ಮದ್ಯದ ಅಮಲಿನಲ್ಲಿದ್ದ ಪೊಲೀಸರ ಜೊತೆ ಕಿರಿಕ್​: ಅಂದರ್​ ಆದ ಫೇಮಸ್​ ನಟಿ

ಚಲನಚಿತ್ರ

ಮುಂಬೈ: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ, ಪೊಲೀಸರ ಜೊತೆ ಕಿರಿಕ್​ ಮಾಡಿಕೊಂಡ ನಟಿಯನ್ನ ಮುಂಬೈ ಪೊಲೀಸರು ಬಂದಿಸಿದ್ದಾರೆ. ನಿಂತಿದ್ದ ವಾಹನಕ್ಕೆ ಡಿಕ್ಕಿಹೊಡೆದು ಪೂಲಿಸ್ ಸಿಬ್ಬಂದಿಯನ್ನು ಬಾಯಿಗೆ ಬಂದಹಾಗೆ ಬೈದು ಹಲ್ಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ನಟಿ ಕಾವ್ಯಾ ಥಾಪರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಪಶ್ಚಿಮ ಉಪನಗರ ಜುಹುದಲ್ಲಿ ನಡೆದಿದೆ. ಇವರು ತೆಲುಗು ಹಾಗೂ ತಮಿಳು ಚಿತ್ರದಲ್ಲಿ ಸಕ್ರಿಯವಾಗಿದ್ದ ನಟಿಯಾಗಿದ್ದಾರೆ. ಮದ್ಯದ ಅಮಲಿನಲ್ಲಿ ಎಸ್‌ಯುವಿ ಚಲಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಥಾಪರ್ ಕಾರಿನ ನಿಯಂತ್ರಣ ಕಳೆದುಕೊಂಡು ನಿಂತಿದ್ದ ವಾಹನದ ಹಿಂಭಾಗಕ್ಕೆ ಢಿಕ್ಕಿ ಹೊಡೆದಿತ್ತು ಈ ವೇಳೆ ಪ್ರಶ್ನೆ ಮಾಡಿದವರ ಮೇಲೆ ನಟಿ ಕ್ಯಾವ್ಯ ಥಾಪರ್​ ಗರಂ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published.