Home Health ಕೊಡಗು ಜಿಲ್ಲೆಯ ಕೊರೊನದ ಕಂಪ್ಲೀಟ್ ರಿಪೋರ್ಟ್

ಕೊಡಗು ಜಿಲ್ಲೆಯ ಕೊರೊನದ ಕಂಪ್ಲೀಟ್ ರಿಪೋರ್ಟ್

ಕೊಡಗು ಜಿಲ್ಲೆಯ ಕೊರೊನದ ಕಂಪ್ಲೀಟ್ ರಿಪೋರ್ಟ್

288
0

ವರದಿ: ಲೋಹಿತ್ ಎಂ.ಆರ್

ಕೊಡಗು ಜಿಲ್ಲೆಯಲ್ಲಿ ಕರೊನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾರಿಗೂ ಕಂಟ್ರೋಲ್ ಮಾಡದ ಹಾಗೆ ಹಬ್ಬತೋಡಗಿದೆ . ಜಿಲ್ಲಾಡಳಿತ ಆರೋಗ್ಯ ಅಧಿಕಾರಿಗಳು ಏನೆ ಮಾಡಿದ್ರು ತಡೆಗಟ್ಟಲು ಸಾಧ್ಯವಾಗುತ್ತಿಲ್ಲಾ. ಹಾಗಾದ್ರೆ ಇಲ್ಲಿ ನಿಜವಾಗಲು ಕೋವಿಡ್ ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಸ್ಪೇಡ್ರ್ ಆಗಲು ಕಾರಣ ಏನು? ಇದೆಲ್ಲವನ್ನ ತಡೆಗಟ್ಟಲು ಕೊಡಗು ಜಿಲ್ಲಾಡಳಿತ ತೆಗೆದುಕೊಂಡ ಕ್ರಮವಾದ್ರು ಏನು ಅಂತ್ತಿರ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಇಂದಿನಿಂದ ಕೊಡಗು ಲಾಕ್ ಡೌನ್, ವಾರದ ೫ ದಿನ ಸಂಪೂರ್ಣ ಸ್ಥಬ್ದವಾಗಲಿರುವ ಕೊಡಗು, ಅಗತ್ಯ ವಸ್ತುಗಳ ಖರಿದಿಗೆ ಕೇವಲ ಎರಡು ದಿನ‌ಮಾತ್ರ ಅವಕಾಶ. ಎಸ್ ಹಿಗೊಂದು ಮಹತ್ತರವಾದ ನಿರ್ಧಾರವನ್ನ ಕೊಡಗು ಜಿಲ್ಲಾಡಳಿತ ತೆಗೆದುಕೊಂಡಿದೆ. ಕೊಡಗು ಜಿಲ್ಲೆಯಲ್ಲಿ ಇಂದಿನಿಂದ ಕೊಡಗು ಸಂಪೂರ್ಣ ಲಾಕ್ ಆಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 500ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತ ಇದೆ. ಜಿಲ್ಲಾಡಳಿತ ಏನೆ ಕ್ರಮ‌ ಕೈಗೊಂಡ್ರು ಕೂಡ ನಿಂತ್ರಣಕ್ಕೆ ಬಾರದ ಪರಿಸ್ಥಿತಿ ಎದುರಾಗಿದೆ. ಹಿಗಾಗಿ ಜಿಲ್ಲಾಡಳಿತ ಜಿಲ್ಲೆಯನ್ನ ಸಂಪೂರ್ಣ ವಾಗಿ ೫ ದಿನ‌ ಬಂದ್ ಮಾಡಲು ಮುಂದಾಗಿರೋದು. ವಾರದ ಮಂಗಳವಾರ ಮತ್ತು ಶುಕ್ರವಾರ ಅಗತ್ಯ ವಸ್ತುಗಳ‌ ಖರಿಗೆ 6 ರಿಂದ 12 ಗಂಟೆಯವರೆ ಅವಕಾಶ ಕಲ್ಪಿಸಿದೆ. ಇನ್ನು ವಾರದ ಐದು ದಿನ ಪೇಪರ್, ಹಾಲು ಹಾಲಿನ ಉತ್ವನ್ನಗಳಿಗೆ 6ರಿಂದ 10 ಗಂಟೆಯವರೆಗೆ ಅವಕಾಶ ನಿಡಲಾಗಿದ್ದೆ ಇದನ್ನ ಹೋರತು ಪಡಿಸಿ ಬೇಕಾ ಬಿಟ್ಟಿ ಓಡಾಡುತ್ತಿರುವ ವಾಹನಗಳಿಗೆ ಪೊಲೀಸರು ದಂಡ ವಿದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಚಾರುಲತಾ ಸೋಮಲ್ ಕೊಡಗು ಜಿಲ್ಲಾಧಿಕಾರಿ ಮಾತನಾಡಿ ಕೋವಿಡ್ ಪಾಸಿಟಿವಿಟಿ ರೇಟ್ನಲ್ಲಿ ಕೊಡಗು ಜಿಲ್ಲೆಯೇ ನಂಬರ್ ಒನ್, ಹಬ್ಬ ಜಾತ್ರೆಗಳು, ಅದ್ದೂರಿ ವಿವಾಹಗಳೇ ಮುಳ್ಳಾಯ್ತು ಜಿಲ್ಲೆಗೆ. ಕಳೆದ ವಾರ ಬಿಡುಗಡೆಯಾಗಿದ್ದ ಕೋವಿಡ್ ಪಾಸಿಟಿವಿಟಿ ರೇಟ್ನಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ ಅಂತ ವರದಿ ಹೇಳ್ತಾ ಇದೆ. ಹೆಚ್ಚು ಪ್ರಬುದ್ಧರೇ ತುಂಬಿರೋ ಕೊಡಗಿನಲ್ಲಿ ಇಂತಹ ಎಡವಟ್ಟು ಹೇಗೆ ನಡೆಯಿತು ಅಂತ ಕಾರಣ ಹುಡುಕುತ್ತಾ ಹೊರಟಾಗ ಕಂಡು ಬಂದಿದ್ದು ಹಲವು ಆಘಾತಕಾರಿ ಅಂಶಗಳು ಹೌದು ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಇಷ್ಟೊಂದು ಸ್ಫೋಟವಾಗಲು ಕಾರಣ ಏಪ್ರಿಲ್ ತಿಂಗಳಿನಲ್ಲಿ ನಡೆದ ಹಬ್ಬ ಮತ್ತು ಜಾತ್ರೆಗಳು. ಜಿಲ್ಲೆಯ ಮೂಲೆ ಮೂಲೆಯಲ್ಲೂ ನೂರಾರು ಹಬ್ಬಗಳು ನಡೆದಿವೆ. ಜನ್ರೂ ಕೂಡ ಬಹಳ ಉತ್ಸಾಹದಿಂದ ಹಬ್ಬಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭ ಮಾಸ್ಕ್, ಸಾಮಾಜಿಕ ಅಂತರ ಮರೆತಿದ್ದಾರೆ. ಇದೇ ಕಾರಣದಿಂದಾಗಿ ವೈರಸ್ ಬಹಳ ವೇಗವಾಗಿ ಹರಡಿದೆ ಅದೂ ಅಲ್ದೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಹಳಷ್ಟು ಅದ್ದೂರಿ ವಿವಾಹಗಳೂ ನಡೆದಿವೆ. ಲಾಕ್ಡೌನ್ ಘೋಷಣೆಗೂ ಮೊದಲೇ ಈ ಮದುವೆಗಳು ನಡೆದಿವೆಯಾದ್ರಿಂದ ಯಾವುದೇ ನಿಯಂತ್ರಣಗಳು ಇರಲಿಲ್ಲ. .ನೆಪ ಮಾತ್ರಕ್ಕೆ ಕಾನೂನುಗಳ ಪಾಲನೆಯಾದ್ವು. 50 ಜನ್ರು ಸೇರೋ ಜಾಗದಲ್ಲಿ 500 ಮಂದಿ ಸೇರಿದ್ದರು. ಜೊತೆಗೆ ಲಾಕ್ಡೌನ್ ಘೋಷಣೆಯಾಗ್ತಲೇ ಹೊರ ಜಿಲ್ಲೆಗಳಲ್ಲಿ ನೆಲೆಸಿರೋ ಕೊಡಗಿನ ಮಂದಿ ಸಾಗರೋಪಾದಿಯಲ್ಲಿ ಜಿಲ್ಲೆಗೆ ಮರಳಿದ್ದಾರೆ. ಬರುತ್ತಲೇ ವೈರಸ್ ಹೊತ್ತು ತಂದು ಹರಡಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಇದು ಸಹಜವಾಗಿಯೇ ಜಿಲ್ಲೆಯ ನಾಗರಿಕರಲ್ಲಿ ಬಹಳ ಆತಂಕ ಮೂಡಿಸಿದೆ

ಒಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಜಿಲ್ಲಾಡಳಿತ ಬಹಳ ಕಷ್ಟಪಟ್ಟು ಕೊರೊನಗೆ ಕಡಿವಾಣ ಹಾಕಿತ್ತು ಆದ್ರೆ ಈ ಬಾರಿಯ ಎರಡನೆ ಅಲೆ ಮಾತ್ರ ಹೆಚ್ಚು ಯುವಕರನ್ನೆ ಬಲಿ ಪಡೆದುಕೊಳ್ಳತ್ತಾ ಇದೆ. ಇದೆಲ್ಲಾವನ್ನ ಮಟ್ಟ ಹಾಕಲು ಕೊಡಗು ಜಿಲ್ಲಾಡಳಿತ ಕೊಡಗು ಲಾಕ್ ಡೌನ್ ಮಾಡಿದೆ ಇನ್ನಾದ್ರು ಕೊಡಗು ಜಿಲ್ಲೆಯಲ್ಲಿ ಕೋವಿಡ್ ಕಂಟ್ರೋಲ್ ಗೆ ಬರುತ್ತಾ ಇಲ್ಲಾ ಇದೆ ರೀತಿ ಮುಂದುವರೆಯುತ್ತಾ ಅಂತ ಕಾದು‌ನೊಡಬೇಕಿದೆ.

VIAಕೊಡಗು ಜಿಲ್ಲೆಯ ಕೊರೊನದ ಕಂಪ್ಲೀಟ್ ರಿಪೋರ್ಟ್
SOURCEಕೊಡಗು ಜಿಲ್ಲೆಯ ಕೊರೊನದ ಕಂಪ್ಲೀಟ್ ರಿಪೋರ್ಟ್
Previous articleಕೊಡಗಿನಲ್ಲಿ ಹೆಚ್ಚಿದ ಕೊರೋನಾ; ಈ ಕುರಿತು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದೇನು?
Next articleಕೆಲಸದಲ್ಲಿ ಇಷ್ಠವಿಲ್ಲದ ಸಚಿವರು ರಾಜೀ‌ನಾಮೆ ಕೊಟ್ಟು ಮನೆಗೆ ಹೋಗಿ; ರೇಣುಕಾಚಾರ್ಯ ವಾಗ್ದಾಳಿ

LEAVE A REPLY

Please enter your comment!
Please enter your name here