ಪಾಕಿಸ್ತಾನ ಕ್ರಿಕೆಟ್ ಲೀಗ್ ನಲ್ಲಿ ರಾರಾಜಿಸಿದ ಕೊಹ್ಲಿ ಫೋಟೊ..!

ಕ್ರೀಡೆ

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದೇ ರೀತಿ ಭಾರತದ ಬದ್ಧವೈರಿ ಎನಿಸಿಕೊಂಡಿರುವ ಪಾಕಿಸ್ತಾನದಲ್ಲೂ ಕೂಡ ಸಾಕಷ್ಟು ಅಭಿಮಾನಿಗಳಿದ್ದು, ಇದೀಗ ಪಾಕಿಸ್ತಾನದಲ್ಲಿ ನಡೆಯುತ್ತಿ ರುವ ಪಾಕಿಸ್ತಾನ ಕ್ರಿಕೆಟ್ ಲೀಗ್ (PSL) ನಲ್ಲಿ ಅಭಿಮಾನಿಗಳು ಕೊಹ್ಲಿ ಪೋಸ್ಟರ್ ಹಿಡಿದುಕೊಂಡು ಸಂಭ್ರಮಿಸುತ್ತಿದ್ದಾರೆ. ಪ್ರೀತಿ ಗಾಗಿ ಕ್ರೀಡೆ, ಸೌಹಾರ್ದತೆಗಾಗಿ ಕ್ರೀಡೆ ಎಂಬ ಮಾತು ಮತ್ತೊಮ್ಮೆ ಕ್ರಿಕೆಟ್‍ನಲ್ಲಿ ಕಂಡುಬಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಸಂಬಂಧ ಅಷ್ಟಕಷ್ಟೇ ಇದ್ದರೂ ಕೂಡ ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ಅಭಿಮಾನಿಗಳು ಗಡಿರೇಖೆ ಮೀರಿ ಪ್ರೀತಿಸುತ್ತಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿಎಸ್‍ಎಲ್ ಲೀಗ್‍ನಲ್ಲಿ ಕ್ರಿಕೆಟ್ ಪ್ರಿಯರು ಕೊಹ್ಲಿ ಆಡಬೇಕೆಂದು ಆಗ್ರಹಿಸಿದ್ದಾರೆ. ಪಿಎಸ್‍ಎಲ್‌ನಲ್ಲಿ ವಿರಾಟ್ ಸೆಂಚುರಿಯನ್ನು ನೋಡಬೇಕು, ಕೊಹ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಬನ್ನಿ ಎಂಬ ಪೋಸ್ಟರ್‌ಗಳು ಕಂಡುಬಂದಿದೆ. ಇದೀಗ ಈ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ. ಈ ಹಿಂದೆ ಅಭಿಮಾನಿಗಳು ನಮಗೆ ಭಾರತ ಕಾಶ್ಮೀರವನ್ನು ಕೊಡುವುದು ಬೇಡ, ವಿರಾಟ್ ಕೊಹ್ಲಿಯನ್ನು ಕೊಡಲಿ ಎಂಬ ಪೋಸ್ಟರ್ ಒಂದು ಭಾರೀ ಸದ್ದು ಮಾಡಿತ್ತು.

Leave a Reply

Your email address will not be published.