Home Health ಕೋವಿಡ್ ಗೆ ತುತ್ತಾದ ಪ್ರತಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು; ಸಮಾಜ ಪಕ್ಷದ...

ಕೋವಿಡ್ ಗೆ ತುತ್ತಾದ ಪ್ರತಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು; ಸಮಾಜ ಪಕ್ಷದ ಎಮ್. ಕೃಷ್ಣಮೂರ್ತಿ ಆಗ್ರಹ

ಕೋವಿಡ್ ಗೆ ತುತ್ತಾದ ಪ್ರತಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು; ಸಮಾಜ ಪಕ್ಷದ ಎಮ್ ಕ್ರಷ್ಣಮೂರ್ತಿ ಆಗ್ರಹ

321
0

ಚಾಮರಾಜನಗರ: ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಗೆ ತುತ್ತಾದ ಪ್ರತಿ ಕುಟುಂಬ ವರ್ಗದವರಿಗೆ ಸರ್ಕಾರ 25 ಲಕ್ಷ ಪರಿಹಾರ ನೀಡ ಬೇಕು ಎಂದು ಬಹುಜನ ಸಮಾಜ ಪಕ್ಷದ ಎಮ್ ಕೃಷ್ಣಮೂರ್ತಿ ಆಗ್ರಹಿಸಿದರು.

ಕಳೆದ ವರ್ಷ ಕೋರೊನಾ ಮಹಾಮಾರಿಯಿಂದ ದೂರವಾಗಿದ್ದು ಹಸಿರು ವಲಯವಾಗಿದ್ದ ಚಾಮರಾಜನಗರ ಈ ವರ್ಷ ಕೋರೊನಾ ರಣಕೇಕೆಯ ನಡುವೆ ಸೋಂಕಿತರ ಮರಣ ಮೃದಂಗ ನಡೆದೇ ಹೋಯ್ತು.ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆಯ ಪಕ್ಕದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. ಇಲ್ಲಿ ಜಿಲ್ಲೆಯ ಕೋರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದೇನೆ ಬಂತೋ ತಿಳಿಯದು ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೋರೊನಾ ಸೋಂಕಿತರಿಗೆ ಸಾವಿನ ದಾರಿ ಕಾದಿತ್ತು.

ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೂಂದಿಗೆ ಮಾತನಾಡಿ ಎಂ ಕೃಷ್ಣಮೂರ್ತಿ ಮಾತನಾಡಿ ಈಘಟನೆಗೆ ಸಂಬಂದಿಸಿದಂತೆ ತನಿಖೆ ನಡೆಸಲು ಬಿ.ಎಸ್ ಯಡಿಯೂರಪ್ಪ ರವರ ಆಪ್ತ ಶಿವಯೋಗಿ ಕಳಸದ್ ಗೆ ನೇಮಕ ಮಾಡಲಾಗಿದೆ ಇದು ಸರಿಯಾದ ಕ್ರಮವಲ್ಲ.

24 ಜನರ ಮಾರಣಹೂಮ ವಾಗಿದೆ ಎಂದು ಸುಳ್ಳು ಹೇಳುತ್ತಿದ್ದು ಸತ್ಯ ಎನೇಂದರೆ 34 ಜನರು ಮೃತಪಟ್ಟಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಸಮಿತಿಗಳಲ್ಲಿ ತನಿಖೆ ನಡೆಸವೇಕು. ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಹರ್ಷಗುಪ್ತ. ಶಿಖಾ, ರಶ್ಮಿಮಹೇಶ್ ನಂತಹ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಪ್ಪಿದ್ದಾರೆಂದ ಮೇಲೆ ಡಿಹೆಚ್ಓ, ಡೀನ್ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಈ ಜಿಲ್ಲೆಯಲ್ಲಿ ಇಂತಹ ಬೇಜವಾಬ್ದಾರಿತನದಿಂದ ವರ್ತಿಸಿದ ಉಸ್ತುವಾರಿ ಸಚಿವ, ಆರೋಗ್ಯ ಸಚಿವ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

VIAಕೋವಿಡ್ ಗೆ ತುತ್ತಾದ ಪ್ರತಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು; ಸಮಾಜ ಪಕ್ಷದ ಎಮ್ ಕ್ರಷ್ಣಮೂರ್ತಿ ಆಗ್ರಹ
SOURCEಕೋವಿಡ್ ಗೆ ತುತ್ತಾದ ಪ್ರತಿ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು; ಸಮಾಜ ಪಕ್ಷದ ಎಮ್ ಕ್ರಷ್ಣಮೂರ್ತಿ ಆಗ್ರಹ
Previous articleಕೋಟೆ ನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ!
Next articleಕೊರೊನಾ ವೈರಸ್ ಹರಡುವ ಭೀತಿಯೇ ಇಲ್ಲದಂತೆ ವರ್ತಿಸುತ್ತಿರುವ ಜನ!

LEAVE A REPLY

Please enter your comment!
Please enter your name here