Home Health ಮೂರು ದಿನಕ್ಕೆ 3 ಹೆಣ ಬಿದ್ದಿದೆ ಸ್ವಾಮಿ, ನಮ್ಮನ್ನ ಕಾಪಾಡಿ; ಕೈಮುಗಿದು ಗೋಗರೆದ ಮಹಿಳೆ!

ಮೂರು ದಿನಕ್ಕೆ 3 ಹೆಣ ಬಿದ್ದಿದೆ ಸ್ವಾಮಿ, ನಮ್ಮನ್ನ ಕಾಪಾಡಿ; ಕೈಮುಗಿದು ಗೋಗರೆದ ಮಹಿಳೆ!

ಮೂರು ದಿನಕ್ಕೆ 3 ಹೆಣ ಬಿದ್ದಿದೆ ಸ್ವಾಮಿ, ನಮ್ಮನ್ನ ಕಾಪಾಡಿ; ಕೈಮುಗಿದು ಗೋಗರೆದ ಮಹಿಳೆ!

1093
0

ಚಿಕ್ಕಮಗಳೂರು : ಮೂರು ದಿನಕ್ಕೆ 3 ಹೆಣ ಬಿದ್ದಿದೆ ಸ್ವಾಮಿ, ನಮ್ಮನ್ನ ಕಾಪಾಡಿ.ಮನೆಯಲ್ಲಿ ಒಂದೊಂದೇ ಮಕ್ಕಳಿರೋದು ನಮ್ಮನ್ನ ಉಳಿಸಿ.ಅಧಿಕಾರಿಗಳಿಗೆ ಕೈಮುಗಿದು ಬೇಡಿಕೊಂಡ ಮಹಿಳೆ.

ಸಾವು ನೋವು ಕಂಡು ನಂದಿಹೊಸಳ್ಳಿ ಗ್ರಾಮದ ಮಹಿಳೆಯ ಅಳಲು.ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮ.ಮನೆ ಹಿತ್ತಲಲ್ಲಿ ಸೋಂಕಿತೆ ಸತ್ತು ಮೂರು ಗಂಟೆಯಾಯ್ತು.ಮೂರು ಗಂಟೆ ಕಳೆದ್ರೂ ಸ್ಥಳಕ್ಕೆ ಬಾರದ ಆರೋಗ್ಯ ಇಲಾಖೆ ಸಿಬ್ಬಂದಿ.ಆರೋಗ್ಯ ಇಲಾಖೆ ನಮಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರ ಅಳಲು.

ಮೃತದೇಹದ ಬಳಿ ಹೋಗಲು ಸ್ಥಳೀಯರಲ್ಲೂ ಭಯ.ಸುಂದರಮ್ಮ (45) ಮನೆ ಹಿತ್ತಲಲ್ಲಿ ಸಾವು.ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದ ಸುಂದರಮ್ಮ‌ ಸಹೋದರ ಕೃಷ್ಣಪ್ಪ.ನಿನ್ನೆ ಕೂಡ ಗ್ರಾಮದ ಗಂಗಾಧರಪ್ಪ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು.ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರ ಆಕ್ರೋಶ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು.

ಇದೊಂದು ರೀತಿಯಾದರೆ ಇತ್ತ, ಚಾಮರಾಜನಗರ ಪಟ್ಟಣದ 55 ವರ್ಷದ ಮಹಿಳೆ, ತಾಲ್ಲೂಕಿನ ಕೆ.ಕೆ. ಹುಂಡಿ ಗ್ರಾಮದ 52 ವರ್ಷದ ಪುರುಷ, ಅಮಚವಾಡಿ ಗ್ರಾಮದ 39 ವರ್ಷದ ಪುರುಷ, ವಿ.ಸಿ.ಹೊಸೂರು ಗ್ರಾಮದ 38 ವರ್ಷದ ಮಹಿಳೆ, ಗುಂಡ್ಲುಪೇಟೆ ಪಟ್ಟಣದ 33 ವರ್ಷದ ಪುರುಷ, ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ 45 ವರ್ಷದ ಮಹಿಳೆ, ಕೊಳ್ಳೇಗಾಲ ಪಟ್ಟಣದ 75 ವರ್ಷದ ಪುರುಷ, 64 ವರ್ಷದ ಪುರುಷ, 58 ವರ್ಷದ ಮಹಿಳೆ, ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ 50 ವರ್ಷದ ಪುರುಷ, ಪಿಜಿ.ಪಾಳ್ಯ ಗ್ರಾಮದ 55 ವರ್ಷದ ಪುರುಷ, ಕೊಂಗರಹಳ್ಳಿ (ಕಾಮಗೆರೆ ) ಗ್ರಾಮದ 58 ವರ್ಷದ ಪುರುಷ, ಸಾವನ್ನಪ್ಪಿದ್ದಾರೆ. ಇದೂವರೆಗೂ 237 ಕೋವಿಡ್ ಸೋಂಕಿತರು ಮೃತಪಟ್ಟಿದ್ದರೆ, ದೃಡೀಕೃತ ಕೋವಿಡ್ ಪಾಸಿಟೀವ್ ರೋಗಿಯು ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಮೂರು ದಿನಕ್ಕೆ 3 ಹೆಣ ಬಿದ್ದಿದೆ ಸ್ವಾಮಿ, ನಮ್ಮನ್ನ ಕಾಪಾಡಿ; ಕೈಮುಗಿದು ಗೋಗರೆದ ಮಹಿಳೆ!
SOURCEಮೂರು ದಿನಕ್ಕೆ 3 ಹೆಣ ಬಿದ್ದಿದೆ ಸ್ವಾಮಿ, ನಮ್ಮನ್ನ ಕಾಪಾಡಿ; ಕೈಮುಗಿದು ಗೋಗರೆದ ಮಹಿಳೆ!
Previous articleಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆ; ಶವ ಪತ್ತೆ!
Next articleಮಾಜಿ ಸಚಿವ ಕೆಬಿ ಶಾಣಪ್ಪ ಕೊರೋನಾಗೆ ಬಲಿ!

LEAVE A REPLY

Please enter your comment!
Please enter your name here