ಕೆಪಿಟಿಸಿಎಲ್ ಕಾಮಗಾರಿ: ಬೆಂಗಳೂರು ಮಂದಿಗೆ ಆಗಸ್ಟ್ ತಿಂಗಳಲ್ಲಿ ಪವರ್ ಸಮಸ್ಯೆ

ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರು ಮಂದಿಗೆ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆ ಎದುರಾಗಲಿದೆ. ಕೆಪಿಟಿಸಿಎಲ್ ಕಾಮಗಾರಿಯಿಂದಾಗಿ ಆಗಸ್ಟ್‌ನಲ್ಲಿ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆ ಇದೆ.  ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಆಗಸ್ಟ್‌ನಲ್ಲಿ ಕೈಗೊಳ್ಳಲಿರುವ ಮುಂಬರುವ ಕಾಮಗಾರಿಗಳನ್ನು ಬೆಸ್ಕಾಂ, ಬೆಂಗಳೂರು ನಗರದ ವಿದ್ಯುಚ್ಛಕ್ತಿ ವ್ಯವಸ್ಥಾಪಕರು ನವೀಕರಿಸಿದ್ದಾರೆ. ಕೆಪಿಟಿಸಿಎಲ್, ಈ ಕಾಮಗಾರಿಯನ್ನು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕೈಗೊಳ್ಳುರಿದ್ದಾರೆ. ಹೀಗಾಗಿ ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿಯ ಪ್ರಕಾರ,

ಈ ತಿಂಗಳು ಪೂರ್ತಿ ಅಂದರೆ ಆಗಸ್ಟ್ 1 ರಿಂದ ಆಗಸ್ಟ್ 28 ರವರೆಗೆ ತಿಂಗಳ ಎಲ್ಲಾ ದಿನಗಳಲ್ಲಿ ಕಾಮಗಾರಿ ಕಾರ್ಯ ನಡೆಯುತ್ತಿದ್ದು ಆಗಸ್ಟ್ ನಲ್ಲಿ ವಿದ್ಯುತ್ ಸೇವೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ. ವೈಟ್‌ಫೀಲ್ಡ್ ವಿಭಾಗದಲ್ಲಿ ಸುಮಾರು 57 ಗಂಟೆಗಳ ಕಾಲ ಕಾಮಗಾರಿ ನಡೆಯಲಿದ್ದು ಇದಕ್ಕೆ ಮೂರು ದಿನಗಳಿಂದ ಏಳು ದಿನಗಳಾಗಬಹುದು. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಇದಕ್ಕೆ ಪರ್ಯಾಯ ವಿದ್ಯುತ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಆದರೂ ವಿದ್ಯುತ್ ವ್ಯತ್ಯಯವಾಗಲಿದೆ. ಬೆಂಗಳೂರಿನಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿಗಮ ಒಪ್ಪಿಗೆ ನೀಡಿದೆ. ಯೋಜನೆಗಳು ತಡೆಗಟ್ಟುವ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ ನಿರ್ವಹಣಾ ಕಾರ್ಯಗಳನ್ನು ಒಳಗೊಂಡಿವೆ.

Leave a Reply

Your email address will not be published.