Home District ಮಂಜಿನ ನಗರಿ, ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದ ಕೊಡಗಿನ ಪ್ರವಾಸಿತಾಣಗಳ ಮೇಲೆ ನಿರ್ಬಂಧ ಹೇರಿದ ಜಿಲ್ಲಾಡಳಿತ

ಮಂಜಿನ ನಗರಿ, ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದ ಕೊಡಗಿನ ಪ್ರವಾಸಿತಾಣಗಳ ಮೇಲೆ ನಿರ್ಬಂಧ ಹೇರಿದ ಜಿಲ್ಲಾಡಳಿತ

676
0

ವರದಿ: ಲೋಹಿತ್

ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ, ಪ್ರವಾಸಿಗರ ಹಾಟ್ ಸ್ಪಾಟ್ ಅಂತ ಕರೆಸಿಕೊಳ್ಳೊ ಜಿಲ್ಲೆ ಇತ್ತಿಚೀನ ದಿ‌ನದಲ್ಲಿ‌ ಕರೋನಾ ಮಾಹಾಮಾರಿ ಹೆಚ್ಚಾಗುತ್ತಿದ್ದು. ಕೊಡಗಿನಲ್ಲಿ ಕರೋನಾ ನಿಯಂತ್ರಣಕ್ಕೆ ಇದೀಗ ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾದಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದೀಗ ಮಹತ್ವದ ನಿರ್ಣಯ ಕೈಗೊಂಡಿದೆ.

ಕೊಡಗು ಪ್ರವಾಸಿತಾಣಗಳ ಮೇಲೆ ನಿರ್ಬಂಧ ಹೇರಿದ ಜಿಲ್ಲಾಡಳಿತ. ಏಪ್ರಿಲ್ 20ರ ವರೆಗೆ ಕೊಡಗು ಜಿಲ್ಲೆಗೆ ಪ್ರವಾಸಿಗರ ಭೇಟಿಯನ್ನ ಸಂಪೂರ್ಣವಾಗಿ ನಿಷೇಧ, ನಿಯಮ ಉಲಂಘಿಸಿದ್ರೆ ಕಠಿಣ ಕ್ರಮ. ಅಬ್ಬಾ…ಏನ್ ಸೆಕೆ… ಮನೆಯಲ್ಲಿ ಇರೋಕೆ ಆಗಲ್ಲಾ… ಕೊರೊನಾದಿಂದ ಹೊರಗೆ ಹೋಗೋಕು ಆಗಲ್ಲ… ಹೆಂಗೋ ಕೊಡಗು ಕಡೆ ಒಳ್ಳೆಯ ವೆದರ್ ಇದೆ, ಅಲ್ಲಿ ಕೊರೊನಾ ಕೇಸ್ ಕೂಡಾ ಕಡಿಮೆ ಇದೆ… ಇದೇ ಒಳ್ಳೆಯ ಛಾನ್ಸ್… ಒಂದೆರಡು ದಿನ ಮಡಿಕೇರಿ ಕಡೆ ಹೋಗಿ ತಂಪಾದ ಗಾಳಿ ಸೇವಿಸಿ ಬರುವ ಅಂತ ನೀವ್ ಯೋಚಿಸಿದ್ದೀರಾ… ಈಗಾಗಲೇ ನೀವೇನಾದರೂ ಕೊಡಗಿನಲ್ಲಿ ಹೋಮ್ ಸ್ಟೇ, ರೆಸಾರ್ಟ್ ಬುಕ್ ಮಾಡಿದ್ದೀರಾ… ನಿಮ್ಗೆ ನಾವ್ ಹೇಳುವ ವಿಷ್ಯ ತುಂಬಾನೇ ಬೇಜಾರ್ ತರಬಹುದು… ಯಾಕೆಂದರೆ , ಪ್ರವಾಸಿಗರ ಸ್ವರ್ಗ , ಕರ್ನಾಟಕದ ಸ್ಕಾಟ್ಲೆಂಡ್ ಅಂತ ಕರೆಸಿಕೊಳ್ಳುವ ಕೊಡಗಿನಲ್ಲಿ ಪ್ರವಾಸೋದ್ಯಮದ ಮೇಲೆ ಜಿಲ್ಲಾಡಳಿತ ಹೊಸ ನಿಯಮ ತಂದಿದೆ… ಇದು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಖಂಡಿತವಾಗಿಯೂ ಶಾಕ್ ತರಲಿದೆ…ಹೌದು, ಕೊಡಗು ಜಿಲ್ಲಾಡಳಿತ ಮುಂದಿನ ಮೂರು ವಾರದವರೆಗೆ ಪ್ರವಾಸೋದ್ಯಮವನ್ನ ಬಂದ್ ಮಾಡಲು ಆದೇಶ ನೀಡಿದೆ… ಏಪ್ರಿಲ್ 20ರ ವರೆಗೆ ಕೊಡಗು ಜಿಲ್ಲೆಗೆ ಪ್ರವಾಸಿಗರ ಭೇಟಿಯನ್ನ ಸಂಪೂರ್ಣವಾಗಿ ನಿಷೇಧಿಸಿದೆ… ಇಷ್ಟೇ ಸಾಲದು ಎಂಬಂತೆ ಒಂದು ವೇಳೆ ಹೊರಗಿನ ಪ್ರವಾಸಿಗರು ಕಾನೂನುಬಾಹಿರವಾಗಿ ಜಿಲ್ಲೆಗೆ ಎಂಟ್ರಿ ಕೊಟ್ಟು ಪ್ರವಾಸಿ ತಾಣಗಳಲ್ಲಿ ಕಂಡುಬಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ವಿಪತ್ತು ನಿರ್ವಹಣಾ ಕಾಯ್ದೆ (2005ರ ವಿಭಾಗ 51 ರಿಂದ 60 ಅನ್ವಯ ಐಪಿಸಿ ಸೆಕ್ಷನ್ 188) ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ (2020ರ ವಿಭಾಗ 4, 5 ಮತ್ತು 10 ರ ) ಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಎಚ್ಚರಿಕೆ ನೀಡಿದ್ದಾರೆ…ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಮುಂದಿನ ಮೂರು ವಾರದವರೆಗೆ ಪ್ರವಾಸಿಗರ ಭೇಟಿ ನೀಡುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ಕಳೆದೊಂದು ವರ್ಷದಲ್ಲಿ ಕೊರೊನಾ ತಂದಿರುವ ಫಜೀತಿ ಅಷ್ಟಿಷ್ಟಲ್ಲ… ಇನ್ನೇನು,ಈ ಕೊರೊನಾ ಮುಗಿಯುವ ಕಾಲ ಹತ್ತಿರವಾಗಿದೆ ಅಂತ ನಿಟ್ಟುಸಿರು ಬಿಡುವಾಗಲೇ ಈ ಮಹಾ ಮಾರಿ ಎರಡನೇ ಅಲೆಯಾಗಿ ಅಪ್ಪಳಿಸ್ತಾ ಇದೆ…ಕಾಫಿ ಕಣಿವೆಯಲ್ಲಿಯೂ ಮತ್ತೆ ಕೊರೊನಾತಂಕ ಶುರುವಾಗಿದೆ. ಅದ್ರಲ್ಲೂ ನೆರೆಯ ಕೇಳಳದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿರೋದ್ರಿಂದ ಎಲ್ಲರಲ್ಲೂ ಇದೀಗ ಮತ್ತೆ ಕೊರೊನಾ ಭಯ ಕಾಡಲಾರಂಭಿಸಿದೆ. ಹಾಗಾಗಿ ಕೊಡಗಿಗೆ ಆಗಮಿಸೋ ಪ್ರವಾಸಿಗರನ್ನ ತಡೆಯಲು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಂತಹ ಕಠಿಣ ಆದೇಶ ಹೊರಡಿಸಿದ್ದಾರೆ… ಪ್ರವಾಸೋದ್ಯಮ ಬಂದ್ ಆಗುವ ಬೆನ್ನಲ್ಲೇ ಮುಂದಿನ ಆದೇಶದವರೆಗೆ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳದ ರಾಜಾ ಸೀಟ್, ಅಬ್ಬಿ ಫಾಲ್ಸ್, ನಿಸರ್ಘಧಾಮ, ದುಬಾರೆ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳು ಬಂದ್ ಆಗಲಿದೆ…ಇದರ ಜೊತೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್ ರಿಪೋರ್ಟ್ ತಂದಮೇಲೆಯೇ ಉಳಿದುಕೊಳ್ಳಲು ಅವಕಾಶ ನೀಡುವಂತೆ ಹೋಮ್ ಸ್ಟೇ ಹಾಗೂ ರೆಸಾರ್ಟ್ ಮಾಲೀಕರಿಗೂ ಸೂಚನೆ ನೀಡಲಾಗಿದೆ.ಇನ್ನು,ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ. ನೆರೆ ರಾಜ್ಯದ ಪ್ರವಾಸಿಗರಿಂದಲೇ ಕೊಡಗಿನಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗ್ತಾ ಇದ್ಯಾ ಅನ್ನೋ ಆತಂಕ ಸ್ಥಳೀಯರನ್ನ ಕಾಡ್ತಾ ಇದೆ.

ಒಟ್ಟಿನಲ್ಲಿ, ವೀಕೆಂಡ್, ಸಮ್ಮರ್ ವೆಕೇಷನ್ ಅಂತ ಮಡಿಕೇರಿ ಕಡೆಗೆ ಟೂರ್ ಹೊರಟವರಿಗೆ ಜಿಲ್ಲಾಡಳಿತದ ಆದೇಶ ನಿರಾಸೆ ತಂದಿದೆ… ಆದೇಶ ಮೀರಿ ನೀವೇನಾದರೂ ಕೊಡಗಿಗೆ ಎಂಟ್ರಿ ಕೊಟ್ರೇ ನಿಮ್ಮ ಮೇಲೆ ಕೇಸ್ ಬೀಳೋದು ಪಕ್ಕಾ… ಹಾಗಾಗಿ ನೀವು ಕಾನೂನಿನ ಕೈಗೆ ಸಿಲುಕುವ ಮೊದಲು ಸ್ವಲ್ಪ ಯೋಚನೆ ಮಾಡೋದು ಒಳ್ಳೆಯದು.

Previous articleಸಿಎಂ ಕಾರ್ಯಕ್ರಮದಲ್ಲೇ ಕೊರೊನಾ ನಿಯಮ ಉಲ್ಲಂಘನೆ!
Next articleಕೊರೊನಾ ಸೋಂಕು ತಡೆಗೆ ರಾಜ್ಯಸರ್ಕಾರದಿಂದ ಟಫ್ ರೂಲ್ಸ್ ಜಾರಿ: ಪ್ರಜಾಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here