ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಮತ್ತೆ ಬಹಿಷ್ಕಾರದ ಬಿಸಿ: ಭಾರತೀಯ ಸೇನೆಗೆ ಅವಮಾನ ಮಾಡಿದ್ರಾ ಅಮೀರ್ ಖಾನ್

ಚಲನಚಿತ್ರ

ಬಾಲಿವುಡ್ ನಟ ಅಮೀರ್ ಖಾನ್ ಆಡಿದ್ದರು ಎಂಬ ಮಾತಿನಿಂದ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಾಯ್ ಕಾಡ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿತ್ತು. ಈ  ಮಧ್ಯೆಯೂ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಅದ್ವೈತ್ ಚಂದನ್ ನಿರ್ದೇಶನದ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸಿನಿಮಾಗೆ ವಿವಾದಗಳು ಮಾತ್ರ ನಿಂತಿಲ್ಲ.

ಸಿನಿಮಾ ರಿಲೀಸ್ ಗೂ ಮುನ್ನ ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು. ಸಿನಿಮಾ ರಿಲೀಸ್ ಆದ ಮೇಲೂ ಈ ಬಾಯ್ ಕಾಟ್ ಕೂಗು ನಿಂತಿಲ್ಲ. ಈ ಹಿಂದೆ ಆಮೀರ್ ಖಾನ್ ಹೇಳಿದ ಅಸಹಿಷ್ಣತೆ ಹೇಳಿಕೆ ಸದ್ದು ಮಾಡಿದ್ದಾರೆ. ಈ ಬಾರಿ ಸಿನಿಮಾದ ಕಟೆಂಟ್ ಕಾರಣದಿಂದಾಗಿ ಚಿತ್ರಕ್ಕೆ ಮತ್ತೆ ವಿವಾದ ಅಂಟಿಕೊಂಡಿದೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್ ಬಹಿಷ್ಕಾರ ಹಾಕಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಮಾಂಟಿ ಪನೇಸರ್, ಭಾರತೀಯ ಸೇನೆಗೆ ಮತ್ತು ಸಿಖ್ ಸಮುದಾಯಕ್ಕೆ ಅವಮಾನ ಮಾಡುವಂತಹ ಕಥೆ ಈ ಸಿನಿಮಾದಲ್ಲಿದೆ. ಹಾಗಾಗಿ ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಮೂಲತಃ ಪಂಜಾಬಿನವರಾದ ಮಾಂಟಿ ಪನೇಸರ್ ಇಂಗ್ಲೆಂಡ್ ಪರವಾಗಿ ಕ್ರಿಕೆಟ್ ಆಡಿದವರು. ಈಗಲೂ ಭಾರತ ಮತ್ತು ಇಲ್ಲಿನ ಸಂಸ್ಕೃತಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದು ಇದೇ ಕಾರಣಕ್ಕೆ ಅಮೀರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅರೆಜ್ಞಾನ ಹೊಂದಿದ ಸಿಖ್ ಒಬ್ಬ ಭಾರತೀಯ ಸೇನೆಗೆ ಸೇರುತ್ತಾನೆ ಎಂದು ಸಿನಿಮಾದಲ್ಲಿ ಆಮೀರ್ ತೋರಿಸುವ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published.