ಕಿರಣ್ ರಾಜ್ ಒಂದಲ್ಲ ಒಂದು ಜನೋಪಕಾರಿ ಕಾರ್ಯ ಮಾಡುತ್ತಿರುತ್ತಾರೆ.

 

 ಜುಲೈ ಆರಂಭವಾದಾಗಿನಿಂದಲೂ‌ ಕರುನಾಡ ಪೂರ್ತಿ ಮಳೆಯ ಅಬ್ಬರ ಜೋರಾಗಿದೆ. ಈ ಮಳೆಯ ಜೊತೆ ಎಷ್ಟೋ ಜನರ ನಿತ್ಯ ಜೀವನ ಸಾಗಬೇಕಿದೆ. ಬೀದಿಬದಿ ವ್ಯಾಪಾರಿಗಳು, ಸಿಗ್ನಲ್ ನಲ್ಲಿ ಮಾರಾಟ ಮಾಡುವವರು ಸಾಕಷ್ಟು ಜನರಿದ್ದಾರೆ. ಇಂತಹವರನ್ನು ಗುರುತಿಸಿರುವ ಕಿರಣ್ ರಾಜ್, ಮಳೆಯಿಂದ ರಕ್ಷಣೆ ನೀಡುವ ರೈನ್ ಕೋಟ್ ಗಳನ್ನು ನೀಡಿದ್ದಾರೆ.

 ಈ ಬಾರಿ ಇಂತಹ ಸಾಮಾಜಿಕ ಕಾರ್ಯವನ್ನು ಕಿರಣ್ ರಾಜ್  ತಾವಷ್ಟೇ ಮಾಡಿಲ್ಲ. ಸಾಮಾಜಿಕ ಸೇವೆಯಲ್ಲಿ ಆಸಕ್ತಿಯಿರುವ  ಕಾಲೇಜು ವಿದ್ಯಾರ್ಥಿಗಳ ಮೂಲಕ ಕೂಡ ಮಾಡಿಸಿದ್ದಾರೆ.  ಇಂತಹ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಖುಷಿ ತಂದಿದೆ. ಮುಂದೆ ತಾವು ಸಹ ಸಹಾಯ ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಗಳು ಅವರಿಗೆ ಅನುಕೂಲವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಮನಸ್ಸಿರುವ ವಿದ್ಯಾರ್ಥಿಗಳು  ಕಿರಣ್ ರಾಜ್ ಫೌಂಡೇಶನ್ ಅನ್ನು ಸಂಪರ್ಕಿಸಬಹುದು ಎನ್ನುತ್ತಾರೆ ನಟ ಕಿರಣ್ ರಾಜ್.

Leave a Reply

Your email address will not be published.